ಸ್ಯಾಂಡಲ್ವುಡ್'ನಲ್ಲಿ ಡ್ರಗ್ಸ್ ದಂಧೆ: ಪುರಾವೆ ನೀಡದ ಕಾರಣ ಮತ್ತೆ ಇಂದ್ರಜಿತ್'ಗೆ ಸಿಸಿಬಿ ಬುಲಾವ್
ಕೆಲ ದಿನಗಳಿಂದ ಕನ್ನಡ ಚಲನಚಿತ್ರರಂಗದ ಮಾದಕ ವ್ಯಸನಿಗಳ ವಿರುದ್ಧ ಗುಟುರು ಹಾಕಿ ಭಾರೀ ಪ್ರಚಾರದಲ್ಲಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್, ಸಿಸಿಬಿ ವಿಚಾರಣೆ ವೇಳೆ ವ್ಯಸನಿಗಳ ಕುರಿತು ಯಾವುದೇ ಪುರಾವೆ ನೀಡದೆ ಮರಳಿದ್ದಾರೆಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಇಂದ್ರಜಿತ್ ಲಂಕೇಶ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ...

ಬೆಂಗಳೂರು: ಕೆಲ ದಿನಗಳಿಂದ ಕನ್ನಡ ಚಲನಚಿತ್ರರಂಗದ ಮಾದಕ ವ್ಯಸನಿಗಳ ವಿರುದ್ಧ ಗುಟುರು ಹಾಕಿ ಭಾರೀ ಪ್ರಚಾರದಲ್ಲಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್, ಸಿಸಿಬಿ ವಿಚಾರಣೆ ವೇಳೆ ವ್ಯಸನಿಗಳ ಕುರಿತು ಯಾವುದೇ ಪುರಾವೆ ನೀಡದೆ ಮರಳಿದ್ದಾರೆಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಇಂದ್ರಜಿತ್ ಲಂಕೇಶ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದಾರೆಂದು ತಿಳಿದುಬಂದಿದೆ.
ಪುರಾವೆ ನೀಡದ ಕಾರಣ ಸಿಸಿಬಿ ಪೊಲೀಸರು ಇಂದ್ರಜಿತ್ ಅವರನ್ನು ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನಲ್ಲಿ ಸೂಚಿಸಿದ್ದು, ತಾವು ಮಾಡುವ ಆರೋಪಗಳಿಗೆ ಸೂಕ್ತ ಪುರಾವೆಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆಂದು ತಿಳಿದುಬಂದಿದೆ.
ಸೋಮವಾರ ವಿಚಾರಣೆ ನಂಂತರ ಕೆಲವರ ಹೆಸರು ಹಾಗೂ ದಾಖಲೆಗಳನ್ನು ತಾವು ನೀಡಿದ್ದಾಗಿ ಇಂದ್ರಜಿತ್ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಂಟಿ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ಅವರು, ಕನ್ನಡ ಚಲನಚಿತ್ರ ರಂಗದ ಕೆಲವರಿಗೆ ಮಾದಕ ಜಾಲತ ನಂಟಿನ ಆರೋಪ ಸಂಬಂಧ ಮಾಹಿತಿ ಪಡೆಯಲು ಇಂದ್ರಜಿತ್ ಅವರನ್ನು ವಿಚಾರಣೆಗೆ ಕರೆಸಲಾಗಿತ್ತು. ವಿಚಾರಣೆ ವೇಳೆ ಕೆಲವರ ಹೆಸರನ್ನು ಅವರು ಪ್ರಸ್ತಾಪಿಸಿದ್ದಾರೆ. ಆದರೆ, ಅದಕ್ಕೆ ಪೂರಕವಾದ ಯಾವುದೇ ಸಾಕ್ಷ್ಯಗಳನ್ನು ಇಂದ್ರಜಿತ್ ಒದಗಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ಹೇಳಿಕೆಗೆ ಯಾವುದೇ ರೀತಿತ ಮೆಟಿರಿಯಲ್ (ಆಡಿಯೋ ವಿಡಿಯೋ) ಅಥವಾ ಇನ್ನಾವುದೇ ಸಾಕ್ಷ್ಯಗಳನ್ನು ಇಂದ್ರಜಿತ್ ಸಲ್ಲಿಸಿಲ್ಲ. ಮತ್ತೆ ಇಂದ್ರಜಿತ್'ರಿಗೆ ಡ್ರಗ್ಸ್ ಬಗ್ಗೆ ತಮ್ಮಲ್ಲಿರುವ ಮಾಹಿತಿ ಹಾಗೂ ದಾಖಲೆ ಸಲ್ಲಿಸುವಂತೆ ಸೂಚಿಸಲಾಗುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


