ಎಂ.ಎಸ್.ಧೋನಿಗೆ ಆರ್ಥಿಕ ಸಹಾಯ ಮಾಡಿದ್ದರಂತೆ 'ರೆಬೆಲ್ ಸ್ಟಾರ್' ಅಂಬರೀಷ್!
ರೆಬೆಲ್ ಸ್ಟಾರ್ ಅಂಬರೀಷ್ ಅವರನ್ನು ಪ್ರೀತಿಯಿಂದ ಅಭಿಮಾನಿಗಳು ಕಲಿಯುಗದ ಕರ್ಣ ಎಂದು ಕರೆಯುತ್ತಿದ್ದರು. ಕಷ್ಟ ಎಂದು ಹೇಳಿಕೊಂಡು ಬಂದವರನ್ನು ಅವರು ಬರಿಗೈಯಲ್ಲಿ ಕಳುಹಿಸುವುದಿಲ್ಲ ಎಂದು ಅನೇಕರು ಅವರನ್ನು ಕೊಂಡಾಡುತ್ತಾರೆ.

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಷ್ ಅವರನ್ನು ಪ್ರೀತಿಯಿಂದ ಅಭಿಮಾನಿಗಳು ಕಲಿಯುಗದ ಕರ್ಣ ಎಂದು ಕರೆಯುತ್ತಿದ್ದರು. ಕಷ್ಟ ಎಂದು ಹೇಳಿಕೊಂಡು ಬಂದವರನ್ನು ಅವರು ಬರಿಗೈಯಲ್ಲಿ ಕಳುಹಿಸುವುದಿಲ್ಲ ಎಂದು ಅನೇಕರು ಅವರನ್ನು ಕೊಂಡಾಡುತ್ತಾರೆ.
ಅಂಬರೀಷ್ ಅವರು ಹಿಂದೊಮ್ಮೆ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ ಎಸ್ ಧೋನಿಯವರಿಗೂ ಸಹಾಯ ಮಾಡಿದ್ದರಂತೆ, ಹೀಗೆಂದು ಅವರ ಪತ್ನಿ ಸಂಸದೆ ಸುಮಲತಾ ಹೇಳಿಕೊಂಡಿದ್ದಾರೆ, ಪತ್ರಿಕೆಯೊಂದರಲ್ಲಿ ಬಂದ ಸುದ್ದಿಯನ್ನು ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2004ರಲ್ಲಿ ನಡೆದಿದ್ದ ಕ್ರಿಕೆಟ್ ಪಂದ್ಯ ವೀಕ್ಷಿಸಲು ಹೋಗಿದ್ದ ಅಂಬರೀಷ್ ಅವರು ಪಂದ್ಯ ಮುಗಿದ ಮೇಲೆ ಧೋನಿಯವರ ಆಟವನ್ನು ನೋಡಿ ಮೆಚ್ಚಿದ್ದರು. ಆ ಸಮಯದಲ್ಲಿ ಧೋನಿಯವರು ಕ್ರಿಕೆಟ್ ನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಸಮಯ. ಆರ್ಥಿಕವಾಗಿ ಕಷ್ಟದಲ್ಲಿದ್ದರು.
So many deeds of kindness by #RebelStarAmbareesh are little known because he never believed in publicising them. So it's a wonderful surprise when I come across information like this unexpectedly. No wonder that
was also called fondly as Dhaana Karna by people who loved him. pic.twitter.com/tzRmUHuKTH
— Sumalatha Ambareesh
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


