ರಾಜಧಾನಿ ಎಕ್ಸ್ ಪ್ರೆಸ್ ರೈಲು ದರ ಏರಿಕೆ: ಸರ್ಕಾರದ ವಿರುದ್ಧ ಮುಗಿಬಿದ್ದ ಪ್ರತಿಪಕ್ಷಗಳು
ರಾಜ್ಯ ರಾಜಧಾನಿಗೆ ಬರುವ ಜನರು ಹೆಚ್ಚಿನ ಹಣ ನೀಡಬೇಕಾಗಿದೆ, ಹೀಗಾಗಿ ಕೆಲ ನಾಯಕರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಅಧಿಕ ಪ್ರಮಾಣದ ದರ ವಿಧಿಸಲಾಗುತ್ತಿದೆ.

ಬೆಂಗಳೂರು: ನವದೆಹಲಿಯಿಂದ ಬೆಂಗಳೂರಿಗೆ ಜನರನ್ನು ಕರೆತರತ್ತಿರುವ ಸಂಬಂಧ ವಿಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿವೆ.
ರಾಜ್ಯ ರಾಜಧಾನಿಗೆ ಬರುವ ಜನರು ಹೆಚ್ಚಿನ ಹಣ ನೀಡಬೇಕಾಗಿದೆ, ಹೀಗಾಗಿ ಕೆಲ ನಾಯಕರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಅಧಿಕ ಪ್ರಮಾಣದ ದರ ವಿಧಿಸಲಾಗುತ್ತಿದೆ. ಪ್ರತಿ ಟಿಕೆಟ್ ಗೆ 2,500, ಎರಡು ವಾರಗಳ ಕಾಲ ಕ್ವಾರಂಟೈನ್ ನಲ್ಲಿರಲು ಹೋಟೆಲ್ ಬಿಲ್ ಒಬ್ಬ ವ್ಯಕ್ತಿಗೆ ಸುಮಾರು 30 ಸಾವಿರ ರು ವರೆಗೆ ತಗಲುತ್ತದೆ.
ಕ್ವಾರಂಟೈನ್ ಗೆ ಒಳಪಡುವವರಿಗೆ ಸ್ಟಾರ್ ಹೋಟೆಲ್ ಗಳಲ್ಲಿರುವ ರೀತಿ ಬಿಲ್ ನೀಡಲಾಗುತ್ತಿದೆ, ಅವರನ್ನೆಲ್ಲಾ ಹಾಸ್ಟೆಲ್ ಗಳಲ್ಲಿ ಕ್ವಾ ರಂಟೈನ್ ಮಾಡುವಂತೆ ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತನಾಡುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ನಿಯಮಿತವಾಗಿ ರೈಲುಗಳನ್ನು ಸಂಚರಿಸಬೇಕು, 500 ರು ದರ ನೀಡುತ್ತಿದ್ದ ಜಾಗದಲ್ಲಿ 2,500 ರು ವಿಧಿಸಲಾಗುತ್ತಿದೆ, ತವರಿಗೆ ಮರಳುತ್ತಿರುವವರಿಗೆ ಸುಮಾರು 28 ಸಾವಿರ ರು ವೆಚ್ಚ ತಗಲುತ್ತಿದೆ, ಸಾಮಾನ್ಯ ಜನರಿಗೆ ಇದು ಆರ್ಥಿಕ ಹೊರೆಯಾಗಿದೆ ಎಂದು ಕಾಂಗ್ರೆಸ್ ಸಂಸದ ಬಿಕೆ ಹರಿಪ್ರಸಾದ್ ಆರೋಪಿಸಿದ್ದಾರೆ.
ವಲಸೆ ಕಾರ್ಮಿಕರ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಲಾಕ್ ಡೌನ್ ನಿಂದಾಗಿ ಕಾರ್ಮಿಕರಿಗೆ ಪ್ರಯಾಣ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


