ಕೋವಿಡ್-19ನಿಂದ ಗುಣಮುಖರಾದ ನಂತರ ಮಕ್ಕಳಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆ: ವೈದ್ಯರಿಗೆ ಸವಾಲು
ಕೋವಿಡ್-19 ನಿಂದ ಗುಣಮುಖ ಹೊಂದಿದ ಮಕ್ಕಳು ತಿಂಗಳು ಕಳೆದ ನಂತರ ಕೆಲವು ರೋಗಲಕ್ಷಣಗಳನ್ನು ಹೊಂದುತ್ತಾರೆ ಎಂದು ಬೆಂಗಳೂರಿನ ವೈದ್ಯರು ಹೇಳುತ್ತಾರೆ.

ಬೆಂಗಳೂರು: ಕೋವಿಡ್-19 ನಿಂದ ಗುಣಮುಖ ಹೊಂದಿದ ಮಕ್ಕಳು ತಿಂಗಳು ಕಳೆದ ನಂತರ ಕೆಲವು ರೋಗಲಕ್ಷಣಗಳನ್ನು ಹೊಂದುತ್ತಾರೆ ಎಂದು ಬೆಂಗಳೂರಿನ ವೈದ್ಯರು ಹೇಳುತ್ತಾರೆ.
ಇತ್ತೀಚೆಗೆ 9 ವರ್ಷದ ಮಗುವನ್ನು ಆಸ್ಟರ್ ಸಿಎಂಐ ಆಸ್ಪತ್ರೆಗೆ ಕರೆತರಲಾಗಿತ್ತು. ಉರಿಯೂತ ಸಮಸ್ಯೆ ಎಂದು ಹೇಳಿಕೊಂಡು ಕಳೆದ ಮಂಗಳವಾರ ಪೋಷಕರು ಕರೆದುಕೊಂಡು ಬಂದಿದ್ದರು. ಈ ಮಗು ಕೋವಿಡ್-19ನಿಂದ ಗುಣಮುಖ ಹೊಂದಿ 45 ದಿನಗಳಾಗಿದ್ದವು.
ಕೋವಿಡ್ ಬಂದು ಗುಣವಾಗಿ 30ರಿಂದ 45 ದಿನಗಳಾದ ನಂತರ ಮಕ್ಕಳಲ್ಲಿ ಎಂಐಎಸ್ ಆಟಿಕಲ್ ಕವಾಸಕಿ ರೋಗ, ಟಾಕ್ಸಿಕ್ ಸಿಂಡ್ರೋಮ್ ನಿಂದ ಬಳಲುತ್ತಿರುವುದನ್ನು ನೋಡುತ್ತೇವೆ. ಎಂಐಎಸ್ ವೈರಸ್ ಗೆ ತೀವ್ರ ಉರಿಯೂತದ ಸಮಸ್ಯೆಯಾಗಿದೆ. ಕೋವಿಡ್ ನಿಂದ ಗುಣಮುಖ ಹೊಂದಿದ 30ರಿಂದ 45 ದಿನಗಳು ಕಳೆದ ನಂತರ ಈ ರೋಗಲಕ್ಷಣ ಏಕೆ ಕಾಣಿಸುತ್ತಿದೆ ಎಂದು ಗೊತ್ತಾಗುತ್ತಿಲ್ಲ ಎಂದು ಏಸ್ಟರ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ ಶ್ರೀಕಾಂತ್ ಜೆ ಟಿ ಹೇಳುತ್ತಾರೆ.
ಯಶವಂತಪುರದ ಕೊಲಂಬಿಯಾ ಏಷಿಯಾ ರೆಫರ್ರಲ್ ಆಸ್ಪತ್ರೆಗೆ 12 ವರ್ಷದ ಬಾಲಕ ತೀವ್ರ ಹೊಟ್ಟೆನೋವು, ಜ್ವರ, ಉರಿಯೂತ ಸಮಸ್ಯೆ, ಎದೆನೋವು ಎಂದು ಹೇಳಿಕೊಂಡು ಬಂದಿದ್ದ. ಕೋವಿಡ್-19ಗೆ ಸಂಬಂಧಪಟ್ಟಂತೆ ರೋಗಲಕ್ಷಣವಿದೆ ಎಂದು ವೈದ್ಯರು ಭಾವಿಸಿ ಪರೀಕ್ಷೆ ನಡೆಸಿದರು. ಪರೀಕ್ಷೆ ಮಾಡಿದಾಗ ಸಾರ್ಸ್-ಕೋವ್-2 ರೋಗಲಕ್ಷಣ ಪತ್ತೆಯಾಗಲಿಲ್ಲ. ಆರ್ ಟಿ-ಪಿಸಿಆರ್ ಪರೀಕ್ಷೆ ಮಾಡಿದಾಗ ಕೊರೋನಾ ದೃಢಪಟ್ಟು ಅದಕ್ಕೆ ತಕ್ಕಂತೆ ಚಿಕಿತ್ಸೆ ನೀಡಿ ವಾರದ ಬಳಿಕ ಗುಣಮುಖವಾಯಿತು.
ಅಧಿಕ ಜ್ವರ, ಮುಖದಲ್ಲಿ ಬದಲಾವಣೆ, ಕೆಂಪು ಕಣ್ಣು ಮತ್ತು ತುಟಿಗಳು, ಕೈ ಮತ್ತು ಕಾಲುಗಳು ಊದುವುದು, ಹೊಟ್ಟೆಯ ತೊಂದರೆಗಳು, ಹೊಟ್ಟೆ ನೋವು, ವಾಂತಿ, ಉಸಿರಾಟದ ತೊಂದರೆ ಮಕ್ಕಳಿಗೆ ಕಾಣಿಸಿದರೆ ತಕ್ಷಣ ಪೋಷಕರು ವೈದ್ಯರ ಬಳಿಗೆ ಹೋಗಬೇಕು. ಮಕ್ಕಳಲ್ಲಿ ಕಡಿಮೆ ರಕ್ತದೊತ್ತಡ, ರಕ್ತ ಸರಾಗವಾಗಿ ದೇಹದಲ್ಲಿ ಹರಿಯುವಿಕೆಯಲ್ಲಿ ತೊಂದರೆ, ಕೈ ಕಾಲು ಮರಗಟ್ಟಿದಂತಾಗುವುದು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಕೊಲಂಬಿಯಾ ಏಷಿಯಾ ಆಸ್ಪತ್ರೆಯ ವೈದ್ಯೆ ಡಾ ಸುಪ್ರಜಾ ಚಂದ್ರಶೇಖರ್ ಹೇಳುತ್ತಾರೆ.
ಕೊರೋನಾ ಚೇತರಿಕೆಯ ನಂತರದ ಪ್ರಕರಣಗಳು (ಅಂತಹ ಅನಾರೋಗ್ಯದ) ಮಕ್ಕಳಲ್ಲಿ ವಿರಳವಾಗಿದ್ದರೂ, ಮಕ್ಕಳು ಹೊರ ಹೋಗಿ ಬೇರೆಯವರೊಂದಿಗೆ ಬೆರೆತಾಗ ಈ ಸಂಖ್ಯೆ ಹೆಚ್ಚಾಗುತ್ತದೆ. ಕೆಲವು ಮಕ್ಕಳು, ವಿಶೇಷವಾಗಿ ಹದಿಹರೆಯದವರು, ಚೇತರಿಕೆಯ ನಂತರ ಉಸಿರಾಟದ ತೊಂದರೆ ಮತ್ತು ಆಯಾಸ ಎಂದು ಹೇಳುತ್ತಿರುತ್ತಾರೆ. ಹೃದಯ ಮತ್ತು ಶ್ವಾಸಕೋಶ ಸೇರಿದಂತೆ ದೇಹದ ಅನೇಕ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಮಣಿಪಾಲ ಆಸ್ಪತ್ರೆಯ ಡಾ ಜಗದೀಶ್ ಚಿನ್ನಪ್ಪ ಹೇಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


