ಬೆಂಗಳೂರು: ದಂಪತಿಗಳಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಫೈನಾನ್ಶಿಯರ್ ಅರೆಸ್ಟ್
ದಂಪತಿಗಳಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿದ ಆರೋಪದ ಹಿನ್ನೆಲೆಯಲ್ಲಿ ಫೈನಾನ್ಶಿಯರ್ ಒಬ್ಬನನ್ನು ಬೆಂಗಳೂರು ವಿಜಯನಗರ ಪೋಲೀಸರು ಬಂಧಿಸಿದ್ದಾರೆ. ಫೈನಾನ್ಶಿಯರ್ ಪ್ರಕಾಶ್ ಎಂಬಾತನನ್ನು ಮಂಗಳವಾರ ಬಂಧಿಸಿದ್ದಾರೆ. ಪ್ರಕಾಶ್ ಕಿರುಕುಳ ನೀಡಿದ ಕಾರಣ ದಂಪತಿ ಗಳಾದ ಧರ್ಮರಾಜ್ (55) ಮತ್ತು ಭಾಗ್ಯ (50) ಐದು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೋಲ

ಬೆಂಗಳೂರು: ದಂಪತಿಗಳಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿದ ಆರೋಪದ ಹಿನ್ನೆಲೆಯಲ್ಲಿ ಫೈನಾನ್ಶಿಯರ್ ಒಬ್ಬನನ್ನು ಬೆಂಗಳೂರು ವಿಜಯನಗರ ಪೋಲೀಸರು ಬಂಧಿಸಿದ್ದಾರೆ. ಫೈನಾನ್ಶಿಯರ್ ಪ್ರಕಾಶ್ ಎಂಬಾತನನ್ನು ಮಂಗಳವಾರ ಬಂಧಿಸಿದ್ದಾರೆ. ಪ್ರಕಾಶ್ ಕಿರುಕುಳ ನೀಡಿದ ಕಾರಣ ದಂಪತಿ ಗಳಾದ ಧರ್ಮರಾಜ್ (55) ಮತ್ತು ಭಾಗ್ಯ (50) ಐದು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೋಲೀಸರು ತಿಳಿಸಿದರು.
ದಂಪತಿಗಳು ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದಿದ್ದು ಹೊಸಹಳ್ಳಿ ನಿವಾಸಿ ಪ್ರಕಾಶ್ ಅವರು ಚಿಟ್ ಫಂಡ್ ವ್ಯವಹಾರವನ್ನೂ ನಡೆಸುತ್ತಿದ್ದಾರೆ ಅವರೇ ತಮಗೆ ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದರೆಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಕಾಟನ್‌ಪೇಟೆಯಲ್ಲಿ ದಂಪತಿ ಬೇಕರಿ ಹೊಂದಿದ್ದು, ಆಸ್ತಿಯನ್ನು ಜಾಮೀನಿಗೆ ಇರಿಸಿದ ಬಳಿಕ 60 ಲಕ್ಷ ರೂ. ವ್ಯವಹಾರವು ನಷ್ಟವನ್ನು ಅನುಭವಿಸಿದಾಗ, ಧರ್ಮರಾಜ್ ಸಾಲವನ್ನು ಮರುಪಾವತಿಸಲು ಸಾಧ್ಯವಾಗಿರಲಿಲ್ಲ.
ಅತಿಯಾದ ಬಡ್ಡಿದರಗಳನ್ನು ವಿಧಿಸುವ ಮೂಲಕ ಪ್ರಕಾಶ್ ಅವರ ಆಸ್ತಿಯನ್ನು ತನ್ನ ಹೆಸರಿನಲ್ಲಿ ನೋಂದಾಯಿಸಲು ಒತ್ತಾಯಿಸಿದ್ದಾರೆ. ಅದಕ್ಕಾಗಿ ಪ್ರಕಶ್ ತಮ್ಮವರ ಗ್ಯಾಂಗಿನೊಡನೆ ಬೇಕರಿಯ ಮುಂದೆ ಬಂದು ದಾಂಧಲೆ ಸಹ ಮಾಡಿದ್ದರು.ಇದರಿಂದ ಬೇಸರಗೊಂಡ ದಂಪತಿಗಳು ಆತ್ಮಹತ್ಯೆಗೆ ನಿರ್ಧಾರ ತೆಗೆದುಕೊಂಡರು.
ದಂಪತಿಯ ಪುತ್ರ ದರ್ಶನ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಪ್ರಕಾಶ್‌ನನ್ನು ಬಂಧಿಸಿದ್ದಾರೆ. ಸಧ್ಯ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


