ರಾಜ್ಯ

ಧಾರಾಕಾರ ಮಳೆ ಹಿನ್ನೆಲೆ: ಭದ್ರಾ ಜಲಾಶಯದ ಗೇಟ್ ಮತ್ತೆ ಓಪನ್

ಭದ್ರಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾದ ನಂತರ, ಅಧಿಕಾರಿಗಳು ಎಲ್ಲಾ ನಾಲ್ಕು ಕ್ರೆಸ್ಟ್ ಗೇಟ್‌ಗಳನ್ನು ತೆರೆಯುವ ಮೂಲಕ 8,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದ್ದಾರೆ.

ಧಾರಾಕಾರ ಮಳೆ ಹಿನ್ನೆಲೆ: ಭದ್ರಾ ಜಲಾಶಯದ ಗೇಟ್ ಮತ್ತೆ ಓಪನ್
ಭದ್ರ ಜಲಾಶಯ
Published On :

ಶಿವಮೊಗ್ಗ: ಭದ್ರಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾದ ನಂತರ, ಅಧಿಕಾರಿಗಳು ಎಲ್ಲಾ ನಾಲ್ಕು ಕ್ರೆಸ್ಟ್ ಗೇಟ್‌ಗಳನ್ನು ತೆರೆಯುವ ಮೂಲಕ 8,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದ್ದಾರೆ.

ಈ ಋತುವಿನಲ್ಲಿ ಎರಡನೇ ಬಾರಿ ಬಲವಂತವಾಗಿ ಗೇಟ್ ಗಳನ್ನು ತೆರೆಯಲಾಗಿದೆ. ಬುಧವಾರ ಬೆಳಗ್ಗೆ ಭದ್ರಾ ಜಲಾಶಯದಲ್ಲಿ 185.11 ಟಿಎಂಸಿ ಅಡಿ ನೀರು ತುಂಬಿತ್ತು, ಜಲಾಶಯದ ಗರಿಷ್ಠ ಮಟ್ಟ 186 ಟಿಎಂಸಿಯಾಗಿದೆ. ಜಲಾಶಯದ ಒಳಹರಿವು 14,304 ಕ್ಯೂಸೆಕ್ ಮತ್ತು ಹೊರಹರಿವು 8,251 ಕ್ಯೂಸೆಕ್ ಆಗಿತ್ತು.

ಸುಮಾರು 8,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದ್ದೇವೆ ಮತ್ತು ನೀರಿನ ಒಳಹರಿವನ್ನು ಪರಿಗಣಿಸಿ, ನಾವು 10,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಬಹುದು ಎಂದು ಜಲಾಶಯದ ಕಾರ್ಯಕಾರಿ ಎಂಜಿನೀಯರ್ ಮಂಜುನಾಥ್ ಹೇಳಿದ್ದಾರೆ. 

ಬುಧವಾರ ಲಿಂಗನಮಕ್ಕಿ ಜಲಾಶಯದಲ್ಲಿನ ನೀರಿನ ಮಟ್ಟವು 1,819 ಟಿಎಂಸಿಎಫ್‌ನ ಗರಿಷ್ಠ ನೀರಿನ ಮಟ್ಟಕ್ಕಿಂತ 1,814 ಟಿಎಂಸಿ ಅಡಿಗಳಷ್ಟಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.