ರಾಜ್ಯ

ಮಳೆಗಾಲ: ಪ್ರವಾಸಿಗರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಕೆಎಸ್‌ಆರ್‌ಟಿಸಿ

ಮಳೆಗಾಲ ಆರಂಭವಾಗಿದ್ದು, ಪ್ರವಾಸ ಮಾಡಲು ಇಷ್ಟಪಡವವರಿಗಂತೂ ಇದೊಂದು ಅತ್ಯುತ್ತಮ ಕಾಲವಾಗಿದೆ. ಅನ್‌ಲಾಕ್ ಘೋಷಣೆಯಾದ ಬಳಿಕವಂತೂ ಸಂಚಾರ ನಡೆಸುವ ಜನರ ಸಂಖ್ಯೆಯೂ ಹೆಚ್ಚಾಗಿದೆ. ಅದರಲ್ಲೂ ಮಳೆಗಾಲದಲ್ಲಿ ಜನರು ಹೆಚ್ಚಾಗಿ ಪ್ರವಾಸ ಕೈಗೊಳ್ಳುವ ಹಿನ್ನೆಲೆಯಲ್ಲಿ ಕೆಎಸ್ಆರ್‌ಟಿಸಿ ಹಲವಾರು ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿದೆ.

ಮಳೆಗಾಲ: ಪ್ರವಾಸಿಗರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಕೆಎಸ್‌ಆರ್‌ಟಿಸಿ
ಸಂಗ್ರಹ ಚಿತ್ರ
Published On :

ಬೆಂಗಳೂರು: ಮಳೆಗಾಲ ಆರಂಭವಾಗಿದ್ದು, ಪ್ರವಾಸ ಮಾಡಲು ಇಷ್ಟಪಡವವರಿಗಂತೂ ಇದೊಂದು ಅತ್ಯುತ್ತಮ ಕಾಲವಾಗಿದೆ. ಅನ್‌ಲಾಕ್ ಘೋಷಣೆಯಾದ ಬಳಿಕವಂತೂ ಸಂಚಾರ ನಡೆಸುವ ಜನರ ಸಂಖ್ಯೆಯೂ ಹೆಚ್ಚಾಗಿದೆ. ಅದರಲ್ಲೂ ಮಳೆಗಾಲದಲ್ಲಿ ಜನರು ಹೆಚ್ಚಾಗಿ ಪ್ರವಾಸ ಕೈಗೊಳ್ಳುವ ಹಿನ್ನೆಲೆಯಲ್ಲಿ ಕೆಎಸ್ಆರ್‌ಟಿಸಿ ಹಲವಾರು ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಯ ಬೆಂಗಳೂರು ಕೇಂದ್ರೀಯ ವಿಭಾಗವು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರವಾಸ ಪ್ಯಾಕೇಜ್‌'ಗಳನ್ನು ಘೋಷಿಸಿದೆ. 

ಕೆಲ ದಿನಗಳ ಹಿಂದೆ ಕೆಎಸ್ಆರ್‌ಟಿಸಿ ತಿರುಪತಿಗೆ ಹೋಗುವ ಭಕ್ತರಿಗಾಗಿ ಬೆಂಗಳೂರು-ತಿರುಪತಿ ಪ್ಯಾಕೇಜ್ ಘೋಷಣೆ ಮಾಡಿತ್ತು. 

ಪ್ಯಾಕೇಜ್ ಗಳು ಇಂತಿವೆ...
ದಾವಣಗೆರೆ-ಹರಿಹರ-ಶಿರಸಿ ಮೂಕಾಂಬಿಕ ದೇವಸ್ಥಾನ-ಜೋಗ್ ಜಲಪಾತ, ಚಳ್ಳಕೆರೆ-ಚಿತ್ರದುರ್ಗ-ವರದಮೂಲ-ಇಕ್ಕೇರಿ-ಜೋಗ್ ಜಲಪಾತ, ಬೆಂಗಳೂರು- ಚುಂಚಿ ಜಲಪಾತ-ಶಿವನಮಕರೇಶ್ವರ ದೇವಸ್ಥಾನ-ಮಡಿವಾಳ-ಸಂಗಮ-ಮುತ್ತತ್ತಿ-ಗಗನಚುಕ್ಕಿ, ಬೆಂಗಳೂರು-ಸೋಮನಾಥಪುರ ದೇವಸ್ಥಾನ-ತಲಕಾಡು-ಬರಚುಕ್ಕಿ-ಗಗನಚುಕ್ಕಿ, ಬೆಂಗಳೂರು- ಚಿತ್ರದುರ್ಗ ಕೋಟೆ-ಚಂದವಳ್ಳಿ-ವಾಣಿವಿಲಾಸ ಸಾಗರ, ದಾವಣಗೆರೆ-ಚಿತ್ರದುರ್ಗ ಕೋಟೆ-ಮುರುಗಮಠ- ಚಂದವಳ್ಳಿ ಉದ್ಯಾನ-ವಾಣಿವಿಲಾಸ ಸಾಗರ ಮತ್ತು ದಾವಣಗೆರೆ-ಹರಿಹರ-ಹಂಪಿ.

ಮುಂಗಡ ಆಸನಗಳನ್ನು ಕಾಯ್ದಿರಿಸಲು ವೆಬ್‍ಸೈಟ್ ವಿಳಾಸ: ksrtc.karnataka.gov.in/www.ksrtc.in ಮತ್ತು ನಿಗಮದ ಫ್ರಾಂಚೈಸಿ ಕೌಂಟರ್‍ಗಳ ಮೂಲಕವೂ ಪ್ರಯಾಣಿಕರು ಪ್ಯಾಕೇಜ್ ಪ್ರವಾಸದ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಎಲ್ಲಾ ಪ್ರಯಾಣಿಕರೂ ಪ್ರಯಾಣದ ವೇಳೆ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.