ರಾಜ್ಯ

ಬೆಂಗಳೂರು: ವೈದ್ಯರ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಿಸಿದ ನರ್ಸ್

ಮತ್ತಿಕೆರೆಯ ಫ್ಯಾಮಿಲಿ ಆಸ್ಪತ್ರೆ ವೈದ್ಯ ಡಾ. ಸಿ ಎಂ ಪರಮೇಶ್ವರ್ ಎಂಬುವರ ವಿರುದ್ಧ 19 ವರ್ಷದ ನರ್ಸ್ ಲೈಂಗಿಕ ಕಿರುಕುಳ ಆರೋಪದ ದೂರು ದಾಖಲಿಸಿದ್ದಾರೆ.

ಬೆಂಗಳೂರು: ವೈದ್ಯರ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಿಸಿದ ನರ್ಸ್
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಮತ್ತಿಕೆರೆಯ ಫ್ಯಾಮಿಲಿ ಆಸ್ಪತ್ರೆ ವೈದ್ಯ ಡಾ. ಸಿ ಎಂ ಪರಮೇಶ್ವರ್ ಎಂಬುವರ ವಿರುದ್ಧ 19 ವರ್ಷದ ನರ್ಸ್ ಲೈಂಗಿಕ ಕಿರುಕುಳ ಆರೋಪದ  ದೂರು ದಾಖಲಿಸಿದ್ದಾರೆ.

ಈ ಸಂಬಂಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಯುವತಿ 2019ರಿಂದ ಪರಮೇಶ್ವರ್ ಅವರ ಜತೆ ಕೆಲಸ ಮಾಡುತ್ತಿದ್ದುದ್ದಾಗಿ ಆಕೆ ತಿಳಿಸಿದ್ದಾಳೆ.

ಆರಂಭದಲ್ಲಿ ಉದ್ದೇಶಪೂರ್ವಕವಾಗಿ ನನ್ನನ್ನು ಸ್ಪರ್ಶಿಸುತ್ತಿದ್ದರು ಮತ್ತು ಫೈಲ್ ಗಳನ್ನು ನೀಡುವಾಗ ಕೈ ಮುಟ್ಟುತ್ತಿದ್ದ, ಕೆಲ ದಿನಗಳ ನಂತರ ಮಧ್ಯರಾತ್ರಿ ಮೇಸೆಜ್ ಮಾಡುತ್ತಿದ್ದರು, ಜೊತೆಗೆ ಫೋನ್ ಮಾಡುತ್ತಿದ್ದ, ಎರಡು ಬಾರಿ ಆತನ ನಂಬರ್ ಬ್ಲಾಕ್ ಮಾಡಿದ್ದೆ, ಹಣಕಾಸಿನ ಸಮಸ್ಯೆ ಮತ್ತು ಕೋವಿಡ್ ಕಾರಣದಿಂದಾಗಿ ನಾನು ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಆತನ ಕಿರುಕುಳ ಮುಂದುವರಿದ ನಂತರ ಪ್ರಕರಣ ದಾಖಲಿಸಿದ ಯುವತಿ ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿ ನೀಡಿದ್ದಾರೆ. 

ಆದರೆ ಇದುವರೆಗೂ ಆಂತರಿಕಾ ದೂರು ಸಮಿತಿ ನೇಮಿಸಿಲ್ಲ ಜೊತೆಗೆ ಕೆಲವು ಕಾರಣಗಳಿಂದ ಸಂಘಟನೆ ಹೆಸರನ್ನು ಬಹಿರಂಗ ಪಡಿಸದಿರುವುದು ಸಂತ್ರಸ್ತೆಗೆ ಆಘಾತ ಉಂಟು ಮಾಡಿದೆ. ದೀರ್ಘಕಾಲದ ಕಿರುಕುಳಕ್ಕೆ ಸಂತ್ರಸ್ತೆಯರು ನಿರಂತರವಾಗಿ ಬಲಿಯಾಗುತ್ತಾರೆ ಎಂದು ಸಂತ್ರಸ್ತೆ ಪರ ವಕೀಲ ಅಯಂತಿಕ ಮೊಂಡಲ್ ಹೇಳಿದ್ದಾರೆ.

ಇನ್ನೂ ಆಸ್ಪತ್ರೆಯ ಮತ್ತಿಬ್ಬರು ಮಹಿಳೆಯರು ಲೈಂಗಿಕ ಕಿರುಕುಳದ ದೂರು ನೀಡಿದ್ದು, ಮೊದಲ ಸಂತ್ರಸ್ತೆ ಮತ್ತು ಮತ್ತೊಬ್ಬ ಉದ್ಯೋಗಿ ಸಾಕ್ಷಿಗಳಾಗಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡಿದ್ದು ಕೋರ್ಟ್ ಸೂಚನೆಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.