ರಾಜ್ಯ

ಎಲ್.ಕೆ. ಅಡ್ವಾಣಿಗೆ 'ಭಾರತ ರತ್ನ' ನೀಡಿ: ಪ್ರಧಾನಿ ಮೋದಿಗೆ ಬಿಜೆಪಿ ಧುರೀಣ ಶಂಕರಮೂರ್ತಿ ಪತ್ರ

ಭಾರತೀಯ ಜನತಾ ಪಕ್ಷದ ಭೀಷ್ಮ ಎಂದೇ ಖ್ಯಾತವಾಗಿರುವ ಎಲ್.ಕೆ. ಅಡ್ವಾಣಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ "ಭಾರತ ರತ್ನ" ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಕರ್ನಾಟಕದ ಹಿರಿಯ ಬಿಜೆಪಿ ನಾಯಕ ಡಿ.ಎಚ್.ಶಂಕರಮೂರ್ತಿ ಒತ್ತಾಯಿಸಿದ್ದಾರೆ.

ಎಲ್.ಕೆ. ಅಡ್ವಾಣಿಗೆ 'ಭಾರತ ರತ್ನ' ನೀಡಿ: ಪ್ರಧಾನಿ ಮೋದಿಗೆ ಬಿಜೆಪಿ ಧುರೀಣ ಶಂಕರಮೂರ್ತಿ ಪತ್ರ
ಎಲ್.ಕೆ.ಅಡ್ವಾಣಿ
Published On :

ಬೆಂಗಳೂರು: ಭಾರತೀಯ ಜನತಾ ಪಕ್ಷದ ಭೀಷ್ಮ ಎಂದೇ ಖ್ಯಾತವಾಗಿರುವ ಎಲ್.ಕೆ. ಅಡ್ವಾಣಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ "ಭಾರತ ರತ್ನ" ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಕರ್ನಾಟಕದ ಹಿರಿಯ ಬಿಜೆಪಿ ನಾಯಕ ಡಿ.ಎಚ್.ಶಂಕರಮೂರ್ತಿ ಒತ್ತಾಯಿಸಿದ್ದಾರೆ. 

ಭಾನುವಾರ ಅಡ್ವಾಣಿ ತಮ್ಮ 93ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. 

"ನಿಮಗೆ ತಿಳಿದಿರುವಂತೆ, ಅಡ್ವಾಣಿ 7 ದಶಕಗಳಿಂದ ಸಾರ್ವಜನಿಕ ಜೀವನದಲ್ಲಿದ್ದಾರೆ. ಆರ್‌ಎಸ್‌ಎಸ್, ಭಾರತೀಯ ಜನಸಂಘಮತ್ತು ಬಿಜೆಪಿ ಮೂಲಕ ದೇಶಕ್ಕೆ ಅವರ ಸೇವೆ, ತ್ಯಾಗ ಮತ್ತು ಕೊಡುಗೆ ಅದ್ಭುತವಾಗಿದೆ" ಎಂದು ಮಾಜಿ ವಿಧಾನ ಪರಿಷತ್ ಅಧ್ಯಕ್ಷ ಮತ್ತು ಶಂಕರಮೂರ್ತಿ ಪ್ರಧಾನಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ. 

"ಅವರ ವೈಯಕ್ತಿಕ ಮತ್ತು ಸಾರ್ವಜನಿಕ ಜೀವನ ಯಾವ ಕಳಂಕವಿಲ್ಲದೆ ಸ್ವಚ್ಚ, ಪ್ರಾಮಾಣಿಕ, ಅತ್ಯಂತ ವಿಶ್ವಾಸಾರ್ಹತೆ ಹೊಂದಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳ ಬಗ್ಗೆ ಅಪಾರ ದ ಜ್ಞಾನ ಮತ್ತು ಅನುಭವ ಹೊಂದಿರುವ ವ್ಯಕ್ತಿ, ಅಡ್ವಾಣಿ ಸಾರ್ವಜನಿಕ ಜೀವನದಲ್ಲಿ ಅಪೂರ್ವ ವ್ಯಕ್ತಿ"

Story image

ಶಂಕರಮೂರ್ತಿಯವರ ಮನವಿಯು ರಾಜ್ಯದ ನೂರಾರು ಪಕ್ಷದ ಕಾರ್ಯಕರ್ತರ ಪರವಾಗಿಯೂ ಇದೆ ಎಂದು ಪ್ರತಿಪಾದಿಸಿದ ಅವರುಳೆದ ಐದು ದಶಕಗಳಲ್ಲಿ ಅಡ್ವಾಣಿಯವರೊಂದಿಗೆ ನಿಕಟ ಸಂಪರ್ಕದಲ್ಲಿರುವುದು ಅವರ ಅದೃಷ್ಟ ಎಂದು ಹೇಳಿದರು.

"ಕನ್ನಡಕ್ಕೆ ಅಡ್ವಾಣಿಯವರ ಸಾರ್ವಜನಿಕ ಭಾಷಣಗಳನ್ನು ಭಾಷಾಂತರಿಸುವ ಭಾಗ್ಯ ನನಗೆ ದೊರಕಿತು ಮತ್ತು ಅವರೊಂದಿಗೆ ರಾಜ್ಯ ಮತ್ತು ದೇಶಾದ್ಯಂತ ವರ್ಷಗಟ್ಟಲೆ ಪ್ರಯಾಣಿಸಿದ್ದೇನೆ"ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.