ನಟ ಮಂಡ್ಯ ರಮೇಶ್ ತಂದೆ ಎನ್ ಸುಬ್ರಮಣ್ಯಂ ನಿಧನ
ನಟ ಮತ್ತು ರಂಗಭೂಮಿಕಲಾವಿದರೂ ಆಗಿರುವ ಮಂಡ್ಯ ರಮೇಶ್ ಅವರ ತಂದೆ ಎನ್ ಸುಬ್ರಮಣ್ಯಂ(90) ಶುಕ್ರವಾರ ನಿಧನರಾದರು.

ನಟ ಮತ್ತು ರಂಗಭೂಮಿಕಲಾವಿದರೂ ಆಗಿರುವ ಮಂಡ್ಯ ರಮೇಶ್ ಅವರ ತಂದೆ ಎನ್ ಸುಬ್ರಮಣ್ಯಂ(90) ಶುಕ್ರವಾರ ನಿಧನರಾದರು.
ಮಂಡ್ಯ ರಮೇಶ್ ಸ್ಥಾಪಿಸಿದ ನಾಟಕ ಸಂಘದ ಅಧ್ಯಕ್ಷರೂ ಆಗಿದ್ದ ಸುಬ್ರಮಣ್ಯಂ ನಿವೃತ್ತ ಸರ್ಕಾರಿ ಅಧಿಕಾರಿಯಾಗಿದ್ದರು
40 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ಸುಬ್ರಮಣ್ಯಂ ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಸಕ್ರಿಯವಾಗಿದ್ದರು. ಮಂಡ್ಯ ಮತ್ತು ಮೈಸೂರಿನಲ್ಲಿ ಸಾಹಿತ್ಯ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಿಸುತ್ತಾ ಇದ್ದ ಅವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.
ಅವರು ನಿವೃತ್ತಿಯ ನಂತರ ಶಂಕರ ಮಠ, ಮಂಡ್ಯ, ಬಡಗನಾಡು ಸಂಸ್ಥೆ ಮತ್ತು ವಿವಿಧ ಸಾಹಿತ್ಯ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದ್ದರು
ಮೃತರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿ, ಸೊಸೆಯಂದಿರು, ಮೊಮ್ಮಕ್ಕಳಿದ್ದಾರೆ.
ಮೃತರ ಅಂತ್ಯಕ್ರಿಯೆ ಚಾಮುಂಡಿ ಬೆಟ್ತದ ತಪ್ಪಲಿನಲ್ಲಿರುವ ಶವಾಗಾರದಲ್ಲಿ ನೆರವೇರಿತು. ಮಂಡ್ಯ ರಮೇಶ್ ಅವರ ರಂಗಭೂಮಿ ಸ್ನೇಹಿತರು ಮತ್ತು ನಟಾನ ಹಿತೈಷಿಗಳು ಸುಬ್ರಮಣ್ಯಂ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


