ತಿರುಮಲದಲ್ಲಿಂದು ಬ್ರಹ್ಮೋತ್ಸವ ಕಾರ್ಯಕ್ರಮಗಳು: ತಿಮ್ಮಪ್ಪನಿಗೆ ಪಟ್ಟೆವಸ್ತ್ರ ಸಮರ್ಪಿಸಲಿರುವ ಸಿಎಂ ಯಡಿಯೂರಪ್ಪ
ಕೊರೋನಾ ಸಂಕಷ್ಟದ ನಡುವಲ್ಲೇ ಆಂಧ್ರಪ್ರದೇಶದ ತಿರುಮಲದಲ್ಲಿ ಸಾಲಕೊಟ್ಲ ಬ್ರಹ್ಮೋತ್ಸವದ ಸಂಭ್ರಮ ಮನೆ ಮಾಡಿದ್ದು, ತಿರುಮಲದಲ್ಲಿಂದು 5ನೇ ದಿನದ ಸಾಲಕೊಟ್ಲ ಬ್ರಹ್ಮೋತ್ಸವ ಕಾರ್ಯಕ್ರಮ ವೆಂಕಟೇಶ್ವರ ದೇವಾಲಯದಲ್ಲಿ ಜರುಗುತ್ತಿದೆ. ಬ್ರಹ್ಮೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭಾಗಿಯಾಗಲಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಬೆಂಗಳೂರು: ಕೊರೋನಾ ಸಂಕಷ್ಟದ ನಡುವಲ್ಲೇ ಆಂಧ್ರಪ್ರದೇಶದ ತಿರುಮಲದಲ್ಲಿ ಸಾಲಕೊಟ್ಲ ಬ್ರಹ್ಮೋತ್ಸವದ ಸಂಭ್ರಮ ಮನೆ ಮಾಡಿದ್ದು, ತಿರುಮಲದಲ್ಲಿಂದು 5ನೇ ದಿನದ ಸಾಲಕೊಟ್ಲ ಬ್ರಹ್ಮೋತ್ಸವ ಕಾರ್ಯಕ್ರಮ ವೆಂಕಟೇಶ್ವರ ದೇವಾಲಯದಲ್ಲಿ ಜರುಗುತ್ತಿದೆ. ಬ್ರಹ್ಮೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭಾಗಿಯಾಗಲಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ಇಂದು ಸಂಜೆ ಸಿಎಂ ಯಡಿಯೂರಪ್ಪ ಯಡಿಯೂರಪ್ಪ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಬಾಲಾಜಿಗೆ ರಾಜ್ಯಗಳ ಪರ ಪಟ್ಟೆವಸ್ತ್ರ ಸಮರ್ಪಣೆ ಮಾಡಲಿದ್ದಾರೆ.
ಇಂದು ಮೋಹಿನಿ ಅವತಾರದಲ್ಲಿ ಶ್ರೀನಿವಾಸ ಭಕ್ತರಿಗೆ ಅಭಯ ನೀಡಲಿದ್ದಾನೆ. ರಾತ್ರಿ 8 ಗಂಟೆಯಿಂದ ಗರುಡ ವಾಹನದ ಮೇಲೆ ಮಲೆಯಪ್ಪಸ್ವಾಮಿ ಮೆರವಣಿಗೆ ನಡೆಯುತ್ತೆ. ಕೋವಿಡ್ ನಿರ್ಬಂಧನೆಗಳ ಕಾರಣ ಕಲ್ಯಾಣೋತ್ಸವ ಕೇವಲ ಮಂಟಪ್ಪಕ್ಕೆ ಕಾರ್ಯಕ್ರಮಗಳನ್ನು ಸೀಮಿತ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


