ಚಿತ್ರದುರ್ಗ: ಮದ್ಯದಂಗಡಿಗೆ ಎನ್ಒಸಿಗೆ ಒತ್ತಾಯಿಸಿ ಅಬಕಾರಿ ಕಚೇರಿ ಎದುರು ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಧರಣಿ
ರಾಜ್ಯ ಸರ್ಕಾರದಿಂದ ಮಂಜೂರಾಗಿದ್ದ ಎಂಎಸ್ ಐಎಲ್ ಅಂಗಡಿಗೆ ಎನ್ ಒಸಿ ನೀಡಲು ವಿಳಂಬವಾದ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರದ ಅಬಕಾರಿ ಕಚೇರಿ ಎದುರು ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಧರಣಿ ನಡೆಸಿದರು

ಚಿತ್ರದುರ್ಗ: ರಾಜ್ಯ ಸರ್ಕಾರದಿಂದ ಮಂಜೂರಾಗಿದ್ದ ಎಂಎಸ್ ಐಎಲ್ ಅಂಗಡಿಗೆ ಎನ್ ಒಸಿ ನೀಡಲು ವಿಳಂಬವಾದ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರದ ಅಬಕಾರಿ ಕಚೇರಿ ಎದುರು ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಧರಣಿ ನಡೆಸಿದರು.
ಚಿತ್ರದುರ್ಗ ಹೊಸದುರ್ಗ ಪಟ್ಟಣ ಹಾಗೂ ಶ್ರೀರಾಂಪುರ ಗ್ರಾಮಕ್ಕೆ ಕಳೆದ ಎಂಟು ತಿಂಗಳ ಹಿಂದೆ ಎಂಎಸ್ ಐಎಲ್ ಮಂಜೂರಾಗಿತ್ತು. ಎನ್ ಒಸಿ ನೀಡದೆ ನಿರ್ಲಕ್ಷ್ಯ ತೋರಿದ್ದರಿಂದ ಅಬಕಾರಿ ಅಧಿಕಾರಿಗಳ ಕ್ರಮಕ್ಕೆ ಸ್ವತಃ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕರ ಧರಣಿ ವಿಷಯ ತಿಳಿದ ಅಬಕಾರಿ ಜಿಲ್ಲಾ ಅಧಿಕಾರಿ ಧರಣಿ ಸ್ಥಳಕ್ಕೆ ದೌಡಾಯಿಸಿದರು.ಕೂಡಲೇ ಕೆಲಸ ಮಾಡಿ ಕೊಡುವುದಾಗಿ ಹೇಳಿ, ಅಬಕಾರಿ ಜಿಲ್ಲಾ ಅಧಿಕಾರಿ ನಾಗಶಯನ ಶಾಸಕರ ಬಳಿ ಕ್ಷಮೆ ಕೇಳಿದ್ದಾರೆ.
ಅಧಿಕಾರಿ ಕ್ಷಮೆ ಕೇಳಿದ್ದರಿಂದ ಶಾಸಕ ಗೂಳಿಹಟ್ಟಿ ಶೇಖರ್ ಧರಣಿ ಕೈಬಿಟ್ಟರು, ಹೊಸದುರ್ಗ ಮತ್ತು ರಾಮಪುರಗಳಲ್ಲಿರುವ ಅಂಗಡಿಗಳು ಬಡಜನರನ್ನು ಸುಲಿಗೆ ಮಾಡುತ್ತಿವೆ, ಹೀಗಾಗಿ ಹೊಸದುರ್ಗ ಮತ್ತು ಶ್ರೀರಾಂಪುರಗಳಲ್ಲಿ ಎಂಎಸ್ ಐಎಲ್ ಮಳಿಗೆ ಸ್ಥಾಪಿಸಬೇಕೆಂದು ಗೂಳಿಹಟ್ಟಿ ಶೇಖರ್ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


