ಭಟ್ಕಳದಲ್ಲಿ ಮತ್ತೆ 7 ಹೊಸ ಕೊರೋನಾ ಪಾಸಿಟಿವ್: ಆತಂಕದಲ್ಲಿ ನಿವಾಸಿಗಳು
ಭಟ್ಕಳದಲ್ಲಿ ಮತ್ತೆ 7 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ 31 ಪ್ರಕರಣಗಳು ಪತ್ತೆಯಾದಂತಾಗಿದೆ. ಈ ಪೈಕಿ 11 ಜನ ಈಗಾಗಲೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು 20 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರವಾರ: ಭಟ್ಕಳದಲ್ಲಿ ಮತ್ತೆ 7 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ 31 ಪ್ರಕರಣಗಳು ಪತ್ತೆಯಾದಂತಾಗಿದೆ. ಈ ಪೈಕಿ 11 ಜನ ಈಗಾಗಲೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು 20 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಟ್ಕಳದಲ್ಲಿ ಶುಕ್ರವಾರವೂ ಸಹ 12 ಪ್ರಕರಣಗಳು ದಾಖಲಾಗಿತ್ತು. ಶನಿವಾರ ಪತ್ತೆಯಾದ ಏಳು ಪ್ರಕರಣಗಳಲ್ಲಿ ಇಬ್ಬರು ಮಕ್ಕಳು ಹಾಗೂ ಮೂವರು ವೃದ್ಧರೂ ಸೇರಿರುವುದು ಆತಂಕ ಹುಟ್ಟಿಸಿದೆ. ಎರಡು ವರ್ಷದ ಆರು ತಿಂಗಳ ಬಾಲಕಿ ಹಾಗೂ ಒಂದು ವರ್ಷ ಐದು ತಿಂಗಳ ಬಾಲಕ ಸೇರಿ ಒಟ್ಟು ಏಳು ಜನರಿಗೆ ಸೊಂಕು ದೃಡಪಟ್ಟಿದ್ದು ಪ್ರಾಥಮಿಕ ಸೋಂಕಿತ ವ್ಯಕ್ತಿಯ
ಕುಟುಂಬಸ್ಥರೊಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ ಎನ್ನಲಾಗಿದೆ.
ಮೇ 6 ರಂದು ಸೋಂಕು ದೃಢಪಟ್ಟ ಯುವತಿಯ (ಪಿ 659) ಪ್ರಾಥಮಿಕ ಸಂಪರ್ಕದಲ್ಲಿದ್ದ 19 ಜನರ ಪೈಕಿ 12 ಜನರಿಗೆ ಸೋಂಕು ದೃಢಪಟ್ಟಿತ್ತು. ಈ 12 ಜನರ ಸಂಪರ್ಕದಲ್ಲಿದ್ದ ಒಟ್ಟು 55 ಜನರ ಗಂಟಲು ದ್ರವದ ಮಾದರಿಯನ್ನು ಸಹ ಪರೀಕ್ಷೆಗೆ ಕಳುಹಿಸಲಾಗಿತ್ತು. ಇವರಲ್ಲಿ 7 ಮಂದಿಗೆ ಸೋಂಕು ಕಂಡುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


