ರಾಜ್ಯ

ಲಿಂಗಾಯತ ಸಮುದಾಯಕ್ಕೂ ಮೀಸಲಾತಿ ಅಗತ್ಯ: ಮುರುಘಾ ಮಠದ ಶ್ರೀ

ಎಲ್ಲಾ ಜಾತಿಗಳಲ್ಲೂ ಬಡವರು, ಶೋಷಿತರು ಇದ್ದು, ವೀರಶೈವ ಲಿಂಗಾಯತ ಸಮುದಾಯಕ್ಕೂಮೀಸಲಾತಿ ಆಗತ್ಯವಿದೆ. ಕೇಂದ್ರದಲ್ಲಿ ಪ್ರಾತಿನಿಧ್ಯ ದೊರೆಯಬೇಕಿದೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟಿದ್ದಾರೆ.

ಲಿಂಗಾಯತ ಸಮುದಾಯಕ್ಕೂ ಮೀಸಲಾತಿ ಅಗತ್ಯ: ಮುರುಘಾ ಮಠದ ಶ್ರೀ
ಮಹದೇಶ್ವರ ಸ್ವಾಮಿ ದೇಗುಲದಲ್ಲಿ ಸಿಎಂ ಯಡಿಯೂರಪ್ಪ
Published On :

ಚಿತ್ರದುರ್ಗ: ಎಲ್ಲಾ ಜಾತಿಗಳಲ್ಲೂ ಬಡವರು, ಶೋಷಿತರು ಇದ್ದು, ವೀರಶೈವ ಲಿಂಗಾಯತ ಸಮುದಾಯಕ್ಕೂಮೀಸಲಾತಿ ಆಗತ್ಯವಿದೆ. ಕೇಂದ್ರದಲ್ಲಿ ಪ್ರಾತಿನಿಧ್ಯ ದೊರೆಯಬೇಕಿದೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಲಿಂಗಾಯತ ಧರ್ಮ ಹಾಗೂ ಜಾತಿಯ ಅಡಿಯಲ್ಲಿ ಸುಮಾರು 80ಕ್ಕಿಂತ ಹೆಚ್ಚು ಉಪಜಾತಿಗಳು ಬರುತ್ತವೆ. ಇವುಗಳಲ್ಲಿ ಅನೇಕರು ಬಡವರು, ಶೋಷಿತರು ಇದ್ದಾರೆ. ಅಂತಹವರನ್ನು ಗುರುತಿಸಿ ಒಳಮೀಸಲಾತಿ ಕೊಡಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಯುತ್ತಿದೆ. 

ಎಲ್ಲಾ ಜಾತಿ ಜನಾಂಗದವರು ಒಳಮೀಸಲಾತಿ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಈ ನೆಲೆಯಲ್ಲಿ ಕೇಂದ್ರದಲ್ಲಿ ಒಬಿಸಿಗೆ ಸೇರಿಸುವ ಹಕ್ಕೊತ್ತಾಯವನ್ನು ನಾವು ಮಾಡುತ್ತಿದ್ದೇವೆ. 2ಎ ಮೀಸಲಾತಿಗೆ ವೀರಶೈವ ಲಿಂಗಾಯತವು ಬರಲಿ ಎಂಬ ಒತ್ತಾಸೆಯಿದೆ. ಲಿಂಗಾಯತರಲ್ಲಿ ಶ್ರೀಮಂತರು ಮತ್ತು ಬಡವರಿದ್ದಾರೆ. ಅದರಲ್ಲಿರುವ ಬಡವರಿಗೆ ಅನುಕೂಲಗಳಾಗಬೇಕು. ಹಾಗಾಗಿ ಲಿಂಗಾಯತ ಜಾತಿಯನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಿ ಶೇ.15 ಮೀಸಲಾತಿ ಕೊಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.