ರಾಜ್ಯ

ಮೈಸೂರು: ದೀಪಾವಳಿಯ ದಿನವೇ ಪತ್ನಿಯನ್ನು ಕೊಂದು ಸೀಮೆಎಣ್ಣೆ ಸುರಿದು ಸುಟ್ಟುಹಾಕಿದ ಪತಿರಾಯ!

ದೀಪಾವಳಿ ಹಬ್ಬದಂದೇ ಪತ್ನಿಯನ್ನು ಕೊಂದು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುವ ಅಮಾನುಷ ಘಟನೆ ಮೈಸೂರಿನ ಟಿ. ನರಸೀಪುರದಲ್ಲಿ ನಡೆದಿದೆ.

ಮೈಸೂರು: ದೀಪಾವಳಿಯ ದಿನವೇ ಪತ್ನಿಯನ್ನು ಕೊಂದು ಸೀಮೆಎಣ್ಣೆ ಸುರಿದು ಸುಟ್ಟುಹಾಕಿದ ಪತಿರಾಯ!
Published On :

ಮೈಸೂರು: ದೀಪಾವಳಿ ಹಬ್ಬದಂದೇ ಪತ್ನಿಯನ್ನು ಕೊಂದು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುವ ಅಮಾನುಷ ಘಟನೆ ಮೈಸೂರಿನ ಟಿ. ನರಸೀಪುರದಲ್ಲಿ ನಡೆದಿದೆ. 

ಟಿ, ನರಸೀಪುರದ  ದೊಡ್ಡಮುಲಗೂಡು ಗ್ರಾಮದ  ರಮೇಶ್(30) ಹೀಗೆ ಪತ್ನಿಯ ಕೊಲೆ ಮಾಡಿ ಬೆಂಕಿ ಹಚ್ಚಿದ ದುಷ್ಕರ್ಮಿ. ಈತ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದ  ಪತ್ನಿ ಶಾಂತಮ್ಮ(22) ಪತಿಯಿಂದ ಸಾವನ್ನಪ್ಪಿರುವ ದುರ್ದೈವಿ.

ಪಂಚಾಯತ್ ಚುನಾವಣೆಗೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ರಮೇಶ್ ಪತ್ನಿಯನ್ನು ಕೊಲೆ ಮಾಡಿದ್ದಾಗಿ ತಿಳಿದುಬಂದಿದೆ.

Story image

ಆರೋಪಿ ರಮೇಶ್ ಕೃತ್ಯದ ನಂತರ ತಲೆ ಮರೆಸಿಕೊಂಡಿದ್ದು  ಆತನ ಪತ್ತೆಗೆ ಪೋಲೀಸರು ಶೋಧಕಾರ್ಯ ನಡೆಸಿದ್ದಾರೆ.

ಘಟನೆ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.