ಹಾವೇರಿ: 85 ಬಾವಲಿಗಳನ್ನು ಹತ್ಯೆ ಮಾಡಿದ ಐವರ ಬಂಧನ
85 ಬಾವಲಿಗಳನ್ನು ಹತ್ಯೆ ಮಾಡಿದ ಆರೋಪದಡಿ ಐವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.

ಹಾವೇರಿ: 85 ಬಾವಲಿಗಳನ್ನು ಹತ್ಯೆ ಮಾಡಿದ ಆರೋಪದಡಿ ಐವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.
ಜಿಲ್ಲೆಯ ಹಿರೇಕೆರೂರಿನ ಮಾಸೂರು ಗ್ರಾಮದ ಸಮೀಪ ಕುಮದ್ವತಿ ನದಿ ದಡದಲ್ಲಿ ನೀಲಗಿರಿ ಮರಗಳ ಮೇಲೆ ವಾಸವಿದ್ದ 85 ಬಾವಲಿಗಳನ್ನು ಹತ್ಯೆ ಮಾಡಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಮಂಜುನಾಥ ರಾಮಣ್ಣ, ತುಮಕೂರು ಮೂಲದ ಕೃಷ್ಣಪ್ಪ ರಾಮಕೃಷ್ಣಯ್ಯ, ಸಂಕಾಪುರದ ನಾರಾಯಣ ನಾರಾಯಣಪ್ಪ, ಗೋಲೂರಿನ ಲೋಕೇಶ ಲಕ್ಷ್ಮಯ್ಯ ಸಂಕಾಪುರ, ಸತ್ಯಮಂಗಲದ ಹುಲ್ಲೂರಯ್ಯ ಲಕ್ಷ್ಮಯ್ಯ ಎಂಬುವವರನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತರಿಂದ 85 ಮೃತ ಬಾವಲಿಗಳು, ಒಂದು ವಾಹನ, ಬಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ, ಸಿಬ್ಬಂದಿ ಚಮನ್‌ಅಲಿ ಕಾಲೆಖಾನವರ, ವಿ.ಬಿ.ಮೊಹಿತೆ, ಅಬ್ದುಲ್ ಖಾದರ್ ಜಿಲಾನಿ, ಕನಕೇಶ, ಬಸವರಾಜ, ಗುರುಪ್ರಸಾದ, ಪ್ರಶಾಂತ, ಪ್ರವೀಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


