ಭಾಷೆಯೊಂದು ಸತ್ತರೆ, ಅದರಲ್ಲಿನ ಶ್ರೀಮಂತ ಸಂಸ್ಕೃತಿಯೂ ನಶಿಸುತ್ತದೆ: ಬಿ.ಕೆ ಹರಿಪ್ರಸಾದ್
ಭಾಷೆಯೊಂದು ಸತ್ತರೆ, ಅದರಲ್ಲಿ ಅಡಗಿರುವ ಶ್ರೀಮಂತ ಸಂಸ್ಕೃತಿಯೂ ನಶಿಸುತ್ತದೆ, ನೆಲದ ಭಾಷೆಗಳ ಉಳಿವಿಗಾಗಿ ರಾಷ್ಟ್ರೀಯ ಭಾಷಾ ನೀತಿಯನ್ನು ರೂಪಿಸುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು: ಭಾಷೆಯೊಂದು ಸತ್ತರೆ, ಅದರಲ್ಲಿ ಅಡಗಿರುವ ಶ್ರೀಮಂತ ಸಂಸ್ಕೃತಿಯೂ ನಶಿಸುತ್ತದೆ, ನೆಲದ ಭಾಷೆಗಳ ಉಳಿವಿಗಾಗಿ ರಾಷ್ಟ್ರೀಯ ಭಾಷಾ ನೀತಿಯನ್ನು ರೂಪಿಸುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.
ಪ್ರಜಾ ಪ್ರಕಾಶನವು ನಗರದಲ್ಲಿರುವ ಆಯೋಜಿಸಿದ್ದ ತುಳು-ಕೊಡವ ಭಾಷೆಗಳ ಅಳಿವು-ಉಳಿವು ಪುಸ್ತಕ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಮೇಲೆ ಆಕ್ರಮಣವಾಗುತ್ತಿದೆ.
ಆದುದರಿಂದ ನಾವು ಅಂಬೇಡ್ಕರ್ ನೀಡಿದ ಸಂವಿಧಾನವನ್ನು ರಕ್ಷಿಸಬೇಕಾಗಿದೆ. ಸಂವಿಧಾನ ನಾಶವಾದರೆ ಪಟೇಲರು, ಜಮೀನುದಾರರು ಹಾಗೂ ಶಾನುಭೋಗರು ಪುನಃ ನಮ್ಮನ್ನು ಕೂಲಿ ಆಳುಗಳಂತೆ ಆಳ್ವಿಕೆ ಮಾಡುತ್ತಾರೆ. ಹಾಗಾಗಿ ನಾವು ಸಂವಿಧಾನವನ್ನು ರಕ್ಷಿಸಬೇಕೆ ಹೊರತು ಆರ್‍ಎಸ್‍ಎಸ್ ರಕ್ಷಿಸುವುದಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಕೊಡವ ಭಾಷೆ ಮಾತನಾಡುವವರ ಸಂಖ್ಯೆ ಕ್ಷೀಣಿಸಿರುವುದಾಗಿ 2011ರ ಜನಗಣತಿ ಹೇಳುತ್ತದೆ. ಇದೇ ರೀತಿ ಮುಂದುವರಿದರೆ ಕೊಡವ ಭಾಷೆ ಮಾತನಾಡುವವರೇ ಇಲ್ಲವಾಗುತ್ತಾರೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಬಹುತ್ವ ಭಾರತದಲ್ಲಿ ಹಲವಾರು ಭಾಷೆ ಮತ್ತು ಸಂಸ್ಕೃತಿಗಳು ಸೇರಿಕೊಂಡಿವೆ. ದೇಶದಲ್ಲಿರುವ 19,569 ಭಾಷೆಗಳನ್ನೂ ಜೋಪಾನವಾಗಿ ಕಾಪಾಡಲು ನೆರವಾಗುವ ಸಮಗ್ರ ಭಾಷಾ ನೀತಿಯನ್ನು ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.
ಸರಕಾರವು ದೇಶದಲ್ಲಿ ಕೇವಲ 28 ಸಾವಿರ ಮಂದಿ ಮಾತನಾಡುವ ಸಂಸ್ಕೃತಕ್ಕೆ 640 ಕೋಟಿ ರೂ. ಕೊಟ್ಟರೆ, 6 ಕೋಟಿ ಕನ್ನಡ ಮಾತನಾಡುವವರಿಗೆ 3 ಕೋಟಿ ಮೀಸಲಿಡುತ್ತಿದೆ. ಆದರೆ ಸಂವಿಧಾನದಲ್ಲಿ ಎಲ್ಲಾ ಭಾಷೆಗಳ ರಕ್ಷಣೆಯ ಖಾತ್ರಿ ನೀಡಿದ್ದರೂ, ತುಳು ಹಾಗೂ ಕೊಡವ ಭಾಷೆಗೆ ಅನುಧಾನವನ್ನು ಮೀಸಲಿಡುವುದಿಲ್ಲ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


