ನೈಋತ್ಯ ರೈಲ್ವೆಯಿಂದ ತಮಿಳುನಾಡಿಗೆ 16 ರೈಲುಗಳು ರದ್ದು
ರಾಜ್ಯದಲ್ಲಿ ಕಳೆದ ರಾತ್ರಿಯಿಂದ 14 ದಿನಗಳ ಲಾಕ್‍ಡೌನ್ ಜಾರಿಗೆ ಬಂದ ನಂತರ ನೈಋತ್ಯ ರೈಲ್ವೆ, ಬಹುತೇಕ ತಮಿಳುನಾಡಿಗೆ ಸಂಪರ್ಕಿಸುವ 16 ರೈಲುಗಳನ್ನು ರದ್ದುಗೊಳಿಸಿದೆ.

ಬೆಂಗಳೂರು: ರಾಜ್ಯದಲ್ಲಿ ಕಳೆದ ರಾತ್ರಿಯಿಂದ 14 ದಿನಗಳ ಲಾಕ್‍ಡೌನ್ ಜಾರಿಗೆ ಬಂದ ನಂತರ ನೈಋತ್ಯ ರೈಲ್ವೆ, ಬಹುತೇಕ ತಮಿಳುನಾಡಿಗೆ ಸಂಪರ್ಕಿಸುವ 16 ರೈಲುಗಳನ್ನು ರದ್ದುಗೊಳಿಸಿದೆ.
ರೈಲುಗಳ ಸೇವೆ ರದ್ದು ವಿವಿಧ ದಿನಗಳಲ್ಲಿ ಜಾರಿಗೆ ಬರಲಿದೆ. ಬೆಂಗಳೂರು- ಚೆನ್ನೈ ಸೆಂಟ್ರಲ್ ನಡುವಿನ ಶತಾಬ್ಡಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಸ್ಪೆಷಲ್ ಬುಧವಾರದಿಂದ ಎರಡೂ ಕಡೆಯಿಂದ ರದ್ದುಗೊಳ್ಳಲಿದೆ..
ಅದರಂತೆ ಕೊಯಮತ್ತೂರು-ಕೆ.ಎಸ್.ಆರ್. ಬೆಂಗಳೂರು ನಡುವೆ ವಾರದಲ್ಲಿ ಆರು ದಿನ ಸಂಚರಿಸುವ ರೈಲು ಸೇವೆ ಇದೇ ತಿಂಗಳ 29ರಿಂದ ಮುಂದಿನ ಆದೇಶದವರೆಗೆ ಎರಡೂ ಕಡೆಗಳಿಂದ ರದ್ದಾಗಲಿದೆ. ಕೋಚುವೇಲಿ-ಬಾಣಸವಾಡಿ ನಡುವೆ ವಾರಕ್ಕೊಮ್ಮೆ ಸಂಚರಿಸುವ ಹಂಸಫರ್ ಎಕ್ಸ್ ಪ್ರೆಸ್ ವಿಶೇಷ ರೈಲು, ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ನಡುವಿನ ರೈಲುಗಳನ್ನು ಕೂಡ ರದ್ದುಗೊಳಿಸಲಾಗುವುದು.
ಎರ್ನಾಕುಲಂ-ಬಾಣಸವಾಡಿ ವಾರಜ್ಜೆ ಎರಡು ಬಾರಿ ಸಂಚರಿಸುವ ರೈಲು ಮೇ 3ರಿಂದ ರದ್ದುಗೊಳ್ಳಲಿದೆ. ಬೆಂಗಳೂರು ಉಪನಗರ ಸಂಪರ್ಕಿಸುವ ಆರು ಮೆಮು ರೈಲುಗಳನ್ನು ಈ ತಿಂಗಳ 29ರಿಂದ ರದ್ದುಗೊಳಿಸಲಾಗುತ್ತದೆ. ಕೆ.ಎಸ್.ಆರ್. ಬೆಂಗಳೂರು-ಮಾರಿಕುಪ್ಪಮ್, ಕೆ.ಎಸ್.ಆರ್. ಬೆಂಗಳೂರು-ಹೊಸೂರು, ಬೈಯಪ್ಪನಹಳ್ಳಿ-ಹೊಸೂರು ರೈಲು ಸೇವೆ ಸಹ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


