ಹೈಕೋರ್ಟ್ ಸೇರಿದಂತೆ ಎಲ್ಲಾ ನ್ಯಾಯಾಲಯಗಳು ಜೂನ್ 6 ರವರೆಗೆ ಬಂದ್
ರಾಜ್ಯ ಹೈಕೋರ್ಟ್ ನ ಎಲ್ಲಾ ನ್ಯಾಯಪೀಠಗಳು, ಜಿಲ್ಲಾ ನ್ಯಾಯಾಲಯಗಳು, ಕೌಟುಂಬಿಕ ಕೋರ್ಟ್, ಕಾರ್ಮಿಕ ಕೋರ್ಟ್ ಮತ್ತು ಕೈಗಾರಿಕೆ ನ್ಯಾಯಮಂಡಳಿಗಳು ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಜೂನ್ 6ರವರೆಗೆ ಮುಚ್ಚಿರುತ್ತವೆ.

ಬೆಂಗಳೂರು: ರಾಜ್ಯ ಹೈಕೋರ್ಟ್ ನ ಎಲ್ಲಾ ನ್ಯಾಯಪೀಠಗಳು,ಜಿಲ್ಲಾ ನ್ಯಾಯಾಲಯಗಳು, ಕೌಟುಂಬಿಕ ಕೋರ್ಟ್, ಕಾರ್ಮಿಕ ಕೋರ್ಟ್ ಮತ್ತು ಕೈಗಾರಿಕೆ ನ್ಯಾಯಮಂಡಳಿಗಳು ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಜೂನ್ 6ರವರೆಗೆ ಮುಚ್ಚಿರುತ್ತವೆ.
1963ರ ಲಿಮಿಟೇಶನ್ ಕಾಯ್ದೆಯ ಸೆಕ್ಷನ್ 4ರ ಪ್ರಕಾರ ರಾಜ್ಯದ ಎಲ್ಲಾ ಕೋರ್ಟ್ ಗಳ ಕಾರ್ಯಕಲಾಪವನ್ನು ಜೂನ್ 6ರವರೆಗೆ ಸ್ಥಗಿತಗೊಳಿಸಿ ರಾಜ್ಯ ಹೈಕೋರ್ಟ್ ಆದೇಶ ನೀಡಿದೆ.
ಈ ಹಿಂದೆ ಪ್ರಕಟಣೆ ಹೊರಡಿಸಿದ್ದ ಹೈಕೋರ್ಟ್ ಮೇ 16ರವರೆಗೆ ಅಂದರೆ ಇಂದಿನವರೆಗೆ ಮುಚ್ಚಿರುತ್ತದೆ ಎಂದು ಹೇಳಿತ್ತು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಹೊರಡಿಸಿದ್ದ ಅಧಿಸೂಚನೆಯಲ್ಲಿ ಅತ್ಯಂತ ತುರ್ತು ವಿಚಾರಣೆಗಳನ್ನು ಆಲಿಸಲು ಕೆಲವು ನ್ಯಾಯಪೀಠಗಳನ್ನು ರಚಿಸಿದ್ದರು. ಈ ನ್ಯಾಯಪೀಠಗಳು ನಾಡಿದ್ದು ಸೋಮವಾರದಿಂದ ವಾರದವರೆಗೆ ತುರ್ತು ವಿಚಾರಣೆಗಳನ್ನು ನಡೆಸಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


