ರಾಜ್ಯ

ವಿದೇಶಗಳಲ್ಲಿರುವ ಭಾರತೀಯರನ್ನು ಇಂದಿನಿಂದ ಹೊತ್ತು ತರಲಿದೆ ಏರ್ ಇಂಡಿಯಾ: 14 ಸಾವಿರ ಮಂದಿ ತವರಿಗೆ!

ದೇಶೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಮತ್ತು ಅದರ ಉಪ ಸಂಸ್ಥೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಗುರುವಾರ 16 ದೇಶಗಳಲ್ಲಿರುವ ಭಾರತೀಯರನ್ನು ಹೊತ್ತು ತರಲಿದೆ.

ವಿದೇಶಗಳಲ್ಲಿರುವ ಭಾರತೀಯರನ್ನು ಇಂದಿನಿಂದ ಹೊತ್ತು ತರಲಿದೆ ಏರ್ ಇಂಡಿಯಾ: 14 ಸಾವಿರ ಮಂದಿ ತವರಿಗೆ!
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ದೇಶೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಮತ್ತು ಅದರ ಉಪ ಸಂಸ್ಥೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಗುರುವಾರ 16 ದೇಶಗಳಲ್ಲಿರುವ ಭಾರತೀಯರನ್ನು ಹೊತ್ತು ತರಲಿದೆ.

ಈ ಬಗ್ಗೆ ಮಾಹಿತಿ ನೀಡಿದ ನಾಗರಿಕ ವಿಮಾನಯಾನ ಸಂಸ್ಥೆಯ ಮಹಾ ನಿರ್ದೇಶಕ ಅರುಣ್ ಕುಮಾರ್, ನಿನ್ನೆಯೇ ಭಾರತೀಯರನ್ನು ಹೊತ್ತು ತರುವ ಕಾರ್ಯ ಆರಂಭವಾಗಬೇಕಿತ್ತು. ಆದರೆ ಎಲ್ಲಾ ಸಿಬ್ಬಂದಿಯನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಬೇಕಾಗಿದ್ದರಿಂದ ಒಂದು ದಿನ ತಡವಾಯಿತು ಎಂದರು.

ಇಂದು ನಾಲ್ಕು ವಿಮಾನಗಳು ದೆಹಲಿಯಿಂದ ಸಾನ್ ಫ್ರಾನ್ಸಿಸ್ಕೊ, ಕೊಚ್ಚಿಯಿಂದ ಅಬು ದಾಬಿ, ದೆಹಲಿಯಿಂದ ಸಿಂಗಾಪುರ ಮತ್ತು ಕಲ್ಲಿಕೋಟೆಯಿಂದ ದುಬೈಗೆ ಹಾರಾಟ ನಡೆಸಲಿವೆ. ಇಂದಿನಿಂದ ಭಾರತಕ್ಕೆ ಕರೆತರಲಾಗುತ್ತದೆ ಎಂದು ಹೇಳಿದರು.

ಒಂದು ವಾರದಲ್ಲಿ ಏರ್ ಇಂಡಿಯಾ 12 ದೇಶಗಳಿಂದ 64 ವಿಮಾನಗಳಲ್ಲಿ 14 ಸಾವಿರದ 800 ಮಂದಿಯನ್ನು ಕರೆತರಲಾಗುತ್ತದೆ ಎಂದು ಮೊನ್ನೆ ನಾಗರಿಕ ವಿಮಾನಯಾನ ಸಚಿವಾಲಯ ಹೊರಡಿಸಿರುವ ಪ್ರಕಟಣೆ ತಿಳಿಸಿದೆ.

ನಿನ್ನೆ ಏರ್ ಇಂಡಿಯಾ ಪೋರ್ಟಲ್ ಟಿಕೆಟ್ ಬುಕ್ಕಿಂಗ್ ಆರಂಭಿಸಿದೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅರುಣ್ ಕುಮಾರ್, ಭಾರತೀಯರನ್ನು ಕರೆತರುವ ಯೋಜನೆಯಲ್ಲಿ ಸ್ವಲ್ಪ ವಿಳಂಬವಾಯಿತು. ನಿನ್ನೆ ಪೈಲಟ್ ಗಳು ಮತ್ತು ವಿಮಾನದ ಸಿಬ್ಬಂದಿಯ ಕೋವಿಡ್-19 ಪರೀಕ್ಷೆಯನ್ನು ಮಾಡಬೇಕಾಯಿತು. ಅದು ಪೂರ್ಣವಾಗಿದ್ದು ನಾಳೆಯಿಂದ ಕಾರ್ಯಾಚರಣೆ ಆರಂಭವಾಗಲಿದೆ. ವಿದೇಶಗಳಿಗೆ ಹೋಗಲು ಬಯಸುವ ಭಾರತೀಯರು ಸಹ ಆಲೋಚನೆ ಮಾಡಬಹುದು ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.