ಇನ್ಮುಂದೆ ಸಚಿವಾಲಯದ ಸಿಬ್ಬಂದಿಗೆ ಕಠಿಣ ನಿಯಮ ಜಾರಿ: ಸಭಾಪತಿ ಬಸವರಾಜ ಹೊರಟ್ಟಿ
ಸಚಿವಾಲಯದ ಸಿಬ್ಬಂದಿಗೆ ಕಠಿಣ ನಿಯಮ ಜಾರಿಮಾಡಲು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮುಂದಾಗಿದ್ದಾರೆ.

ಬೆಂಗಳೂರು: ಸಚಿವಾಲಯದ ಸಿಬ್ಬಂದಿಗೆ ಕಠಿಣ ನಿಯಮ ಜಾರಿಮಾಡಲು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮುಂದಾಗಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೊರಟ್ಟಿ, ಸಚಿವಾಲಯದ ಸಿಬ್ಬಂದಿಗೆ ಬಯೋಮೆಟ್ರಿಕ್ ಕಡ್ಡಾಯ ಮಾಡಿದ್ದು, ಸ್ಯಾನಿಟೈಸ್ ಮಾಡಿ ಬಯೋಮೆಟ್ರಿಕ್ ಉಪಯೋಗಿಸಬೇಕು. ಕೊರೋನಾ ನೆಪವೊಡ್ಡಿ ಬಯೋಮೆಟ್ರಿಕ್ ತೆಗೆಯುವಂತಿಲ್ಲ. ತೆಗೆದರೆ ಸಿಬ್ಬಂದಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸುವುದಿಲ್ಲ. ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬರುವುದಿಲ್ಲ. ಹೀಗಾಗಿ ಬಯೋಮೆಟ್ರಿಕ್ ಕಡ್ಡಾಯ ಮಾಡಿದ್ದೇವೆ. ಸರಿಯಾದ ಸಮಯಕ್ಕೆ ಬರದವರಿಗೆ ಕ್ರಮತೆಗೆದುಕೊಳ್ಳುವುದಾಗಿ ಎಚ್ಚರಿಸಿದರು.
ಡಿ ಗ್ರೂಪ್ ನೌಕರರಿಗೆ ಸಮವಸ್ತ್ರ ವಿಚಾರವಾಗಿ ಪ್ರತಿಕ್ರಿಯಿಸಿದ ಸಭಾಪತಿ ಬಸವರಾಜ ಹೊರಟ್ಟಿ, ನೌಕರರು ಹೇಳಿದಂತೆ ಕುಣಿಯಲು ಸಾಧ್ಯವಿಲ್ಲ. ನಾವು ಜಾರಿ ಮಾಡಿದ ನಿಯಮವನ್ನು ಪಾಲಿಸಬೇಕಷ್ಟೆ ಎಂದರು.
ಸಮವಸ್ತ್ರ ಇದ್ದರೆ ಕರ್ತವ್ಯದಲ್ಲಿ ಶಿಸ್ತು ಹೆಚ್ಚಾಗಲಿದೆ. ಬಿಳಿ ಬಣ್ಣ ಬೇಡವೆಂದು ಮನವಿಮಾಡಿದ್ದ ನೌಕರರ ಬೇಡಿಕೆಯನ್ನು ಪರಿಗಣಿಸಲಾಗದು. ಬಣ್ಣ ಬದಲಾಯಿಸಲು ಸಾಧ್ಯವಿಲ್ಲ. ಈಗಾಗಲೇ ಯೂನಿಫಾರಂ ಬಗ್ಗೆ ಹೇಳಿದ್ದೇವೆ. ಸರ್ಕಾರಿ ಮಳಿಗೆಯಿಂದಲೇ ಸಮವಸ್ತ್ರ ಖರೀದಿಸಲಾಗುವುದು. ಮಹಿಳೆಯರಿಗೆ ಸೀರೆಗೆ ಬದಲು ಚೂಡಿದಾರ್ ಹಾಕಿಕೊಳ್ಳಲು ಅವಕಾಶ ನೀಡಲಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


