ಅಪಘಾತದ ಘಟನೆಯನ್ನು ತಿರುಚಿ ಚಿದಾನಂದ ಸವದಿ ಮೋಸ ಮಾಡಿದ್ದಾರೆ: ಮೃತ ರೈತನ ಸಂಬಂಧಿಕರ ಆಕ್ರೋಶ
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಯವರ ಹಿರಿಯ ಪುತ್ರ ಚಿದಾನಂದ ಸವದಿಯವರ ಕಾರು ಅಪಘಾತಕ್ಕೀಡಾಗಿ ಬಾಗಲಕೋಟೆಯ ರೈತ ಮೃತಪಟ್ಟಿರುವ ಘಟನೆ ಸಂಬಂಧ ಮೃತರ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ.

ಬಾಗಲಕೋಟೆ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಯವರ ಹಿರಿಯ ಪುತ್ರ ಚಿದಾನಂದ ಸವದಿಯವರ ಕಾರು ಅಪಘಾತಕ್ಕೀಡಾಗಿ ಬಾಗಲಕೋಟೆಯ ರೈತ ಮೃತಪಟ್ಟಿರುವ ಘಟನೆ ಸಂಬಂಧ ಮೃತರ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ.
ಮಂತ್ರಿಗಳ ಮಕ್ಕಳು ತಮ್ಮ ರಾಜಕೀಯ ಪ್ರಭಾವ ಬಳಸಿಕೊಂಡು ಸಾಕ್ಷಿಗಳನ್ನು ನಾಶಪಡಿಸಲು ನೋಡುತ್ತಿದ್ದಾರೆ, ಅವರು ಕಾರಿನ ನಂಬರ್ ಪ್ಲೇಟ್ ನ್ನು ಜಖಂಗೊಳಿಸಿದ್ದಲ್ಲದೆ, ಆವಾಜ್ ಹಾಕಿದ್ದಾರೆ, ಘಟನೆಯನ್ನು ಸೆರೆಹಿಡಿಯಲು ಯತ್ನಿಸಿದವರ ಮೊಬೈಲ್ ಗಳನ್ನು ಕಿತ್ತುಕೊಂಡಿದ್ದಾರೆ ಎಂದು ಮೃತರ ಸಂಬಂಧಿ ಆರೋಪಿಸಿದ್ದಾರೆ.
ಬಾಗಲಕೋಟೆಯ ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿ ಮೃತ ಕೂಡಲೆಪ್ಪ ಬೋಳಿ ಅವರ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಅವರ ಸಂಬಂಧಿಕ ಸಿದ್ದಪ್ಪ ಮಾತನಾಡಿ, ಇವರಿಗೆ ಬಡವರು, ಜನಸಾಮಾನ್ಯರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಚಿದಾನಂದ ಸವದಿಯವರು ತಮ್ಮ ಗಾಡಿಯ ನಂಬರ್ ಪ್ಲೇಟ್ ನ್ನು ಮುರಿದು ಅದರಲ್ಲಿರುವ ದಾಖಲೆಗಳನ್ನು ಮತ್ತು ಜನರನ್ನು ಮುಂದಿನ ಗಾಡಿಗೆ ಹಾಕಿ ಕಳುಹಿಸಿದ್ದಾರೆ. ಅಪಘಾತವಾದ ಕಾರಿನ ಫೋಟೋ, ವಿಡಿಯೊ ಸೆರೆಹಿಡಿಯುತ್ತಿದ್ದವರಿಗೆ ಬೈದು ಮೊಬೈಲ್ ಕಿತ್ತುಕೊಂಡರು, ಪೊಲೀಸರು ಬರುವ ಹೊತ್ತಿಗೆ ಪರಾರಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಲಕ್ಷ್ಮಣ ಸವದಿಯವರ ಕಡೆಯವರು ಮೃತರ ಶವವನ್ನು ಶವಾಗಾರಕ್ಕೆ ಕರೆದುಕೊಂಡು ಹೋಗಿ ಮರಣೋತ್ತರ ಪರೀಕ್ಷೆ ಮುಗಿಯುವವರೆಗೆ ಇರಬೇಕಾಗಿತ್ತು. ಆದರೆ ಅವರ ಕಡೆಯವರು ಇಂದು ಯಾರೂ ಇಲ್ಲ, ಬಡವರಿಗೆ ಮೋಸ, ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಲಕ್ಷ್ಮಣ ಸವದಿ ಹಿರಿಯ ಮಗ ಚಿದಾನಂದ ಸವದಿ ಸೇರಿ 12 ಜನರು 2 ಕಾರಿನಲ್ಲಿ ಪ್ರವಾಸಕ್ಕೆ ತೆರಳಿ ವಾಪಸಾಗ್ತಿದ್ರು. ವಿಜಯಪುರ ಮಾರ್ಗವಾಗಿ ತೆರಳ್ತಿದ್ದ ಚಿದಾನಂದ ಅವರ ಕಾರು ಹೊಲದಿಂದ ವಾಪಸಾಗುತ್ತಿದ್ದ ಬೈಕ್ ಸವಾರ ಕೂಡಲೆಪ್ಪ ಅವರಿಗೆ ಡಿಕ್ಕಿ ಹೊಡೆದು ಸಾವು ಸಂಭವಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


