ರಾಜ್ಯ

10 ವರ್ಷದಿಂದ ಪ್ರೀತಿಸಿದ್ದ ಹುಡುಗಿ ಸಿಕ್ಕಿಲ್ಲ, ತಂಗಿ ಮದುವೆಯೂ ರದ್ದು: ಮನನೊಂದ ಯುವಕ ಆತ್ಮಹತ್ಯೆ!

ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿಯೂ ಸಿಕ್ಕಿಲ್ಲ, ನಿಶ್ಚಯವಾಗಿದ್ದ ತಂಗಿ ಮದುವೆಯೂ ಕಾರಣಾಂತರದಿಂದ ಮುರಿದು ಹೋಯ್ತು ಎಂಬ ಕಾರಣಗಳಿಂದ ಮನನೊಂದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

10 ವರ್ಷದಿಂದ ಪ್ರೀತಿಸಿದ್ದ ಹುಡುಗಿ ಸಿಕ್ಕಿಲ್ಲ, ತಂಗಿ ಮದುವೆಯೂ ರದ್ದು: ಮನನೊಂದ ಯುವಕ ಆತ್ಮಹತ್ಯೆ!
Published On :

ಮೈಸೂರು: ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿಯೂ ಸಿಕ್ಕಿಲ್ಲ,  ನಿಶ್ಚಯವಾಗಿದ್ದ ತಂಗಿ ಮದುವೆಯೂ ಕಾರಣಾಂತರದಿಂದ ಮುರಿದು ಹೋಯ್ತು ಎಂಬ ಕಾರಣಗಳಿಂದ ಮನನೊಂದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ವಿಜಯಶ್ರೀಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಬೆಂಗಳೂರು ಮೂಲದ ಯುವಕ ಚೇತನ್ ಶರ್ಮ(29) ಆತ್ಮಹತ್ಯೆಗೆ ಶರಣಾದ ದುರ್ದೈವಿ.

ಕಂಪ್ಯೂಟರ್ ಸೈನ್ಸ್ ಶಿಪ್ಲೋಮಾ ಮಾಡಿದ್ದ ಚೇತನ್ ಕಳೆದ ಹತ್ತು ವರ್ಷಗಳಿಂಡ ಯುವತಿಯೊಬ್ಬಳನ್ನು ಪ್ರೀತಿಸಿದ್ದ.  ಆದರೆ ಇತ್ತೀಚೆಗೆ ಅವರ ಪ್ರೀತಿಯಲ್ಲಿ ಬಿರುಕುಂಟಾಗಿ ಯುವತಿ ದೂರವಾಗಿದ್ದಳು.

ಇದಲ್ಲದೆ ಚೇತನ್ ತಂಗಿಗೆ ನಿಶ್ಚಯವಾಗಿದ್ದ ಮದುವೆ ಸಹ ಕಾರಣಾಂತರಗಳಿಂದ ರದ್ದಾಗಿದೆ. ಇದರಿಂದಾಗಿ ಚೇತನ್ ಖಿನ್ನತೆಗೆ ಒಳಗಾಗಿದ್ದ. ಮತ್ತೀಗ ತಾನಿದ್ದ ಬಾಡಿಗೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ  ಶರಣಾಗಿದ್ದಾನೆ.

ಘಟನೆ ಸಂಬಂಧ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.