ಬಿಜೆಪಿ ಮುಖಂಡ ಬಿ.ಎಲ್. ಸಂತೋಷ್ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ, ಕಿಡಿಗೇಡಿಗಳಿಂದ ಹಣಕ್ಕಾಗಿ ಡಿಮ್ಯಾಂಡ್!
ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆಯಲಾಗಿದೆ ಅಲ್ಲದೆ ಹಣಕ್ಕಾಗಿ ಬೇಡಿಕೆ ಇಡಲಾಗಿದೆ. ಈ ಬಗ್ಗೆ ಸ್ವತಃ ಸಂತೋಷ್ ಅವರೇ ತಮ್ಮ ದೃಢೀಕೃತ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆಯಲಾಗಿದೆ ಅಲ್ಲದೆ ಹಣಕ್ಕಾಗಿ ಬೇಡಿಕೆ ಇಡಲಾಗಿದೆ. ಈ ಬಗ್ಗೆ ಸ್ವತಃ ಸಂತೋಷ್ ಅವರೇ ತಮ್ಮ ದೃಢೀಕೃತ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
"ನನ್ನ ಹೆಸರಿನಲ್ಲಿ ನಕಲಿ ಖಾತೆ ಅಥವಾ ಕ್ಲೋನ್ ಖಾತೆಯನ್ನು ರಚಿಸಲಾಗಿದೆ. ಅನೇಕ ಜನರು ಸ್ನೇಹಿತರ ವಿನಂತಿಗಳನ್ನು ಪಡೆಯುತ್ತಿದ್ದಾರೆ. ದಯವಿಟ್ಟು ಹುಷಾರಾಗಿರಿ" ಎಂದು ಬಿ.ಎಲ್. ಸಂತೋಷ್ ಹೇಳೀದ್ದಾರೆ.
ಸಂತೋಷ್ ಹೆಸರಿನ ಈ ನಕಲಿ ಖಾತೆಯಲ್ಲಿ ಡಿಸ್ಪ್ಲೇ ಇಮೇಜ್ ಆಗಿ ಸಂತೋಷ್ ಅವರ ಚಿತ್ರವನ್ನೇ ಬಳಸಿಕೊಳ್ಲಲಾಗಿದೆ. ಅಸಲಿ ಖಾತೆಯಂತೆಯೇ ಕಾಣುವ ಈ ಖಾತೆಯ ಮೂಲಕ ಅವರ ಸ್ನೇಹಿತರಿಗೆ ಕಿಡಿಗೇಡಿಗಳು ಹಣದ ಬೇಡಿಕೆ ಇಡುತ್ತಿದ್ದಾರೆ. "ನನಗೆ ತುರ್ತಾಗಿ ಹದಿನೈದು ಸಾವಿರ ಹಣ ಬೇಕಿದೆ. ಎರಡೇ ತಾಸಿನಲ್ಲಿ ಹಿಂದಿರುಗಿಸುತ್ತೇನೆ ಎಂದು ಮೆಸೆಂಜರ್ ಮೂಲಕ ಸಂದೇಶ ರವಾನಿಸುತ್ತಿದ್ದಾರೆ.

ಇಂತಹಾ ಕಿಡಿಗೇಡಿಗಳ ಬಗ್ಗೆ ಸೂಕ್ತ ಎಚ್ಚರದಿಂದಿರುವಂತೆ ಸಂತೋಷ್ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


