ರಾಜ್ಯ

ಕೊರೋನಾ ಹೆಚ್ಚಳ: ದಕ್ಷಿಣ ಕನ್ನಡದಲ್ಲಿ ಹೊಸ ನಿರ್ಬಂಧಗಳು, ವಾರಾಂತ್ಯದಲ್ಲಿ ದೇವಾಲಯಗಳಿಗೆ ಪ್ರವೇಶ ಇಲ್ಲ

ಕೋವಿಡ್ -19 ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಆಗಸ್ಟ್ 15 ರವರೆಗೆ ಜಿಲ್ಲೆಯ ದೇವಸ್ಥಾನಗಳಿಗೆ ಹೊಸ ನಿರ್ಬಂಧಗಳನ್ನು ಜಾರಿ ಮಾಡಿದೆ.

ಕೊರೋನಾ ಹೆಚ್ಚಳ: ದಕ್ಷಿಣ ಕನ್ನಡದಲ್ಲಿ ಹೊಸ ನಿರ್ಬಂಧಗಳು, ವಾರಾಂತ್ಯದಲ್ಲಿ ದೇವಾಲಯಗಳಿಗೆ ಪ್ರವೇಶ ಇಲ್ಲ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ
Published On :

ಮಂಗಳೂರು: ಕೋವಿಡ್ -19 ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಆಗಸ್ಟ್ 15 ರವರೆಗೆ ಜಿಲ್ಲೆಯ ದೇವಸ್ಥಾನಗಳಿಗೆ ಹೊಸ ನಿರ್ಬಂಧಗಳನ್ನು ಜಾರಿ ಮಾಡಿದೆ.

ಕಟೀಲು, ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಮಾತ್ರ ತೆರೆದಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಅವರು ಬುಧವಾರ ತಮ್ಮ ಆದೇಶ ಹೊರಡಿಸಿದ್ದಾರೆ.

"ಭಕ್ತರು ಸಾಮಾಜಿಕ ಅಂತರ ಮತ್ತು ಇತರ ಮಾರ್ಗಸೂಚಿಗಳನ್ನು ಅನುಸರಿಸಬೇಕು. ತೀರ್ಥ, ಪ್ರಸಾದ ಮತ್ತು ಅನ್ನಸಂತರ್ಪಣ ಭಕ್ತರಿಗೆ ಲಭ್ಯವಿರುವುದಿಲ್ಲ. 

ಏತನ್ಮಧ್ಯೆ, ದೇವಸ್ಥಾನಗಳು ಶನಿವಾರ ಮತ್ತು ಭಾನುವಾರದಂದು ಸಂಪೂರ್ಣ ಬಂದ್ ಆಗಿರುತ್ತವೆ. ಅಲ್ಲದೆ, ವಾರಾಂತ್ಯದಲ್ಲಿ, ಭಕ್ತರು ಅತಿಥಿಗೃಹಗಳಲ್ಲಿ ಉಳಿಯಲು ಅಥವಾ ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಇಲ್ಲ ಎಂದು ಅವರು ಹೇಳಿದ್ದಾರೆ.

ಶನಿವಾರ ಮತ್ತು ಭಾನುವಾರ, ದೇವಾಲಯದ ಅರ್ಚಕರಿಗೆ ಮಾತ್ರ ದೈನಂದಿನ ಪೂಜೆ ಸಲ್ಲಿಸಲು ಅವಕಾಶವಿದೆ. "ವಾರಾಂತ್ಯಗಳನ್ನು ಹೊರತುಪಡಿಸಿ ಉಳಿದ ದಿನಗಳಳ್ಲಿ ಅತಿಥಿಗೃಹಗಳಲ್ಲಿ ಉಳಿಯಲು ಬಯಸುವ ಭಕ್ತರು 72 ಗಂಟೆಗೂ ಮುಂಚೆ ಪಡೆದ ನೆಗಟಿವ್ ಆರ್ ಟಿಪಿಸಿಆರ್ ವರದಿಯನ್ನು ಕಡ್ಡಾಯವಾಗಿ ನೀಡಬೇಕು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.