ರಾಜ್ಯ

ಹುಬ್ಬಳ್ಳಿ: ಮದುವೆಗೆ ಅಡ್ಡಿಯಾದ ಲಾಕ್ ಡೌನ್, ನನಗೆ ಮದುವೆನೇ ಬೇಡ ಎಂದು ಕೆರೆಗೆ ಹಾರಿದ ಯುವಕ!

ಮಹಾಮಾರಿ ಕೊರೋನಾ ವೈರಸ್ ಹರಡದಂತೆ ದೇಶದಲ್ಲಿ ಲಾಕ್ ಡೌನ್ ಘೋಷಿಸಲಾಗಿತ್ತು. ಇದೇ ಲಾಕ್ ಡೌನ್ ಯುವಕನ ಬಾಳಲ್ಲಿ ಬಿರುಗಾಳಿ ಎಬ್ಬಿಸಿದೆ.

ಹುಬ್ಬಳ್ಳಿ: ಮದುವೆಗೆ ಅಡ್ಡಿಯಾದ ಲಾಕ್ ಡೌನ್, ನನಗೆ ಮದುವೆನೇ ಬೇಡ ಎಂದು ಕೆರೆಗೆ ಹಾರಿದ ಯುವಕ!
ಸಂಗ್ರಹ ಚಿತ್ರ
Published On :

ಹುಬ್ಬಳ್ಳಿ: ಮಹಾಮಾರಿ ಕೊರೋನಾ ವೈರಸ್ ಹರಡದಂತೆ ದೇಶದಲ್ಲಿ ಲಾಕ್ ಡೌನ್ ಘೋಷಿಸಲಾಗಿತ್ತು. ಇದೇ ಲಾಕ್ ಡೌನ್ ಯುವಕನ ಬಾಳಲ್ಲಿ ಬಿರುಗಾಳಿ ಎಬ್ಬಿಸಿದೆ.

ಲಾಕ್ ಡೌನ್ ನಿಂದಾಗಿ ಮದುವೆ ವಿಳಂಬ ಆಗಿದ್ದಕ್ಕೆ ಹುಬ್ಬಳ್ಳಿಯ ದೇವಾಂಗ ಪೇಟೆ ನಿವಾಸಿ 29 ವರ್ಷದ ಶರಣಪ್ಪ ಫಕ್ಕೀರಪ್ಪ ಹಡಪದ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಶರಣಪ್ಪನಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಲಾಕ್ ಡೌನ್ ವೇಳೆ ಸರಳ ಮದುವೆಗೆ ಮುಂದಾಗದ ಕುಟುಂಬ ಲಾಕ್ ಡೌನ್ ಮುಗಿದ ನಂತರ ಅದ್ಧೂರಿಯಾಗಿ ಮದುವೆ ಮಾಡಲು ನಿರ್ಧರಿಸಿದ್ದರು. 

ಆದರೆ ಪೋಷಕರು ಮದುವೆಯನ್ನು ಮುಂದಕ್ಕೆ ಹಾಕುತ್ತಿದ್ದರಿಂದ ಶರಣ್ಣಪ್ಪ ಜಗಳ ಮಾಡಿಕೊಂಡು ಮನೆ ಬಿಟ್ಟು ಹೊರಹೋಗಿದ್ದ. ಕೋಪ ಕಡಿಮೆಯಾದ ಮೇಲೆ ಮನೆಗೆ ಬರುತ್ತಾನೆ ಎಂದು ಪೋಷಕರು ಸುಮ್ಮನಿದ್ದರು. ಆದರೆ ಆತನ ಮೃತದೇಹ ಕರೆಯಲ್ಲಿ ಪತ್ತೆಯಾಗಿತ್ತು. 

ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.