ರಾಜ್ಯ

ಚಳಿಗಾಲದ ಅಧಿವೇಶನಕ್ಕೆ ಬರುವ ಶಾಸಕರು,ಸಚಿವರು,ಮಾಧ್ಯಮದವರಿಗೆ ಕೊರೋನಾ ಟೆಸ್ಟ್ ಕಡ್ಡಾಯ : ಸ್ಪೀಕರ್ ಕಾಗೇರಿ

ಇದೇ ತಿಂಗಳ 21 ರಿಂದ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದು,ಸಚಿವ ರು,ಶಾಸಕರು, ಅಧಿಕಾರಿಗಳು,ಮಾಧ್ಯಮದವರೂ ಸೇರಿದಂತೆ ಅಧಿವೇಶನಕ್ಕೆ ಬರುವ ಪ್ರತಿಯೊಬ್ಬರು ಕೋವಿಡ್ ಟೆಸ್ಟ್ ಮಾಡಿಸಲು ನಿರ್ಧರಿಸಲಾಗಿದೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಚಳಿಗಾಲದ ಅಧಿವೇಶನಕ್ಕೆ ಬರುವ ಶಾಸಕರು,ಸಚಿವರು,ಮಾಧ್ಯಮದವರಿಗೆ ಕೊರೋನಾ ಟೆಸ್ಟ್ ಕಡ್ಡಾಯ : ಸ್ಪೀಕರ್ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ
Published On :

ಬೆಂಗಳೂರು: ಇದೇ ತಿಂಗಳ 21 ರಿಂದ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದು,ಸಚಿವ ರು,ಶಾಸಕರು, ಅಧಿಕಾರಿಗಳು,ಮಾಧ್ಯಮದವರೂ ಸೇರಿದಂತೆ ಅಧಿವೇಶನಕ್ಕೆ ಬರುವ ಪ್ರತಿಯೊಬ್ಬರು ಕೋವಿಡ್ ಟೆಸ್ಟ್ ಮಾಡಿಸಲು ನಿರ್ಧರಿಸಲಾಗಿದೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಅಧಿವೇಶನ ಆರಂಭಕ್ಕೆ ಮೂರು ದಿನದ ಮೊದಲೇ ಪ್ರತಿಯೊಬ್ಬರು ಕೋವಿಡ್ ಟೆಸ್ಟ್ ಮಾಡಿಸಿ ದಾಖಲೆ ತರುವುದು ಕಡ್ಡಾಯಗೊಳಿಸಲಾಗಿದೆ.ಸೆಪ್ಟಂಬ ರ್ 21 ರಿಂದ 30 ರವರೆಗೆ ಕಲಾಪ ನಡೆಯಲಿದೆ.ವಿಧಾನಸಭೆಯ ಕಲಾಪದಲ್ಲಿ ಪಾಲ್ಗೊಳ್ಳುವವರಿಗೆ ಕೋವಿಡ್ ಟೆಸ್ಟ್ ಅನ್ವಯವಾಗುತ್ತದೆ.ಜಿಲ್ಲಾ,ತಾಲೂಕು ಕೇಂದ್ರದಲ್ಲಿ ತಪಾಸಣೆ ನಡೆಯಲಿದೆ.ಆರ್ ಟಿಪಿಸಿಆರ್ ಟೆಸ್ಟ್ ಮಾಡಿಸುವಂತೆ ಸೂಚಿಸಿದ್ದೇವೆ ಎಂದು ಅವರು ತಿಳಿಸಿದರು. 

ಶಾಸಕರು ಅವರವರ ಕ್ಷೇತ್ರದಲ್ಲೇ ಕೋವಿಡ್ ಟೆಸ್ಟ್ ಮಾಡಿಸಬಹುದು, ಬೇರೆಯವರಿಗೆ ಹರಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಇನ್ನು ಸಿಬ್ಬಂದಿಗಳಿಗೆ ಸೆ.18 ರಂದು ಕೊರೊನಾ ಪರೀಕ್ಷೆಯನ್ನು ವಿಧಾನಸೌಧದಲ್ಲಿಯೇ ಮಾಡಿಸಲು ವ್ಯವಸ್ಥೆ ಮಾಡಲಾಗಿದೆ

ಕಲಾಪದ ಅವಧಿಯಲ್ಲಿ ಯಾವ ಬದಲಾವಣೆ ಇಲ್ಲ. ವಿಧಾನಮಂಡಲದಲ್ಲಿ ಸೀಟಿನ ಮಧ್ಯೆ ಪಾರದರ್ಶಕ ಪ್ಲಾಸ್ಟಿಕ್ ಶೀಟ್ ಹಾಖಲಾಗಿದ್ದು ಅಧಿಕಾರಿಗಳು, ಮಾದ್ಯಮದವರು ಕೂರುವ ಸ್ಥಳದ ಬಗೆಗೆ ಇನ್ನೂ ತೀರ್ಮಾನವಾಗಿಲ್ಲ. ಅಧಿವೇಶನದ ವೇಳೆ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಊರು ದಿನಕ್ಕೆ ಮುನ್ನ ಸದಸ್ಯರು ಕೋವಿಡ್ ವರದಿ ನೀಡುವುಉದು ಕಡ್ಡಾಯ ಎಂದು ಕಾಗೇರಿ ಹೇಳಿದ್ದಾರೆ.

ಈ ಬಾರಿ ಎಂಟಿ ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ 31 ವಿಧೇಯಕಗಳು ಮಂಡನೆಯಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.