ಧಾರವಾಡ: ಕಡಿಮೆಯಾದ ಸೋಂಕಿತರ ಸಂಖ್ಯೆ; ಸುರಕ್ಷತಾ ಮಾನದಂಡಗಳನ್ನೇ ಮರೆತ ಜನ
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ದಾಖಲಾಗುತ್ತಿರುವ ಕೋವಿಡ್ ಸೋಂಕಿತಕ ಸಂಖ್ಯೆ ಕಡಿಮೆಯಾಗುತ್ತಲೇ ಜನ ಮುಂಜಾಗ್ರತಾ ಕ್ರಮಗಳನ್ನು ಮರೆತು, ಕೋವಿಡ್ ಸೋಂಕು ಇಲ್ಲವೇನೋ ಎಂಬಂತೆ ಹೆಚ್ಚಿನ ಪ್ರಮಾಣದಲ್ಲಿ ಸಂಚರಿಸುತ್ತಿದ್ದಾರೆ.

ಧಾರವಾಡ: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ದಾಖಲಾಗುತ್ತಿರುವ ಕೋವಿಡ್ ಸೋಂಕಿತಕ ಸಂಖ್ಯೆ ಕಡಿಮೆಯಾಗುತ್ತಲೇ ಜನ ಮುಂಜಾಗ್ರತಾ ಕ್ರಮಗಳನ್ನು ಮರೆತು, ಕೋವಿಡ್ ಸೋಂಕು ಇಲ್ಲವೇನೋ ಎಂಬಂತೆ ಹೆಚ್ಚಿನ ಪ್ರಮಾಣದಲ್ಲಿ ಸಂಚರಿಸುತ್ತಿದ್ದಾರೆ.
ಹೌದು.. ಕೊರೋನಾ ಸಾಂಕ್ರಾಮಿಕ ಭೀತಿಯಿಂದಾಗಿ ಜಾಗರೂಕರಾಗಿದ್ದ ಜನ ಇದೀಗ ಸೋಂಕು ಪ್ರಕರಣಗಳು ತಗ್ಗುತ್ತಿದ್ದಂತೆಯೇ ಮತ್ತೆ ತಮ್ಮ ಹಳೆಯ ವರಸೆ ಮುಂದುವರೆಸಿದ್ದಾರೆ. ರಾಜ್ಯದಲ್ಲಿ ಸೋಂಕು ಸಂಪೂರ್ಣವಾಗಿ ಮಾಯವಾಗಿದೆ ಎಂಬಂತೆ ವರ್ತಿಸುತ್ತಿದ್ದು, ಸಾಮಾಜಿಕ ಅಂತರ ಸೇರಿದಂತೆ ಎಲ್ಲ ರೀತಿಯ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನೂ ಮರೆತಿದ್ದಾರೆ.
ರಾಜ್ಯದಲ್ಲಿ ಸೋಂಕು ಆರಂಭವಾದ ಬಳಿಕ ಧಾರವಾಡದಲ್ಲಿ ಪ್ರತಿನಿತ್ಯ ಸರಾಸರಿ 300 ಹೊಸ ಸೋಂಕು ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಈ ಸಂಖ್ಯೆ ಇದೀಗ ಎರಡಂಕಿಗೆ ಇಳಿದಿದೆ. ಜಿಲ್ಲೆಯ ಆರೋಗ್ಯ ಕಾರ್ಯಕರ್ತರ ಸಾಮೂಹಿಕ ಶ್ರಮದಿಂದಾಗಿ ಇದು ಸಾಧ್ಯವಾಗಿದೆ. ಆದರೆ ಇದೀಗ ಜನರ ವರ್ತನೆಯನ್ನು ಗಮನಿಸಿದರೆ ಆರೋಗ್ಯ ಕಾರ್ಯಕರ್ತ ಶ್ರಮ ಮತ್ತು ಅಧಿಕಾರಿಗಳ ಶ್ರಮ ನೀರಿನಲ್ಲಿ ತೊಳೆದಂತಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಜಿಲ್ಲೆಯಲ್ಲಿ ಮಾಸ್ಕ್ ಧರಿಸಿವುದು ಸಾಮಾಜಿಕ ಅಂತರ ಪಾಲನೆ ನಾಪತ್ತೆಯಾಗುತ್ತಿದ್ದು, ಇದು ಮುಂದಿನ ದಿನಗಳಲ್ಲಿ ಹೊಸ ಸೋಂಕಿತರ ಸಂಖ್ಯೆಯನ್ನು ಹೆಚ್ಚಿಸುವುದರಲ್ಲಿ ಸಂಶಯವೇ ಇಲ್ಲ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಆರೋಗ್ಯ ತಜ್ಞ ಡಾ.ಎಸ್. ಆರ್. ಕೌಜಲ್ಗಿ ಅವರು, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕಡಿಮೆ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ಇದು ಒಳ್ಳೆಯದು, ಆದರೆ ಸುರಕ್ಷತಾ ಮಾನದಂಡಗಳನ್ನು ಯಾರೂ ನಿರ್ಲಕ್ಷಿಸಬಾರದು. ಹೊಸ ಸೋಂಕು ಪ್ರಕರಣಗಳು ಇನ್ನೂ ಶೂನ್ಯಕ್ಕೆ ಇಳಿದಿಲ್ಲ. ಹೀಗಾಗಿ ಸೂಚಿಸಲಾದ ಮಾರ್ಗಸೂಚಿಗಳನ್ನು ಪಾಲಿಸುವ ಅವಶ್ಯಕತೆಯಿದೆ. ವೈರಸ್ ಹರಡಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ, ಸೋಂಕನ್ನು ನಿವಾರಿಸುವುದು ದೀರ್ಘ ಮತ್ತು ಬೇಸರದ ಕೆಲಸವಾಗಿದೆ ಎಂದು ಅವರು ಎಚ್ಚರಿಸಿದ್ದಾರೆ. ಅಂತೆಯೇ ಕೆಲವು ರಾಷ್ಟ್ರಗಳಲ್ಲಿ ಹೊಸ ಸೋಂಕು ಪ್ರಕರಣಗಳು ಸಂಪೂರ್ಣವಾಗಿ ತಹಬದಿಗೆ ಬಂದಾಗ್ಯೂ ಅಲ್ಲಿ ಈಗಾಗಲೇ ಸೋಂಕಿನ ಎರಡನೇ ಅಲೆ ಭಾರಿ ಅವಾಂತರವನ್ನು ಸೃಷ್ಟಿಮಾಡಿದೆ. ಹೀಗಾಗಿ ಅದೇ ರೀತಿಯ ಪರಿಸ್ಥಿತಿ ಇಲ್ಲಿ ಸಂಭವಿಸಲು ನಾವು ಯಾವುದೇ ರೀತಿಯ ಅವಕಾಶವನ್ನು ನೀಡದೆ ವೈರಸ್ ಅನ್ನು ಸೋಲಿಸಬೇಕಾಗಿದೆ. ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮತ್ತು ಮಾಸ್ಕ್ ಗಳನ್ನು ಧರಿಸುವುದು ವೈರಸ್ ಹರಡುವುದನ್ನು ತಡೆಯಲು ನಮಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


