ಮೈಸೂರು: ಪ್ರಿ ವೆಡ್ಡಿಂಗ್ ಫೋಟೋಶೂಟ್ ದುರಂತ; ನವಜೋಡಿಯ ಸಾವಿನ ಕೊನೆಯ ಕ್ಷಣದ ಕಾರಣ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿಗಳು!
ಪ್ರಿ ವೆಡ್ಡಿಂಗ್ ಫೋಟೋಶೂಟ್ ಮೂಲಕ ತಮ್ಮ ಮಧುರ ಕ್ಷಣಗಳನ್ನು ಸೆರೆಹಿಡಿಯಲು ತೆರಳಿದ್ದ ನವಜೋಡಿ ತೆಪ್ಪ ಮುಳುಗಿ ದುರಂತ ಸಾವನ್ನಪ್ಪಿದ್ದು ಈ ದುರಂತದ ಕೊನೆಯ ಕ್ಷಣದ ಕಾರಣವನ್ನು ಪ್ರತ್ಯಕ್ಷದರ್ಶಿಗಳು ಬಿಚ್ಚಿಟ್ಟಿದ್ದಾರೆ.

ಮೈಸೂರು: ಪ್ರಿ ವೆಡ್ಡಿಂಗ್ ಫೋಟೋಶೂಟ್ ಮೂಲಕ ತಮ್ಮ ಮಧುರ ಕ್ಷಣಗಳನ್ನು ಸೆರೆಹಿಡಿಯಲು ತೆರಳಿದ್ದ ನವಜೋಡಿ ತೆಪ್ಪ ಮುಳುಗಿ ದುರಂತ ಸಾವನ್ನಪ್ಪಿದ್ದು ಈ ದುರಂತದ ಕೊನೆಯ ಕ್ಷಣದ ಕಾರಣವನ್ನು ಪ್ರತ್ಯಕ್ಷದರ್ಶಿಗಳು ಬಿಚ್ಚಿಟ್ಟಿದ್ದಾರೆ.
ನವ ಜೋಡಿ ಚಂದ್ರು ಮತ್ತು ಶಶಿಕಲಾ ಮೈಸೂರಿನ ತಲಕಾಡಿನಲ್ಲಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಲು ಮುಂದಾಗಿದ್ದು ತಲಕಾಡಿನ ಮುಡುಕುತೊರೆ ಗ್ರಾಮದಲ್ಲಿ ಹರಿಯುವ ಕಾವೇರಿ ನದಿಯಲ್ಲಿ ತೆಪ್ಪದಲ್ಲಿ ಫೋಟೋಶೂಟ್ ಮಾಡುತ್ತಿದ್ದರು. ಆದರೆ ದುರಂತ ತೆಪ್ಪ ಮುಳುಗಿ ನವ ಜೋಡಿ ದುರಂತ ಸಾವು ಕಂಡಿತ್ತು.

ಈ ಬಗ್ಗೆ ಪ್ರತ್ಯಕ್ಷದರ್ಶಿಗಳು ಪೊಲೀಸರ ಮುಂದೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದು ನವ ವಧು ಹೀಲ್ಡ್ ಚಪ್ಪಲಿ ಹಾಗೂ ಭಾರವಾದ ಉಡುಪನ್ನು ದರಿಸಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿಸಿದ್ದಾರೆ.

ಹೀಲ್ಡ್ ಚಪ್ಪಲಿ ಧರಿಸಿದ್ದ ವಧು ತೆಪ್ಪದಲ್ಲಿ ನಿಂತುಕೊಂಡು ಫೋಸ್ ನೀಡುತ್ತಿದ್ದರು. ನಂತರ ಕುಳಿತುಕೊಳ್ಳಲು ಯತ್ನಿಸಿದಾಗ ತೆಪ್ಪ ಮುಗುಚಿದೆ. ಈ ವೇಳೆ ಈಜುಬಾರದೆ ಚಂದ್ರು ಹಾಗೂ ಶಶಿಕಲಾ ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಫೋಟೋಗ್ರಾಫರ್ ಕೀರ್ತಿ ಹಾಗೂ ತೆಪ್ಪ ನಡೆಸುತ್ತಿದ್ದ ಮೂಗಪ್ಪ ವಿರುದ್ಧ ತಲಕಾಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


