ಕಲ್ಯಾಣ ಕರ್ನಾಟಕಕ್ಕೆ ಕರಾಳ ಶುಕ್ರವಾರ: ಒಂದೇ ದಿನದಲ್ಲಿ 192 ಕೊರೋನಾ ಕೇಸ್
ಕಲ್ಯಾಣ ಕರ್ನಾಟಕಕ್ಕೆ ಶುಕ್ರವಾರ ಕರಾಳವಾಗಿದೆ, ರಾಜ್ಯದಲ್ಲಿ ಪತ್ತೆಯಾದ 284 ಪ್ರಕರಣಳ ಪೈಕಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ 192 ಕೇಸ್ ಪತ್ತೆಯಾಗಿವೆ.

ಕಲಬುರಗಿ: ಕಲ್ಯಾಣ ಕರ್ನಾಟಕಕ್ಕೆ ಶುಕ್ರವಾರ ಕರಾಳವಾಗಿದೆ, ರಾಜ್ಯದಲ್ಲಿ ಪತ್ತೆಯಾದ 284 ಪ್ರಕರಣಳ ಪೈಕಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ 192 ಕೇಸ್ ಪತ್ತೆಯಾಗಿವೆ.
ಒಟ್ಟಾರೆ ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ ಅತೀ ಹೆಚ್ಚು 248 ಮಂದಿ ಸೋಂಕಿತರಾಗಿದ್ದಾರೆ. ಅಂತೆಯೇ ಅತೀ ಹೆಚ್ಚು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿಗೆ ಮಹಾರಾಷ್ಟ್ರದಿಂದ ಬಂದ ವಲಸೆ ಕಾರ್ಮಿಕರಲ್ಲಿ ಗುರುವಾರ ಹೆಚ್ಚು ಸೋಂಕು ಪತ್ತೆಯಾಗಿ ಕರಾವಳಿ ಭಾಗದಲ್ಲಿ ಆತಂಕ ಮೂಡಿಸಿತ್ತು. ಶುಕ್ರವಾರ ಇದೇ ಮಹಾರಾಷ್ಟ್ರ ಮಹಾ ವಲಸೆ ಪ್ರಭಾವ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಮೇಲಾಗಿದೆ. ದಿನದ ಶೇ.75 ಸೋಂಕಿತರು ರಾಯಚೂರು (62), ಕಲಬುರಗಿ (61), ಯಾದಗಿರಿ(60) ಜಿಲ್ಲೆಗಳಲ್ಲಿಯೇ ವರದಿಯಾಗಿದ್ದು, ಎಲ್ಲರೂ ಮಹಾರಾಷ್ಟ್ರದಿಂದ ವಲಸೆ ಬಂದ ಕಾರ್ಮಿಕರು ಮತ್ತವರ ಅವರ ಕುಟುಂಬಸ್ಥರಾಗಿದ್ದಾರೆ.
ರಾಜ್ಯದ ಸೋಂಕು ಹೆಚ್ಚಳಕ್ಕೆ ಮಹಾರಾಷ್ಟ್ರ ಕೊಡುಗೆ ಮುಂದುವರಿದಿದೆ. ಶುಕ್ರವಾರ ದೃಢಪಟ್ಟ 248 ಪ್ರಕರಣದಲ್ಲಿ 227 ಮಂದಿ ಹೊರರಾಜ್ಯದಿಂದ ಕರ್ನಾಟಕಕ್ಕೆ ಬಂದವರು. ಈ ಪೈಕಿ ಮಹಾರಾಷ್ಟ್ರದಿಂದ ಅತೀ ಹೆಚ್ಚು 209 ಮಂದಿ, ನವದೆಹಲಿ 8 ಮಂದಿ, ರಾಜಸ್ಥಾನದಿಂದ 7 ಮಂದಿ, ಆಂಧ್ರಪ್ರದೇಶ ಮತ್ತು ತಮಿಳುನಾಡು, ಗುಜರಾತ್‌ನಿಂದ ತಲಾ ಒಬ್ಬರು ರಾಜ್ಯಕ್ಕೆ ಬಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


