'ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವುದು- ಕೊರೋನಾ ಹರಡುವುದನ್ನು ತಡೆಯುವುದು ದೊಡ್ಡ ಸವಾಲು'
ಕೊರೋನಾ ಹಿನ್ನೆಲೆಯಲ್ಲಿ ಮೇ 17 ರ ವರೆಗೆ ಲಾಕ್ ಡೌನ್ ವಿಸ್ತರಿಸಲಾಗಿದೆ. ಇದೇ ವೇಳೆ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವುದು ದೊಡ್ಡ ಸವಾಲಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿರುವ ಸಂದರ್ಶನದಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಮೇ 17 ರ ವರೆಗೆ ಲಾಕ್ ಡೌನ್ ವಿಸ್ತರಿಸಲಾಗಿದೆ. ಇದೇ ವೇಳೆ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವುದು ದೊಡ್ಡ ಸವಾಲಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿರುವ ಸಂದರ್ಶನದಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಪ್ರ: ಸದ್ಯದ ಪರಿಸ್ಥಿತಿಯಲ್ಲಿ ನೀವು ತೆಗೆದುಕೊಂಡಿರುವ ಕ್ರಮವೇನು?
ಪರಿಸ್ಥಿತಿ ಮತ್ತು ಸವಾಲನ್ನು ಜನತೆ ಒಪ್ಪಿಕೊಂಡಿದ್ದಾರೆ. ಕೊರೋನಾ ವೈರಸ್ ಹರಡದಂತೆ ತಡೆಯವ ನಿಟ್ಟಿನಲ್ಲಿ ಜನತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದಾರೆ. ಜನರ ಜವಾಬ್ದಾರಿ ಮತ್ತು ಸಹಕಾರದಿಂದ ನಮಗೆ ಆಶ್ಚರ್ಯ ಉಂಟಾಗಿದೆ. ಯುದ್ದ ಸಮಯದಲ್ಲಿೂ ಕೂಡ ಈ ರೀತಿಯ ಸಹಕಾರ ಇರಲ್ಲಿಲ್ಲ, ಲಾಕ್ ಡೌನ್ ಗೆ ಜನರು ಸ್ಪಂದಿಸಿದ ರೀತಿಅಭೂತಪೂರ್ವವಾದದ್ದು
ಪ್ರ: ಮತ್ತೆ ಸೋಂಕಿತ ಸಂಖ್ಯೆಯ ಪ್ರಮಾಣದಲ್ಲಿ ಏರಿಕೆಯಾದರೇ ನಿಭಾಯಿಸಲು ಸಿದ್ದರಿದ್ದೀರಾ?
ಹೌದು, ನಾವು ಎಲ್ಲರೀತಿಯಲ್ಲೂ ಸರ್ವ ,ಸನ್ನದ್ದರಾಗಿದ್ದೇವೆ, ಲಾಕ್‌ಡೌನ್ ಅವಧಿಯಲ್ಲಿ ತೆಗೆದುಕೊಂಡ ಹಲವಾರು ಕ್ರಮಗಳಿಗೆ ಧನ್ಯವಾದಗಳು, ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ನಾವು ಉತ್ತಮ ಸಿದ್ದರಿದ್ದೇವೆ. ಮಾದರಿಗಳನ್ನು ಪರೀಕ್ಷಿಸಲು, ವೈರಸ್ ಮತ್ತು ಅದರ ನಡವಳಿಕೆಯ ಉತ್ತಮ ತಿಳುವಳಿಕೆಗಾಗಿ ನಾವು ಹೆಚ್ಚಿನ ಪ್ರಯೋಗಾಲಯಗಳನ್ನು ಹೊಂದಿದ್ದೇವೆ.
ಪ್ರ: ಸರ್ಕಾರದ ಮುಂದೆ ಸದ್ಯ ಇರುವ ಸವಾಲುಗಳೇನು?
ಆರ್ಥಿಕತೆಯ ಪುನರುಜ್ಜೀವನ ಮತ್ತು ವೈರಸ್ ಹರಡುವುದನ್ನು ತಡೆಯುವುದು ನಮ್ಮ ಮುಂದಿರುವ ಪ್ರಮುಖ ಸವಾಲುಗಳಾಗಿವೆ, ಸಾಮಾಜಿಕ ಅಂತರ, ಹೈಜೀನ್,ಸೋಂಕು ಹರಡದಂತೆ ತಡೆಗಟ್ಟುವಲ್ಲಿ ಮುಂಜಾಗರೂಕತಾ ಕ್ರಮ ಕೈಗೊಳ್ಳುವುದು ಅವಶ್ಕವಾಗಿದೆ.
ಪ್ರ: ಲಾಕ್‌ಡೌನ್‌ಗೆ ಐಟಿ / ಬಿಟಿ ವಲಯ ಹೇಗೆ ಪ್ರತಿಕ್ರಿಯಿಸುತ್ತಿದೆ?
ವರ್ಕ್ ಫ್ರಮ್ ಹೋಮ್ ನಿಂದ ಹಲವರು ಖುಷಿಯಾಗಿದ್ದಾರೆ, ಕಚೇರಿಗಳಿಂದ ಕೆಲಸ ಮಾಡುವುದು ಕೂಡ ಕ್ರಮೇಣ ಹೆಚ್ಚಾಗುತ್ತದೆ, ಸೋಮವಾರದಿಂದ ಕಚೇರಿಯಿಂದ ಕೆಲಸ ಮಾಡುವ ಜನರ ಸಂಖ್ಯೆಯಲ್ಲಿ ಕೆಲವು ಹೆಚ್ಚಳವನ್ನು ಕಾಣಬಹುದು.ವರ್ಕ್ ಫ್ರಮ್ ಹೋಮ್ ’ಮಾದರಿ ಬಹಳ ಯಶಸ್ವಿಯಾಗಿದೆ.ಮುಂದಿನ ದಿನಗಳಲ್ಲಿ ಪರಿಸ್ಥಿತಿಯ ಬಗ್ಗೆ ನಮಗೆ ಉತ್ತಮ ತಿಳುವಳಿಕೆ ಬರಲಿದೆ.
ಪ್ರ: ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ತೀವ್ರ ಪೆಟ್ಟು ಬಿದ್ದಿದೆ. ಈ ಪರಿಸ್ಥಿತಿಯನ್ನು ನೀವು ಹೇಗೆ ನಿಭಾಯಿಸುತ್ತೀರಿ?
ಆರಂಭದಲ್ಲಿ, ಆರ್ಥಿಕತೆಯು ಸಹಜ ಸ್ಥಿತಿಗೆ ಮರಳುವವರೆಗೆ ಮತ್ತು ಬೆಳವಣಿಗೆಯ ದರ ಹೆಚ್ಚಾಗುವವರೆಗೆ ಈ ರೀತಿಯ ಆತಂಕಗಳು ಇರುತ್ತವೆ. ನಿಗಧಿತ ಸಮಯದೊಳಗೆ, ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತದೆ ಮತ್ತು ಬೆಳವಣಿಗೆಯ ದರವು ಹೆಚ್ಚುತ್ತದೆ .ಉತ್ಪಾದನಾ ವಲಯವು ಉತ್ತಮವಾಗಿ ಬೆಳೆಯಲಿದೆ. ಚೀನಾದಿಂದ ಉತ್ಪನ್ನಗಳನ್ನು ಉತ್ಪಾದಿಸಲು ಬಳಸುವ ಮತ್ತು ಅವಲಂಬನೆಯು ಪ್ರತಿ ಶೇ, 50 ರಷ್ಟು ಕಡಿಮೆಯಾಗುತ್ತದೆ, ಇದು ಉತ್ತಮ ಅವಕಾಶವಾಗಿದ್ದು, ಇದು ಬೆಳೆಯಲು ಉತ್ತಮ ಅವಕಾಶವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


