ಮೂರನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ: ನೊಟೀಸ್ ಗೆ ಕ್ಯಾರೇ ಎನ್ನದ ಸಿಬ್ಬಂದಿ, ಪ್ರಯಾಣಿಕರ ಪರದಾಟ
ರಾಜ್ಯ ರಸ್ತೆ ಸಾರಿಗೆ ಇಲಾಖೆಯ ನಾಲ್ಕು ನಿಗಮದ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಪ್ರಯಾಣಕ್ಕೆ ಬಸ್ಸನ್ನೇ ನಂಬಿಕೊಂಡಿರುವ ಜನಸಾಮಾನ್ಯರ ಮೇಲೆ ಮುಷ್ಕರದ ಬಿಸಿ ತೀವ್ರವಾಗಿ ತಟ್ಟಿದೆ.

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಇಲಾಖೆಯ ನಾಲ್ಕು ನಿಗಮದ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಪ್ರಯಾಣಕ್ಕೆ ಬಸ್ಸನ್ನೇ ನಂಬಿಕೊಂಡಿರುವ ಜನಸಾಮಾನ್ಯರ ಮೇಲೆ ಮುಷ್ಕರದ ಬಿಸಿ ತೀವ್ರವಾಗಿ ತಟ್ಟಿದೆ.
ಇಂದು ಕೂಡ ಸಾರಿಗೆ ಇಲಾಖೆ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಬಿಗಿಪಟ್ಟು ಹಿಡಿದು ಕುಳಿತಿದ್ದಾರೆ. ಈ ಮಧ್ಯೆ ಸಾರಿಗೆ ಇಲಾಖೆ ಅಧಿಕಾರಿಗಳು ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ನೊಟೀಸ್ ನೀಡಿದ್ದು, ಸಿಬ್ಬಂದಿ ಅದಕ್ಕೆ ಕ್ಯಾರೇ ಅಂದಿಲ್ಲ ಎಂದು ತಿಳಿದುಬಂದಿದೆ.
ಅನಿವಾರ್ಯವಾಗಿ ಪ್ರಯಾಣಿಸಬೇಕಾದ ಜನರು ದುಪ್ಪಟ್ಟು ಹಣ ಕೊಟ್ಟು, ಬೆಂಗಳೂರಿನಂತಹ ಸಿಟಿಗಳಲ್ಲಿ ಆಟೋ ಚಾಲಕರು ಕೇಳಿದ ದರವನ್ನು ನೀಡಿ ಪ್ರಯಾಣಿಸಬೇಕಾದ ಪರಿಸ್ಥಿತಿ.
ಸಾಲು, ಸಾಲು ರಜೆ, ಪ್ರಯಾಣಿಕರಿಗೆ ಸಂಕಷ್ಟ, ಖಾಸಗಿ ಬಸ್ಸುಗಳಿಗೆ ಹಬ್ಬ: ನಾಳೆ ವಾರಾಂತ್ಯ, ನಾಡಿದ್ದು ಸೋಮವಾರ ಒಂದು ದಿನ ರಜೆ ಹಾಕಿದರೆ, ಮಂಗಳವಾರ ಯುಗಾದಿ ಹಬ್ಬ ಇರುವುದರಿಂದ ನಾಲ್ಕು ದಿನ ರಜೆಯೆಂದು ಊರಿಗೆ ಹೋಗಬೇಕೆಂದವರು ಖಾಸಗಿ ಬಸ್ಸನ್ನೇ ನಂಬಿಕೊಳ್ಳಬೇಕಾಗಿದೆ, ಇಲ್ಲವೇ ರೈಲುಗಳಲ್ಲಿ ಊರಿಗೆ ಹೋಗುವವರು ಹೆಚ್ಚಾಗಿರುವುದರಿಂದ ರೈಲುಗಳಲ್ಲಿ ದಟ್ಟಣೆ ತೀವ್ರವಾಗಿರಬಹುದು.
ಬಸ್ ಮುಷ್ಕರ ಹಿನ್ನೆಲೆಯಲ್ಲಿ ಖಾಸಗಿ ಬಸ್ಸುಗಳು ಕೇಳಿದಷ್ಟು ಹಣ ನೀಡಿ ಊರಿಗೆ ಹೋಗಬೇಕಾದ ಅನಿವಾರ್ಯ ಪ್ರಯಾಣಿಕರದ್ದು. ಬಸ್ ಮುಷ್ಕರ ಹಿನ್ನೆಲೆ ಕಳೆದ ಎರಡು ದಿನಗಳಿಂದ ಉತ್ತರ ಕರ್ನಾಟಕ ಭಾಗಕ್ಕೆ ಖಾಸಗಿ ಬಸ್ ಗಳು ಅಷ್ಟೊಂದು ಕಂಡುಬಂದಿಲ್ಲ. ಹುಬ್ಬಳ್ಳಿ, ರಾಯಚೂರು, ಕಲಬುರ್ಗಿ, ಬೀದರ್, ಬಾಗಲಕೋಟೆ, ವಿಜಯಪುರ, ಬೆಳಗಾವಿ ಸೇರಿದಂತೆ ಇತರೆ ಭಾಗಕ್ಕೆ ಬಸ್ ಸಮಸ್ಯೆ ಇದ್ದು, ಹಬ್ಬದ ಕಾರಣ ಊರಿಗೆ ಹೋಗುವ ಜನರಿಗೆ ಸಮಸ್ಯೆ ಕಾಡಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


