ರಾಜ್ಯ

ದಟ್ಟ ಮಂಜಿನ ಕಾರಣ ಲ್ಯಾಂಡಿಂಗ್ ಆಗದ ವಿಮಾನ: ಆಗಸದಲ್ಲೇ 3 ಸುತ್ತು ಸುತ್ತಿದ ಸಿಎಂ ಬೊಮ್ಮಾಯಿ ಇದ್ದ ಪ್ಲೈಟ್

ಪ್ರತಿಕೂಲ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ವಿಮಾನ ಲ್ಯಾಂಡಿಂಗ್ ಗೆ ಸಮಸ್ಯೆಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ದಟ್ಟ ಮಂಜಿನ ಕಾರಣ ಲ್ಯಾಂಡಿಂಗ್ ಆಗದ ವಿಮಾನ: ಆಗಸದಲ್ಲೇ 3 ಸುತ್ತು ಸುತ್ತಿದ ಸಿಎಂ ಬೊಮ್ಮಾಯಿ ಇದ್ದ ಪ್ಲೈಟ್
ಬಸವರಾಜ ಬೊಮ್ಮಾಯಿ
Published On :

ಹುಬ್ಬಳ್ಳಿ: ಪ್ರತಿಕೂಲ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ವಿಮಾನ  ಲ್ಯಾಂಡಿಂಗ್ ಗೆ ಸಮಸ್ಯೆಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂಡಿಗೊ ವಿಮಾನದಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದರು. ಆದರೆ ಹುಬ್ಬಳ್ಳಿಯಲ್ಲಿ  ಹವಾಮಾನ ವೈಪರೀತ್ಯ ಕಂಡುಬಂದಿದೆ. ಇದರಿಂದಾಗಿ ಲ್ಯಾಂಡಿಂಗ್ ಸಮಸ್ಯೆ ಉಂಟಾಗಿದೆ.  ಹುಬ್ಬಳ್ಳಿಯಲ್ಲೇ ಮೂರು ಸುತ್ತುತ್ತಾ ಆಕಾಶದಲ್ಲೆ ವಿಮಾನ ಹಾರಾಡಿದೆ.

ಬೆಳಗ್ಗೆ ಬೆಂಗಳೂರಿನಿಂದ ಸಿಎಂ ಮತ್ತು ಪ್ರಹ್ಲಾದ್ ಜೋಶಿ ಅವರು ಬೆಂಗಳೂರಿನಿಂದ ಹುಬ್ಬಳ್ಳಿಗೆ 6E7227 ಇಂಡಿಗೋ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಹುಬ್ಬಳ್ಳಿಯಲ್ಲಿ ದಟ್ಟ ಮಂಜು ಅವರಿಸಿದ ಹಿನ್ನೆಲೆ ವಿಮಾನ ಲ್ಯಾಂಡಿಂಗ್ ಸಮಸ್ಯೆಯಾಗಿ ವಿಮಾನ 15 ನಿಮಿಷಗಳ ಕಾಲ ಆಕಾಶದಲ್ಲೇ ಹಾರುವ ಪರಿಸ್ಥಿತಿ ಒದಗಿತು. ನಂತರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ 7:30ಕ್ಕೆ ಲ್ಯಾಡಿಂಗ್ ಆಗಬೇಕಿದ್ದ ಅರ್ಧ ಗಂಟೆ ತಡವಾಗಿ ಲ್ಯಾಂಡಿಂಗ್ ಆಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.