ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು ಒತ್ತಾಯಿಸಿ ಅನಂತಕುಮಾರ್ ಪುತ್ರಿ ಟ್ವೀಟ್; ಚರ್ಚೆಗೆ ಗ್ರಾಸ
ಬೆಂಗಳೂರು ಮತ್ತು ಮುಂಬೈ ನಡುವೆ ಹೈಸ್ಪೀಡ್ ರೈಲು ಓಡಿಸುವಂತೆ ಮಾಜಿ ಕೇಂದ್ರ ಸಚಿವ ದಿ. ಅನಂತ್ ಕುಮಾರ್ ಅವರ ಪುತ್ರಿ ವಿಜೇತಾ ಅನಂತಕುಮಾರ್ ಅವರು ರೈಲ್ವೆ ಸಚಿವರಿಗೆ ಮನವಿ ಮಾಡಿದ್ದು, ಆನ್‌ಲೈನ್‌ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು: ಬೆಂಗಳೂರು ಮತ್ತು ಮುಂಬೈ ನಡುವೆ ಹೈಸ್ಪೀಡ್ ರೈಲು ಓಡಿಸುವಂತೆ ಮಾಜಿ ಕೇಂದ್ರ ಸಚಿವ ದಿ. ಅನಂತ್ ಕುಮಾರ್ ಅವರ ಪುತ್ರಿ ವಿಜೇತಾ ಅನಂತಕುಮಾರ್ ಅವರು ರೈಲ್ವೆ ಸಚಿವರಿಗೆ ಮನವಿ ಮಾಡಿದ್ದು, ಆನ್‌ಲೈನ್‌ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಅಸ್ತಿತ್ವದಲ್ಲಿರುವ ರೈಲನ್ನು ವೇಗಗೊಳಿಸಿ, ಈಗ ತೆಗೆದುಕೊಳ್ಳುತ್ತಿರುವ ಸಮಯವನ್ನು ಕಡಿಮೆ ಮಾಡಬಹುದು. ಆದರೆ ಈ ಮಾರ್ಗದಲ್ಲಿ ನಿರ್ದಿಷ್ಟ ಹೈ-ಸ್ಪೀಡ್ ರೈಲಿನ ಯಾವುದೇ ಪ್ರಸ್ತಾಪ ಇಲ್ಲ ಎಂದು ನೈಋತ್ಯ ರೈಲ್ವೆ(SWR) ಹೇಳಿದೆ.
ಪರಿಸರವಾದಿ ವಿಜೇತಾ ಅವರು ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲಿನ ಟ್ವೀಟ್ ಮಾಡಿದ್ದು, “ಮುಂಬೈ-ದೆಹಲಿ ನಡುವಿನ 1377 ಕಿಮೀ ದೂರ ಕ್ರಮಿಸಲು ವೇಗದ ರೈಲು ಸುಮಾರು 17 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಮುಂಬೈ-ಬೆಂಗಳೂರು ನಡುವಿನ 1120 ಕಿಮೀ ದೂರ ಕ್ರಮಿಸಲು ವೇಗದ ರೈಲು ಸುಮಾರು 24 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.ಅಶ್ವಿನಿ ವೈಷ್ಣವ್ ಅವರೇ ನಮಗೆ ಈ ಎರಡು ಮೆಗಾ ಸಿಟಿಗಳ ನಡುವೆ ಹೈಸ್ಪೀಡ್ ರೈಲು ಬೇಕು ಎಂದು ಹೇಳಿದ್ದಾರೆ.
ಕೆಲವರು ವಿಜೇತಾ ಅನಂತಕುಮಾರ್ ಅವರ ಸಲಹೆಯನ್ನು ಬೆಂಬಲಿಸಿ ಆನ್‌ಲೈನ್‌ನಲ್ಲಿ ಚರ್ಚೆ ಪ್ರಾರಂಭಿಸಿದರೆ, ಇನ್ನೂ ಕೆಲವರು ಮೂಲಸೌಕರ್ಯಗಳ ಕೊರತೆಯನ್ನು ವಿವರಿಸಿದ್ದಾರೆ.
“ಖಾಸಗಿ ಬಸ್ ನಿರ್ವಾಹಕರ ಲಾಬಿ ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲಿಗೆ ಅವಕಾಶ ನೀಡುತ್ತಿಲ್ಲ. ಈ ಎರಡು ನಗರಗಳ ನಡುವಿನ ವೇಗದ ರೈಲಿನ ಬೇಡಿಕೆ ದೀರ್ಘಕಾಲದಿಂದ ಬಾಕಿ ಉಳಿದಿದೆ ಎಂದು ಸಂಜಯ್ ಮೂರ್ತಿ ಟ್ವೀಟ್ ಮಾಡಿದ್ದಾರೆ.
ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ಬೆಂಗಳೂರು ಮತ್ತು ಮುಂಬೈ ನಡುವೆ ಯಾವುದೇ ಹೈಸ್ಪೀಡ್ ಕಾರಿಡಾರ್ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದ್ದು, “ಇತ್ತೀಚೆಗೆ ಒಂಬತ್ತು ಹೈಸ್ಪೀಡ್ ಕಾರಿಡಾರ್‌ಗಳ ಪ್ರಸ್ತಾವನೆಯಲ್ಲಿ ಚೆನ್ನೈನಿಂದ ಬೆಂಗಳೂರಿನ ಮೂಲಕ ಮೈಸೂರಿಗೆ ಒಂದು ಪ್ರಸ್ತಾಪವಿದೆ. ಆದಾಗ್ಯೂ, ಬೆಂಗಳೂರು ಮತ್ತು ಮುಂಬೈ ನಡುವಿನ ಪ್ರಯಾಣದ ಸಮಯವನ್ನು 24 ಗಂಟೆಗಳಿಂದ ಕಡಿಮೆ ಮಾಡುವ ಅವಶ್ಯಕತೆಯಿದೆ ಮತ್ತು ಮಾರ್ಗದ ಉದ್ದಕ್ಕೂ ವಿದ್ಯುದ್ದೀಕರಣ ಮತ್ತು ಡಬಲ್ ಟ್ರಾಕ್ ಮಾಡಲು ಮಾತ್ರ ಸಾಧ್ಯ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


