ಡಿಸಿಎಂ ಸ್ಥಾನಕ್ಕಾಗಿ ಶಕ್ತಿ ದೇವತೆ ಬಳಿ ಬೇಡಿಕೊಂಡ ಸಚಿವ ಶ್ರೀರಾಮುಲು
ತಮ್ಮನ್ನು ರಾಜ್ಯ ಉಪ ಮುಖ್ಯಮಂತ್ರಿಯಾಗಿ ಮಾಡಬೇಕೆಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಶಕ್ತಿ ದೇವತೆ ಬಳಿ ಬೇಡಿಕೊಂಡಿದ್ದಾರೆಂದು ತಿಳಿದುಬಂದಿದೆ.

ಯಾದಗಿರಿ: ತಮ್ಮನ್ನು ರಾಜ್ಯ ಉಪ ಮುಖ್ಯಮಂತ್ರಿಯಾಗಿ ಮಾಡಬೇಕೆಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಶಕ್ತಿ ದೇವತೆ ಬಳಿ ಬೇಡಿಕೊಂಡಿದ್ದಾರೆಂದು ತಿಳಿದುಬಂದಿದೆ.
ಗುರುವಾರ ಕಲ್ಯಾಣಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಬುಧವಾರ ಸಂಜೆಯೇ ಯಾದಗಿರಿಗೆ ಆಗಮಿಸಿದ್ದ ಶ್ರೀರಾಮುಲು ಅವರು, ಸಂಜೆ ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಲ ಸಮೀಪದ ಗಡೇ ದುರ್ಗಾ ದೇವೆ ದರ್ಶನಕ್ಕೆ ತೆರಳಿದ್ದರು.
ಚೀಟಿ ಬರೆದು ದೇವಿ ಪದತಲದಲ್ಲಿ ಇಟ್ಟರೆ ಹರಕೆಗಳು ಈಡೇರುತ್ತದೆ ಎನ್ನುವ ನಂಬಿಕೆ ಭಕ್ತರದ್ದು. ಹೀಗಾಗಿ ಡಿಸಿಎಂ ಸ್ಥಾನಕ್ಕಾಗಿ ಶ್ರೀರಾಮುಲು ಬೇಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಅವರು ಬರೆದರು ಎನ್ನಲಾದ ಚೀಟಿಯಲ್ಲಿ ಶ್ರೀರಾಮುಲು, ಡೆಪ್ಯುಟಿ ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ, ಮಸ್ಟ್-ಕಂಪಲ್ಸರಿ ಎಂದಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ನೇಹಿತರಿಂದ ಈ ದೇವಸ್ಥಾನದ ಬಗ್ಗೆ ತಿಳಿದಿತ್ತು. ಮನಸ್ಸಿನಲ್ಲಿರುವುದನ್ನು ದೇವಿಗೆ ಬೇಡಿಕೊಂಡಿದ್ದೇನೆ. ಒಳ್ಳೆಯದಾಗಲಿ, ದೇವಿಯೆದುರು ಹೇಳಿಕೊಂಡ ವಿಚಾರ ಬಹಿರಂಗಪಡಿಸಬಾರದು. ಇದು ನನ್ನ ಹಾಗೂ ದೇಯ ನಡುವೆಯೇ ಇರುವ ವಿಚಾರ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


