ಐಎಂಎ ಹಗರಣ: ರೋಷನ್ ಬೇಗ್ ಆಸ್ತಿಗಳ ಮೌಲ್ಯಮಾಪನ; ಸರ್ಕಾರದಿಂದ ಹೈಕೋರ್ಟ್ ಗೆ ಮಾಹಿತಿ
ಠೇವಣಿದಾರರ ಹಿತಾಸಕ್ತಿ ಕಾಪಾಡುವ ಸಲುವಾಗಿ ಐಎಂಎ ಹಗರಣ ಪ್ರಕರಣದಲ್ಲಿ ಮಾಜಿ ಸಚಿವ ಆರ್ ರೋಶನ್ ಬೇಗ್ ಅವರ ಸ್ಥಿರ ಹಾಗೂ ಚರಾಸ್ತಿಗಳನ್ನು ಲಗತ್ತಿಸಲು ಎರಡು ಅಧಿಸೂಚನೆಗಳನ್ನು ಹೊರಡಿಸಲಾಗಿದೆ ಎಂದು ರಾಜ್ಯ ಸರ್ಕಾರ ಮಂಗಳವಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಬೆಂಗಳೂರು: ಠೇವಣಿದಾರರ ಹಿತಾಸಕ್ತಿ ಕಾಪಾಡುವ ಸಲುವಾಗಿ ಐಎಂಎ ಹಗರಣ ಪ್ರಕರಣದಲ್ಲಿ ಮಾಜಿ ಸಚಿವ ಆರ್ ರೋಶನ್ ಬೇಗ್ ಅವರ ಸ್ಥಿರ ಹಾಗೂ ಚರಾಸ್ತಿಗಳನ್ನು ಲಗತ್ತಿಸಲು ಎರಡು ಅಧಿಸೂಚನೆಗಳನ್ನು ಹೊರಡಿಸಲಾಗಿದೆ ಎಂದು ರಾಜ್ಯ ಸರ್ಕಾರ ಮಂಗಳವಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ವಿಭಾಗೀಯ ಪೀಠದ ಮುಂದೆ ಸರ್ಕಾರ ಈ ಮಾಹಿತಿ ನೀಡಿದ್ದು ಬೇಗ್ ಅವರ ಆಸ್ತಿಗಳನ್ನು ಲಗತ್ತಿಸಲು ಎರಡು ಅಧಿಸೂಚನೆಗಳನ್ನು ನೀಡಲಾಗಿದೆ, ಐಎಂಎ ಪ್ರಕರಣಗಳ ಸಮರ್ಥ ಪ್ರಾಧಿಕಾರ ಮತ್ತು ವಿಶೇಷ ಅಧಿಕಾರಿ ಹರ್ಷ್ ಗುಪ್ತಾ ಸಲ್ಲಿಸಿದ ವರದಿ ಪರಿಗಣಿಸಿ ಸಿಬಿಐನಿಂದ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ಅದು ಹೇಳಿದೆ.
ಚರಾಸ್ತಿಗಳ ಮೌಲ್ಯವನ್ನು ಹರಾಜಿನ ಸಮಯದಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ. ಸೈಟ್‌ಗಳು ಮತ್ತು ವಾಣಿಜ್ಯ ಸಂಕೀರ್ಣಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯವನ್ನು ಉಪ-ರಿಜಿಸ್ಟ್ರಾರ್ ಸಹಾಯದಿಂದ ನಿರ್ಧರಿಸಲಾಗುವುದು. ದಾಖಲೆಗಳಲ್ಲಿ ಉಲ್ಲೇಖಿಸಲಾದ ಮೌಲ್ಯವು 2018 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬೇಗ್ ತನ್ನ ಅಫಿಡವಿಟ್ ಸಲ್ಲಿಸುವಾಗ ಪ್ರಸ್ತಾಪಿಸಿದ್ದಾಗಿದೆ ಎಂದು ಸರ್ಕಾರ ಹೇಳಿದೆ.
ಸಾವಿರಾರು ಠೇವಣಿದಾರರ ಹಿತಾಸಕ್ತಿ ಕಾಪಾಡಲು ನ್ಯಾಯಾಲಯದಿಂದ ಪದೇ ಪದೇ ನಿರ್ದೇಶನ ನೀಡಿದ ನಂತರ ಸರ್ಕಾರ ಈ ಕ್ರಮ ಅನುಸರಿಸಿದೆ.
ಇದಲ್ಲದೆ ಅಗ್ರ 100 ಠೇವಣಿದಾರರಿಗೆ ಪಾವತಿಸಿದ ಹೆಚ್ಚುವರಿ ಮೊತ್ತವನ್ನು ಲಗತ್ತಿಸಲು ಮತ್ತೊಂದು ಅಧಿಸೂಚನೆಯನ್ನು ಹೊರಡಿಸಿದೆ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಹೆಚ್ಚುವರಿ ಠೇವಣಿ ಮೊತ್ತಕ್ಕಿಂತ ಹೆಚ್ಚಿನದನ್ನು ಆವರ್ತಕ ಆದಾಯದ ರೂಪದಲ್ಲಿ ಠೇವಣಿದಾರರಿಗೆ ಪಾವತಿಸಲಾಗಿದೆ. ಐಎಂಎನಲ್ಲಿ 85.89 ಕೋಟಿ ರೂ. ಠೇವಣಿ ಇಟ್ಟ ಅಗ್ರ 100 ಜನರಿಗೆ 137.55 ಕೋಟಿ ರೂ ಪಾವತಿಸಲಾಗಿದ್ದು ಇದರಲ್ಲಿ 62.26 ಕೋಟಿ ರೂ.ಗಳನ್ನು ಇತರ ಠೇವಣಿದಾರರು ಠೇವಣಿ ಇಟ್ಟ ಹಣದಿಂದ ಪಾವತಿಸಲಾಗಿದೆಯೆ ಹೊರತು ಯಾವುದೇ ಆದಾಯ ಅಥವಾ ಲಾಭದಾಯಕ ವ್ಯಾಪಾರ ಚಟುವಟಿಕೆಯಿಂದ ಅಲ್ಲ,
ಕೆಲವು ಚರಾಸ್ತಿಗಳ ಹಾಗೂ ಸ್ಥಿರಾಸ್ತಿಗಳ ವಿವರಗಳು
- 2.03 ಕೋಟಿ ರೂ.ಗಳ ಮೌಲ್ಯದ ಬೇಗ್, ಅವರ ಪತ್ನಿ ಮತ್ತು ಅವರ ಒಡೆತನದ ಸಂಸ್ಥೆಗಳ 6 ಬ್ಯಾಂಕುಗಳ ನಗದು ಬಾಕಿ
- 6.80 ಲಕ್ಷ ರೂ ಮೌಕದ ಶೇರುಗಳು
- 42.40 ಲಕ್ಷ ರೂ ಮೌಲ್ಯದ ಚಿನ್ನ ಹಾಗೂ ಬೆಳ್ಳಿ
- 8.91 ಕೋಟಿ ರೂ ಮೌಕ್ಯದ ಮೂರು ಸೈಟ್ ಗಳು
- 1.73 ಕೋಟಿ ಮೌಲ್ಯದ 2 ವಾಣಿಜ್ಯ ಸಂಕೀರ್ಣಗಳು
- 3.64 ಕೋಟಿ ರೂ ಮೌಲ್ಯದ ಎರಡು ಮನೆಗಳು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


