ಕಾಮೆಡ್-ಕೆ:ಟಾಪ್ 100 ರ್ಯಾಂಕ್ ಪಡೆದವರಲ್ಲಿ 45 ಅಭ್ಯರ್ಥಿಗಳು ಕರ್ನಾಟಕದವರು
ವೃತ್ತಿ ಶಿಕ್ಷಣ ಪ್ರವೇಶಕ್ಕೆ ನಡೆಸುವ ಕಾಮೆಡ್-ಕೆ ಪರೀಕ್ಷೆಯಲ್ಲಿ ಟಾಪ್ 100 ರ್ಯಾಂಕ್ ಪಡೆದವರಲ್ಲಿ ಒಟ್ಟು 45 ಮಂದಿ ಕರ್ನಾಟಕದ ಅಭ್ಯರ್ಥಿಗಳಾಗಿದ್ದಾರೆ.

ಬೆಂಗಳೂರು: ವೃತ್ತಿ ಶಿಕ್ಷಣ ಪ್ರವೇಶಕ್ಕೆ ನಡೆಸುವ ಕಾಮೆಡ್-ಕೆ ಪರೀಕ್ಷೆಯಲ್ಲಿ ಟಾಪ್ 100 ರ್ಯಾಂಕ್ ಪಡೆದವರಲ್ಲಿ ಒಟ್ಟು 45 ಮಂದಿ ಕರ್ನಾಟಕದ ಅಭ್ಯರ್ಥಿಗಳಾಗಿದ್ದಾರೆ.
ಮೊದಲ 10 ರ್ಯಾಂಕ್ ಗಳಲ್ಲಿ ಇಬ್ಬರಾದ ಮೊದಲ ರ್ಯಾಂಕ್ ಗಳಿಸಿದ ರಕ್ಷಿತ್ ಎಂ ಮತ್ತು ಸಾದನ್ ಹುಸೇನ್ 7ನೇ ರ್ಯಾಂಕ್ ಪಡೆದವರು ಬೆಂಗಳೂರಿಗರಾಗಿದ್ದಾರೆ. ಕಳೆದ ಆಗಸ್ಟ್ 19ರಂದು ಕಾಮೆಡ್ -ಕೆ 300 ಕೇಂದ್ರಗಳಲ್ಲಿ ಪ್ರಸಕ್ತ ವರ್ಷ 20 ಸಾವಿರ ಸೀಟುಗಳಿಗೆ ಆನ್ ಲೈನ್ ಮೂಲಕ ಪರೀಕ್ಷೆ ನಡೆಸಿತ್ತು.
ಸಾವಿರ ರ್ಯಾಂಕ್ ಒಳಗಿನವರಲ್ಲಿ 346 ಎಂಜಿನಿಯರಿಂಗ್ ಸೀಟು ಆಕಾಂಕ್ಷಿಗಳು ಕರ್ನಾಟಕದವರಾಗಿದ್ದು ಉಳಿದ 654 ಆಕಾಂಕ್ಷಿಗಳು ಬೇರೆ ರಾಜ್ಯದವರಾಗಿದ್ದಾರೆ. ಅರ್ಹ ಅಭ್ಯರ್ಥಿಗಳ ರ್ಯಾಂಕ್ ಕಾರ್ಡುಗಳು ಕಾಮೆಡ್ ಕೆ ವೆಬ್ ಸೈಟ್ www.comedk.orgಯಲ್ಲಿ ಲಭ್ಯವಿರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


