ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ 150 ಹೈ-ರೆಸಲ್ಯೂಷನ್ ಬಾಡಿ ಕ್ಯಾಮೆರಾ ಪೂರೈಕೆ ಶೀಘ್ರ!
ಸರ್ಕಾರಿ ಕಚೇರಿಗಳ ಆಧುನೀಕರಣದ ಭಾಗವಾಗಿ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಹೆಚ್ಚು ರೆಸೆಲ್ಯೂಷನ್ ಹೊಂದಿರುವ 150 ಬಾಡಿ ಕ್ಯಾಮರಾಗಳನ್ನು ಶೀಘ್ರವೇ ಪೂರೈಕೆ ಮಾಡಲು ನಿರ್ಧರಿಸಲಾಗಿದೆ.

ಬೆಂಗಳೂರು: ಸರ್ಕಾರಿ ಕಚೇರಿಗಳ ಆಧುನೀಕರಣದ ಭಾಗವಾಗಿ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಹೆಚ್ಚು ರೆಸೆಲ್ಯೂಷನ್ ಹೊಂದಿರುವ 150 ಬಾಡಿ ಕ್ಯಾಮರಾಗಳನ್ನು ಶೀಘ್ರವೇ ಪೂರೈಕೆ ಮಾಡಲು ನಿರ್ಧರಿಸಲಾಗಿದೆ.
1.5 ಕೋಟಿ ರೂಪಾಯಿಗಳನ್ನು ಇದಕ್ಕಾಗಿ ಮೀಸಲಿಡಲಾಗಿದ್ದು, ಶರ್ಟ್ ಗುಂಡಿಗೆ ಈ ಕ್ಯಾಮರಾಗಳನ್ನು ಧರಿಸಿ ವಾಹನ ಸಂಚಾರ ನಿಯಮಗಳ ಪಾಲನೆಯ ಮೇಲೆ ಪೊಲೀಸರು ಮತ್ತಷ್ಟು ತೀಕ್ಷ್ಣ ನಿಗಾ ವಹಿಸಬಹುದಾಗಿದೆ.
ಸತತವಾಗಿ 8 ಗಂಟೆಗಳ ಕಾಲ ಬಳಕೆ ಮಾಡಬಹುದಾಗಿರುವ ಈ ಕ್ಯಾಮರಾಗಳಲ್ಲಿ ವಿಡಿಯೋ ಹಾಗೂ ಆಡಿಯೋ ರೆಕಾರ್ಡಿಂಗ್ ಸೌಲಭ್ಯವಿದೆ, ಈ ಕ್ಯಾಮರಾಗಳು ಇನ್ನು 3 ತಿಂಗಳಲ್ಲಿ ಪೊಲೀಸರ ಬಳಕೆಗೆ ಲಭ್ಯವಾಗಲಿದೆ ಎಂದು ಪೊಲೀಸ್ ಉಪ ಆಯುಕ್ತ (ಆಡಳಿತ ವಿಭಾಗ) ನಿಶಾ ಜೇಮ್ಸ್ ತಿಳಿಸಿದ್ದಾರೆ. ವಾಹನ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಕ್ಕೆ ಪೊಲೀಸರು ಕ್ಯಾಮರಾಗಳನ್ನು ಧರಿಸುತ್ತಾರೆ.
ಈ ಹಿಂದೆ ನೀಡಲಾಗಿದ್ದ ಕ್ಯಾಮರಾಗಳಲ್ಲಿ ಕಡಿಮೆ ರೆಕಾರ್ಡಿಂಗ್ ಸಾಮರ್ಥ್ಯ, ಮೆಮೊರಿ ಸಾಮರ್ಥ್ಯವನ್ನು ಹೊಂದಿದ್ದವು, ಈಗ ನೀಡಲಾಗುತ್ತಿರುವ ಕ್ಯಾಮರಾಗಳಲ್ಲಿ ಬ್ಲೂಟೂತ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳಿವೆ ಎಂದು ಸಂಚಾರ ವಿಭಾಗದ ಡಿಸಿಪಿ (ಪೂರ್ವ) ನಾರಾಯಣ್ ಎಂ ತಿಳಿಸಿದ್ದಾರೆ.
1280 x 720 ಹೆಚ್ ಡಿ ರೆಸೆಲ್ಯೂಷನ್ ಹಾಗೂ ಆಡಿಯೋ ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯ ಹೊಂದಿದ್ದು, ಬುಲೆಟ್ ಬಾಡಿ ವೋರ್ನ್ ಹಾಗೂ ಬಟನ್ ಬಾಡಿ ವೋರ್ನ್ ಎಂಬ ಎರಡು ಆವೃತ್ತಿಗಳಲ್ಲಿ ಲಭ್ಯವಾಗುತ್ತಿದೆ. ಬಟನ್ ಕ್ಯಾಮರಾಗಳ ಸಾಮರ್ಥ್ಯ ಫೀಲ್ಡ್ ಆಫ್ ವ್ಯೂ-100 ಡಿಗ್ರಿಗಳಷ್ಟಿದ್ದರೆ, ಬುಲೆಟ್ ಕ್ಯಾಮರಗಳ ಸಾಮರ್ಥ್ಯ ಫೀಲ್ಡ್ ಆಫ್ ವ್ಯೂ-120 ಡಿಗ್ರಿಗಳಷ್ಟಿರಲಿದೆ.
2017 ರಲ್ಲಿಯೂ ಇಂತಹ 50 ಕ್ಯಾಮರಗಳನ್ನು ನೀಡಲಾಗಿತ್ತು. ಆದರೆ ಅದು ಉತ್ತಮ ಗುಣಮಟ್ಟದ್ದಾಗಿರಲಿಲ್ಲ. 50 ಕ್ಯಾಮರಗಾಳನ್ನು 75 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಖರೀದಿಸಲಾಗಿತ್ತು. ಉಳಿದ 90 ಕ್ಯಾಮರಾಗಳನ್ನು ಡಿಸೆಂಬರ್ ನಲ್ಲಿ ಪೂರೈಕೆ ಮಾಡಲಾಗಿತ್ತು.
ಅಶೋಕ್ ನಗರ, ಕಬ್ಬನ್ ಪಾರ್ಕ್, ಹೈ ಗ್ರೌಂಡ್ಸ್, ಶಿವಾಜಿನಗರ, ಅಲಸೂರು, ಉಪ್ಪಾರ ಪೇಟೆ, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕ್ಯಾಮರಗಾಳನ್ನು ನೀಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


