ಲಂಕೇಶ್ ಆಡಿಯೋಬುಕ್ಸ್- ಲಂಕೇಶ್ ಆ್ಯಪ್ ಬಿಡುಗಡೆ
ಖ್ಯಾತ ಸಾಹಿತಿ ಪಿ. ಲಂಕೇಶ್ ಅವರ ಪುಸ್ತಕಗಳನ್ನು ಇನ್ನುಮುಂದೆ ಮೊಬೈಲ್ ಅಥವಾ ಲ್ಯಾಪ್‍ಟ್ಯಾಪ್‍ಗಳ ಮೂಲಕವೂ ಓದಬಹುದಾಗಿದೆ.

ಬೆಂಗಳೂರು: ಖ್ಯಾತ ಸಾಹಿತಿ ಪಿ. ಲಂಕೇಶ್ ಅವರ ಪುಸ್ತಕಗಳನ್ನು ಇನ್ನುಮುಂದೆ ಮೊಬೈಲ್ ಅಥವಾ ಲ್ಯಾಪ್‍ಟ್ಯಾಪ್‍ಗಳ ಮೂಲಕವೂ ಓದಬಹುದಾಗಿದೆ.
ಪತ್ರಕರ್ತ ಹಾಗೂ ನಿರ್ದೇಶಕರೂ ಆದ ಇಂದ್ರಜಿತ್ ಲಂಕೇಶ್ ತಮ್ಮ ತಂದೆ ಲಂಕೇಶ್ ಅವರ ಕೃತಿಗಳು ಓದುಗರೆಲ್ಲರಿಗೂ ಸುಲಭವಾಗಿ ಸಿಗಲೆಂದು ಅವುಗಳನ್ನೆಲ್ಲ ಡಿಜಿಟಲ್ ರೂಪಕ್ಕೆ ತಂದಿದ್ದಾರೆ.
ಲಂಕೇಶ್ ಆಡಿಯೋಬುಕ್ಸ್ ಹಾಗೂ ಲಂಕೇಶ್ ಆ್ಯಪ್‍ನ ಬಿಡುಗಡೆ ಕಾರ್ಯಕ್ರಮ ಗಾಂಧಿಭವನದಲ್ಲಿ ನಡೆಯಿತು. ಇದರ ಜತೆಗೇ ಲಂಕೇಶ್ ಪತ್ರಿಕೆಯ 41ನೇ ವರ್ಷದ ವಿಶೇಷ ಸಂಚಿಕೆ ಸಹ ಬಿಡುಗಡೆಯಾಗಿದೆ.
ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಹಾಗೂ ಸಿದ್ದರಾಮೇಶ್ವರ ಮಹಾಸಂಸ್ಥಾನದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ನಟ ಶಿವರಾಜ್‍ಕುಮಾರ್ ಅಧ್ಯಕ್ಷತೆಯಲ್ಲಿ ಈ ಸಮಾರಂಭ ನೆರವೇರಿದೆ.ಅಲ್ಲದೆ ಖ್ಯಾತ ಸಾಹಿತಿ ಡಾ.ಚಂದ್ರಶೇಖರ್ ಕಂಬಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


