ರಾಜ್ಯ

ಮುತ್ತಪ್ಪ ರೈ ಸಾವಿನ ಬೆನ್ನಲ್ಲೇ ಜಯರಾಜ್ ಪುತ್ರನ ಪೋಸ್ಟ್ ವೈರಲ್

ಮುತ್ತಪ್ಪ ರೈ ಸಾವಿನ ಬೆನ್ನಿಗೆ ಜಯರಾಜ್ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಮುತ್ತಪ್ಪ ರೈ ಸಾವನ್ನು ಸಂಭ್ರಮಿಸುತ್ತಿದ್ದರೆ, ಜಯರಾಜ್ ಮಗ ಅಜಿತ್ ಜಯರಾಜ್ ಫೇಸ್‌ಬುಕ್‌ನಲ್ಲಿ ರೈ ಸಾವಿನ ಕುರಿತು ವ್ಯಂಗ್ಯ ಭರಿತ ಪೋಸ್ಟ್ ಹಾಕುವ ಮೂಲಕ ತನ್ನ ತಂದೆಯನ್ನು ನೆನೆದಿದ್ದಾರೆ.

ಮುತ್ತಪ್ಪ ರೈ ಸಾವಿನ ಬೆನ್ನಲ್ಲೇ ಜಯರಾಜ್ ಪುತ್ರನ ಪೋಸ್ಟ್ ವೈರಲ್
ಅಜಿತ್ ಜಯರಾಜ್
Published On :

ಬೆಂಗಳೂರು: ಮುತ್ತಪ್ಪ ರೈ ಸಾವಿನ ಬೆನ್ನಿಗೆ ಜಯರಾಜ್ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಮುತ್ತಪ್ಪ ರೈ ಸಾವನ್ನು ಸಂಭ್ರಮಿಸುತ್ತಿದ್ದರೆ, ಜಯರಾಜ್ ಮಗ ಅಜಿತ್ ಜಯರಾಜ್ ಫೇಸ್‌ಬುಕ್‌ನಲ್ಲಿ ರೈ ಸಾವಿನ ಕುರಿತು ವ್ಯಂಗ್ಯ ಭರಿತ ಪೋಸ್ಟ್ ಹಾಕುವ ಮೂಲಕ ತನ್ನ ತಂದೆಯನ್ನು ನೆನೆದಿದ್ದಾರೆ.

ಮುತ್ತಪ್ಪ ರೈ ನಿಧನದ ಬಳಿಕ ಆತನ ಆಜನ್ಮ ವೈರಿಯಾಗಿದ್ದ ಜಯರಾಜ್ ಅವರ ಪುತ್ರ ಹಾಕಿರುವ ಈ ಪೋಸ್ಟ್ ಭಾರಿ ವೈರಲ್ ಆಗಿದೆ. ಮಾರ್ಚ್ 14 ರ ಮಧ್ಯರಾತ್ರಿ ಈ ಪೋಸ್ಟ್ ಅನ್ನು ಜಯರಾಜ್ ಪುತ್ರ ಹಾಕಿದ್ದಾರೆ.

ಡಾನ್ ಜಯರಾಜ್ ಪುತ್ರರಾಗಿರುವ ಅಜಿತ್, ಕೆಲ ಸಮಯ ಮೂರ್ಖರಿಗೆ ರಾಜ ತಾನು ರಾಜ ಯಾಕೆ ಎಂಬುದನ್ನು ನೆನಪಿಸಬೇಕಾಗುತ್ತೆ ಎಂಬ ಅರ್ಥ ಬರುವ ವಾಕ್ಯವನ್ನು ಪೋಸ್ಟ್ ಮಾಡಿದ್ದು ಜೊತೆಗೆ ಲವ್ ಯೂ ಅಪ್ಪ ಎಂದು ಬರೆದುಕೊಂಡಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪೋಸ್ಟ್‌ಗೆ ನಾನಾ ರೀತಿಯ ಕಮೆಂಟ್‌‌ಗಳನ್ನು ಹಾಕಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.