ರಾಜ್ಯ

ಕಾರವಾರ: ಅಳಿವಿನಂಚಿನಲ್ಲಿರುವ  ಪೆಸಿಫಿಕ್ ರಿಡ್ಲೆ ಆಮೆ ಮೃತದೇಹ ಪತ್ತೆ

ಅಳಿವಿನಂಚಿನಲ್ಲಿರುವ ಅಪರೂಪದ ಪೆಸಿಫಿಕ್ ರಿಡ್ಲೆ ಕಡಲಾಮೆಯ ಮೃತದೇಹವೊಂದು ಕಾರವಾರದಲ್ಲಿ ಪತ್ತೆಯಾಗಿದೆ. ಮೀನುಗಾರರು ಬೀಸಿದ್ದ ಬಲೆಗೆ ಸಿಕ್ಕು ಕಾರವಾರದ ಕೋಡಿಭಾಗ್ ಬ್ರಿಡ್ಜ್ ಸಮೀಪ ಆಮೆ ಮೃತದೇಹ ಸಿಕ್ಕಿದೆ.

ಕಾರವಾರ: ಅಳಿವಿನಂಚಿನಲ್ಲಿರುವ  ಪೆಸಿಫಿಕ್ ರಿಡ್ಲೆ ಆಮೆ ಮೃತದೇಹ ಪತ್ತೆ
ಪೆಸಿಫಿಕ್ ರಿಡ್ಲೆ ಆಮೆ
Published On :

ಕಾರವಾರ: ಅಳಿವಿನಂಚಿನಲ್ಲಿರುವ ಅಪರೂಪದ ಪೆಸಿಫಿಕ್ ರಿಡ್ಲೆ ಕಡಲಾಮೆಯ ಮೃತದೇಹವೊಂದು ಕಾರವಾರದಲ್ಲಿ ಪತ್ತೆಯಾಗಿದೆ. ಮೀನುಗಾರರು ಬೀಸಿದ್ದ ಬಲೆಗೆ ಸಿಕ್ಕು ಕಾರವಾರದ ಕೋಡಿಭಾಗ್ ಬ್ರಿಡ್ಜ್  ಸಮೀಪ ಆಮೆ ಮೃತದೇಹ ಸಿಕ್ಕಿದೆ. 

ಭಾರತದ ಪೂರ್ವ ಕರಾವಳಿ ರಾಜ್ಯ ಒಡಿಶಾದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಕಡಲಾಮೆಗಳು ಕಾಣಿಸಿಕೊಳ್ಳುತ್ತದೆ. ಇವನ್ನು ಸಮುದ್ರ ಕಲ್ಮಶಗಳನ್ನು ಶುದ್ದೀಕರಿಸುವ ಆಮೆಗಳು ಎಂದೇ ಗುರುತಿಸಲಾಗುತ್ತದೆ. ಲೆಪಿಡೊಕೆಲಿಸ್ ಓಲಿವೆಸಿ ಎಂಬ ವೈಜ್ಞಾನಿಕ ಹೆಸರುಳ್ಳ ಈ ಕಡಲಾಮೆ ಸಂತತಿ ಕರ್ನಾಟಕದಲ್ಲಿ ಕಾಣಿಸಿಕೊಳ್ಳುವುದು ಅಪರೂಪ.

ರಾಜ್ಯದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಮೀನುಗಾರಿಕೆಯಿಂದ ಈ ಕಡಲಾಮೆಗಳ ಸಂತತಿ ನಾಶವಾಗುತ್ತಿದೆ ಎನ್ನಲಾಗಿದೆ. ಜತೆಗೆ ಜನರು ಈ ಆಮೆಗಳನ್ನು ತಿನ್ನುವುದಕ್ಕಾಗಿಯೂ ಬೇಟೆಯಾಡುತ್ತಾರೆ. ಅರಣ್ಯ ಇಲಾಖೆ ಈ ಆಮೆಗಳ ಬೇಟೆ ನಿಷೇಧಿಸಿದ್ದರೂ ರಾಜ್ಯದಲ್ಲಿ ಇವುಗಳ ಬೇಟೆ ಕಾನೂನುಬಾಹಿರವಾಗಿ ನಡೆದಿದೆ ಎಂದು ವರದಿಯಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.