ನಂದಿ ಹಿಲ್ಸ್ ಭೂಕುಸಿತಕ್ಕೆ ಬ್ಲಾಸ್ಟ್ ಗಳು ಕಾರಣ: ಅಧಿಕಾರಿಗಳು, ಪರಿಸರ ತಜ್ಞರ ಶಂಕೆ
ಚಿಕ್ಕಬಳ್ಳಾಪುರದಲ್ಲಿ ಸಾಮಾನ್ಯವಾಗಿ ವಾರ್ಷಿಕ 700- 750 ಮಿಮೀ. ಮಳೆಯಾಗುತ್ತದೆ. ಆದರೆ ಮಂಗಳವಾರ ರಾತ್ರಿ ಒಂದೇ ದಿನ 100 ಮಿ.ಮೀ ಮಳೆ ಬಿದ್ದಿತ್ತು.

ಬೆಂಗಳೂರು: ಬೆಂಗಳೂರಿನ ಪ್ರಸಿದ್ಧ ನಂದಿ ಹಿಲ್ಸ್ ಧಾಮದಲ್ಲಿ ಸಂಭವಿಸಿದ ಭೂಕುಸಿತಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಸುತ್ತಮುತ್ತಲ ಪರಿಸರದಲ್ಲಿ ನಡೆಸಲಾದ ಸ್ಫೋಟ ಕಾರಣವಿರುವ ಶಂಕೆಯನ್ನು ಪರಿಸರ ತಜ್ಞರು ವ್ಯಕ್ತಪಡಿಸಿದ್ದಾರೆ.
ಭೂಕುಸಿತ ನೈಸರ್ಗಿಕವಾಗಿ ಸಂಭವಿಸಿರುವ ಸಾಧ್ಯತೆ ಇದ್ದರೂ, ಸುತ್ತಮುತ್ತಲ ಪ್ರದೇಶಗಳಲ್ಲಿ ಮಾಡಲಾಗುತ್ತಿರುವ ಗಣಿಗಾರಿಕೆ ಕೆಲಸಗಳಿಂದಾಗಿ ಭೂ ಕುಸಿತ ಸಂಭವಿಸಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂದು ಪರಿಸರ ತಜ್ಞರು ಹೇಳಿದ್ದಾರೆ.
ನಂದಿ ಹಿಲ್ಸ್ ನಲ್ಲಿ ಮಂಗಳವಾರ ಬ್ರಹ್ಮಗಿರಿ ಬಳಿಯ ರಂಗಪ್ಪ ಸರ್ಕಲ್ ಎನ್ನುವ ಪ್ರಾಂತ್ಯದಲ್ಲಿ ಭೂಕುಸಿತ ಸಂಭವಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಆರ್ ಲತಾ, ನಂದಿ ಹಿಲ್ಸ್ ಒಂದು ಬೃಹತ್ ಶಿಲಾಕಲ್ಲಾಗಿದ್ದು ಕಾಲಾಂತರದಲ್ಲಿ ಅದರ ಮೇಲೆ ಮಣ್ಣು, ಕಲ್ಲುಗಳು ತುಂಬಿಕೊಂಡು ಪರ್ವತ ರೂಪ ತಾಳಿದೆ.
ಚಿಕ್ಕಬಳ್ಳಾಪುರದಲ್ಲಿ ಸಾಮಾನ್ಯವಾಗಿ ವಾರ್ಷಿಕ 700- 750 ಮಿಮೀ. ಮಳೆಯಾಗುತ್ತದೆ. ಆದರೆ ಮಂಗಳವಾರ ರಾತ್ರಿ ಒಂದೇ ದಿನ 100 ಮಿ.ಮೀ ಮಳೆ ಬಿದ್ದಿತ್ತು. ಇದರಿಂದಾಗಿ ಮಣ್ಣು ಮತ್ತು ಕಲ್ಲುಗಳು ಸವೆದು ನೀರಲ್ಲಿ ಕೊಚ್ಚಿಕೊಂಡು ಹೋಗಿ ಭೂಕುಸಿತಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
Related Article
ನಂದಿ ಬೆಟ್ಟದಲ್ಲಿ ಕಸ ಎಸೆದಿದ್ದ ಕೆಎಸ್‌ಟಿಡಿಸಿ ಸಿಬ್ಬಂದಿ; ವಿಡಿಯೋ ವೈರಲ್; ಕಡೆಗೆ ಅವರಿಂದಲೇ ಸ್ವಚ್ಛತೆ
ಚಿಕ್ಕಬಳ್ಳಾಪುರ: ನಂದಿಬೆಟ್ಟಕ್ಕೆ ಸಾಗುವ 10ನೇ ತಿರುವು ರಸ್ತೆಯಲ್ಲಿ ಭೂ ಕುಸಿತ, ಸಂಚಾರಕ್ಕೆ ಅಡ್ಡಿ
'ನಂದಿ ಬೆಟ್ಟ ರೋಪ್ ವೇ': ಯೋಜನೆ ಸಿದ್ಧ, ಅನುಮೋದನೆಗಾಗಿ ಕಾಯುತ್ತಿರುವ ಅಧಿಕಾರಿಗಳು
ವಿಶ್ವವಿಖ್ಯಾತ ನಂದಿ ಗಿರಿಧಾಮದಲ್ಲಿ ಶೀಘ್ರದಲ್ಲೇ ರೋಪ್ ವೇ ನಿರ್ಮಾಣ: ಸಚಿವ ಯೋಗೇಶ್ವರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


