ಮಂಗಳೂರು: ಚಿರತೆಗೆ ಪ್ರಸವ ವೇದನೆ, ಶಸ್ತ್ರ ಚಿಕಿತ್ಸೆ, ಹೊಟ್ಟೆಯಲ್ಲೆ ಮೃತಪಟ್ಟ ಮರಿಗಳು!
ಪಿಲಿಕುಳ ನಿಸರ್ಗ ಧಾಮದ ಮೃಗಾಲಯದಲ್ಲಿರುವ ಎಂಟು ವರ್ಷ ಪ್ರಾಯದ ಹೆಣ್ಣು ಚಿರತೆ ಚಿಂಟುವಿಗೆ ಪ್ರಸವ ಸಮಸ್ಯೆಯಿಂದ ಸ್ಥಿತಿ ಗಂಭೀರವಾಗಿತ್ತು.

ಮಂಗಳೂರು: ಪಿಲಿಕುಳ ನಿಸರ್ಗ ಧಾಮದ ಮೃಗಾಲಯದಲ್ಲಿರುವ ಎಂಟು ವರ್ಷ ಪ್ರಾಯದ ಹೆಣ್ಣು ಚಿರತೆ ಚಿಂಟುವಿಗೆ ಪ್ರಸವ ಸಮಸ್ಯೆಯಿಂದ ಸ್ಥಿತಿ ಗಂಭೀರವಾಗಿತ್ತು.
ಬಳಿಕ ತುರ್ತಾಗಿ ಶಸ್ತ್ರ ಚಿಕಿತ್ಸೆ ನಡೆಸಿ ಗರ್ಭದಲ್ಲಿದ್ದ ಎರಡು ಮೃತಪಟ್ಟ ಮರಿಗಳನ್ನು ಹೊರತೆಗೆಯಲಾಯಿತು. ಶಸ್ತ್ರ ಚಿಕಿತ್ಸೆಯ ನಂತರ ಚಿರತೆ ಚೇತರಿಸುತ್ತಿದ್ದು, ಮೃಗಾಲಯದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಚಿರತೆಯ ಆರೋಗ್ಯದ ಬಗ್ಗೆ ನಿಗಾವಹಿಸಿದ್ದಾರೆ.
ಶಸ್ತ್ರಚಿಕಿತ್ಸೆನ್ನು ಮೃಗಾಲಯದ ವೈದ್ಯಾಧಿಕಾರಿ ಡಾ. ವಿಷ್ಣುದತ್ ಮತ್ತು ಡಾ. ಯಶಸ್ವಿ ನಡೆಸಿದರು.
ಎಂಟು ವರ್ಷಗಳ ಹಿಂದೆ ತಾಯಿಯಿಂದ ಪರಿತಕ್ತವಾದ ಐದು ದಿನಗಳ ಮರಿಯನ್ನು ಮೂಡುಬಿದರೆ ಸಮೀಪದಿದಂದ ರಕ್ಷಿಸಿ ಪಿಲಿಕುಳ ಮೃಗಾಲಯದಲ್ಲಿ ಚಿಂಟು ಎಂದು ಹೆಸರಿಟ್ಟು ಪೋಷಿಸಿ ಬೆಳೆಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


