ರಾಜ್ಯ

ಚಿಕ್ಕೋಡಿ: 20 ರೂ. ಆಸೆಗೆ ಬಾಲಕಿಯನ್ನು ಬಾವಿಗೆ ತಳ್ಳಿ ಕೊಂದ ಮಹಿಳೆ!

ಕೇವಲ 20 ರು. ಗೆ ಆಸೆಪಟ್ಟ ಮಹಿಳೆಯೊಬ್ಬಳು ನಾಲ್ಕು ವರ್ಷದ ಬಾಲಕಿಯನ್ನು ಬಾವಿಗೆ ತಳ್ಳಿ ಕೊಂದಿರುವ ದಾರುಣ ಘಟನೆ ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದಿದೆ.

ಚಿಕ್ಕೋಡಿ: 20 ರೂ. ಆಸೆಗೆ ಬಾಲಕಿಯನ್ನು ಬಾವಿಗೆ ತಳ್ಳಿ ಕೊಂದ ಮಹಿಳೆ!
ಸಂಗ್ರಹ ಚಿತ್ರ
Published On :

ಚಿಕ್ಕೋಡಿ: ಕೇವಲ 20 ರು. ಗೆ ಆಸೆಪಟ್ಟ ಮಹಿಳೆಯೊಬ್ಬಳು ನಾಲ್ಕು ವರ್ಷದ ಬಾಲಕಿಯನ್ನು ಬಾವಿಗೆ ತಳ್ಳಿ ಕೊಂದಿರುವ ದಾರುಣ ಘಟನೆ ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದಿದೆ.

ಚಿಕ್ಕೊಡಿ ತಾಲೂಕಿನ ಜಾಗನೂರು ಗ್ರಾಮದ ಹೊರವಲಯದಲ್ಲಿ ನಡೆದ ಘಟನೆಯಲ್ಲಿ ದಿವ್ಯಾ ವಿನೋದ ಉಗಡೆ (4) ಎಂಬ ಬಾಲಕಿ ಕೊಲೆಯಾಗಿದ್ದಾಳೆ.

ಬಾಲಕಿ ಮಹಾರಾಷ್ಟ್ರ ಮೂಲದವಳಾಗಿದ್ದು ಕಬ್ಬಿನ ಕಟಾವಿಗೆ ಬಂದಿದ್ದ ಕಾರ್ಮಿಕ ಕುಟುಂಬಕ್ಕೆ ಸೇರಿದ್ದಾಳೆ. ಆದರೆ ಕಬ್ಬಿನ ಕಟಾವು ಮುಗಿವ ವೇಳೆಗೆ ಲಾಕ್ ಡೌನ್ ಪ್ರಾರಂಭವಾಗಿದ್ದು ಕುಟುಂಬ ತಮ್ಮ ಊರಿಗೆ ಮರಳಲು ಆಗಿಲ್ಲ. ಹಾಗಾಗಿ ಜಾಗನೂರ ಗ್ರಾಮದ ಹೊರವಲಯದಲ್ಲೇ ಟೆಂಟ್ ನಲ್ಲಿ ವಾಸವಿತ್ತು.

ಇನ್ನು ಆರೋಪಿ ಮಹಿಳೆ ಪೂಜಾ ಕಾಂಬಳೆ (25) ಸಹ ಇದೇ ಕುಟುಂಬದವಳೇ ಆಗಿದ್ದು ಆಕೆ ಸಹ ಮಹಾರಾಷ್ಟ್ರದಿಂಡ ವಲಸೆ ಬಂದಿದ್ದಳು. ಎಲ್ಲರೂ ಒಟ್ತಾಗೆ ವಾಸವಿದ್ದರು. ಆದರೆ ಬುಧವಾರ ಸಂಜೆ ಬಾಲಕಿ ದಿವ್ಯಾ ತಂದೆಯಿಂದ 20 ರು. ಪಡೆದು ಅಂಗಡಿಯೊಂದರಿಂದ ಚಾಕೋಲೇಟ್ ತರಲು ಬರುತ್ತಿದ್ದಾಗ ಆರೋಪಿ . ಪೂಜಾ ಎದುರಾಗಿದ್ದಾಳೆ. ಆಕೆ ಬಾಲಕಿಯ ಕೈಲಿದ್ದ ಹಣವನ್ನು ಕಿತ್ತುಕೊಂಡಿದ್ದಾಳೆ. ಇದರಿಂದಕುಪಿತವಾದ ದಿವ್ಯಾ ಅಳಲು ಪ್ರಾರಂಭಿಸಿದ್ದಾಳೆ.  ಆಗ ಮಗು ಅತ್ತದ್ದು ಕೇಳಿ ಪೂಜಾಗೆ ಇದೆಲ್ಲಿ ದೊಡ್ಡ ಸುದ್ದಿಯಾಗುತ್ತದೆಯೋ ಎಂದು ಭಯವಾಗಿದ್ದು ಬಾಲಕಿಯನ್ನು ಅಲ್ಲೇ ಇದ್ದ ಬಾವಿಗೆ ತಳ್ಳಿದ್ದಾಳೆ. 

ಇತ್ತ ಅಂಗಡಿಗೆ ಹೋದ ಮಗು ವಾಪಾಸಾಗದ ಹಿನ್ನೆಲೆ ಬಾಲಕಿಯ ಪೋಷಕರು ಕಂಗಾಲಾಗಿ ಅಂಗಡಿಗೆ ಬಂದು ವಿಚಾರಿಸಿದಾಗ ಮಗು ಪೂಜಾಳೊಡನೆ ಹೋಗಿದ್ದು ಗೊತ್ತಾಗಿದೆ. ಆಗ ಪೋಷಕರು ಪೂಜಾಳನ್ನು ಕೇಳಿದರೆ ಆಕೆ ಸಮಂಜಸ ಉತ್ತರ ನೀಡಿಲ್ಲ. ಇದರಿಂದ ಆತಂಕಗೊಂಡ ಬಾಲಕಿಯ ಪೋಷಕರು ಪೋಲೀಸರಿಗೆ ದೂರಿದ್ದಾರೆ.

ದೂರಿನ ಹಿನ್ನೆಲೆ ಚಿಕ್ಕೋಡಿ ಪೊಲೀಸರು ತನಿಖೆ ನಡೆಸಿದಾಗ ಪೂಜಾ ನಡೆಸಿದ ಕೃತ್ಯ ಬಯಲಾಗಿದೆ. ಇದೀಗ ಆರೋಪಿಯನ್ನು  ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.