ರಾಜ್ಯ

ಬೆಂಗಳೂರಲ್ಲಿ ಮತ್ತೊಬ್ಬ ರೌಡಿ ಶೀಟರ್ ಹತ್ಯೆ, ಮದ್ಯದ ಅಮಲಿನಲ್ಲಿದ್ದವನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಂದ್ರು!

ಮದ್ಯದಂಗಡಿಗಳು ತೆರೆದು ಮದ್ಯಮಾರಾಟ ಪ್ರಾರಂಭವಾದ ಬೆನ್ನಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೌಡಿ ಶೀಟರ್ ಗಳ ಪುಂಡಾಟಗಳು ಮಿತಿ ಮೀರಿದೆ. ಕುಡಿದ ಮತ್ತಿನಲ್ಲಿ ತಮ್ಮ ತಮ್ಮಲ್ಲೇ ಜಗಳಆಡಿಕೊಂಡು ಕೊಲೆಗಳಂತಹಾ ಕೃತ್ಯ ಎಸಗುತ್ತಿದ್ದಾರೆ. ಗುರುವಾರ ರಾತ್ರಿ ಬೆಂಗಳೂರು ಇನ್ನೋರ್ವ ರೌಡಿ ಶೀಟರ್ ಹತ್ಯೆಗೆ ಸಾಕ್ಷಿಯಾಗಿದೆ.

ಬೆಂಗಳೂರಲ್ಲಿ ಮತ್ತೊಬ್ಬ ರೌಡಿ ಶೀಟರ್ ಹತ್ಯೆ, ಮದ್ಯದ ಅಮಲಿನಲ್ಲಿದ್ದವನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಂದ್ರು!
ಬ್ಯಾಟರಾಯನಪುರದ ಅಶೋಕ್ ಅಲಿಯಾಸ್ ದಡಿಯಾ
Published On :

ಬೆಂಗಳೂರು: ಮದ್ಯದಂಗಡಿಗಳು ತೆರೆದು ಮದ್ಯಮಾರಾಟ ಪ್ರಾರಂಭವಾದ ಬೆನ್ನಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೌಡಿ ಶೀಟರ್ ಗಳ ಪುಂಡಾಟಗಳು ಮಿತಿ ಮೀರಿದೆ. ಕುಡಿದ ಮತ್ತಿನಲ್ಲಿ ತಮ್ಮ ತಮ್ಮಲ್ಲೇ ಜಗಳ ಆಡಿಕೊಂಡು ಕೊಲೆಗಳಂತಹಾ ಕೃತ್ಯ ಎಸಗುತ್ತಿದ್ದಾರೆ. ಗುರುವಾರ ರಾತ್ರಿ ಬೆಂಗಳೂರು ಇನ್ನೋರ್ವ ರೌಡಿ ಶೀಟರ್ ಹತ್ಯೆಗೆ ಸಾಕ್ಷಿಯಾಗಿದೆ.

ಬ್ಯಾಟರಾಯನಪುರದ ಅಶೋಕ್ ಅಲಿಯಾಸ್ ದಡಿಯಾಎಂಬಾತನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಗಳುರು ಬ್ಯಾಟರಾಯನಪುರದ ಭಾರತೀನಗರದಲ್ಲಿ ನಡೆದಿದೆ.

ಕುಡಿದ ಮತ್ತಿನಲ್ಲಿದ್ದ ಅಶೋಕ್ ನಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಲಾಗಿದೆ. ಸ್ನೇಹಿತರಿಂದಲೇ ಕೃತ್ಯ ನಡೆದಿದೆ, ಘಟನೆಗೆ ವೈಯುಕ್ತಿಕ ದ್ವೇಷವೇ ಕಾರಣ ಎಂದು ಶಂಕೆ ವ್ಯಕ್ತವಾಗಿದೆ. 

ಘಟನೆ ಸಂಬಂಧ ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳ ಶೋಧಕಾರ್ಯ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.