ರಾಜಧಾನಿಯ ಜನರಲ್ಲಿ ಮೂಡಿದ ನೈರ್ಮಲ್ಯ ಜಾಗೃತಿ, ನೀರಿನ ಬೇಡಿಕೆ ಹೆಚ್ಚಳ
ನಗರದಲ್ಲಿ ನೀರಿನ ಬೇಡಿಕೆ ಹೆಚ್ಚಾಗಿದೆ ಇದಕ್ಕೆ ಬೇಸಿಗೆ ಮಾತ್ರವೇ ಕಾರಣವಲ್ಲ ಬದಲಾಗಿ ಕೊರೋನಾವೈರಸ್ ಭಯದಿಂದ ಜನರು ಆಗಾಗ ಕೈತೊಳೆಯುವ ಹೆಚ್ಚು ನೈರ್ಮಲ್ಯ ಜಾಗೃತಿಯನ್ನು ಅಳವಡಿಸಿಕೊಂಡಿರುವುದೂ ಕಾರಣವಾಗಿದೆ.

ಬೆಂಗಳೂರು: ನಗರದಲ್ಲಿ ನೀರಿನ ಬೇಡಿಕೆ ಹೆಚ್ಚಾಗಿದೆ ಇದಕ್ಕೆ ಬೇಸಿಗೆ ಮಾತ್ರವೇ ಕಾರಣವಲ್ಲ ಬದಲಾಗಿ ಕೊರೋನಾವೈರಸ್ ಭಯದಿಂದ ಜನರು ಆಗಾಗ ಕೈತೊಳೆಯುವ ಹೆಚ್ಚು ನೈರ್ಮಲ್ಯ ಜಾಗೃತಿಯನ್ನು ಅಳವಡಿಸಿಕೊಂಡಿರುವುದೂ ಕಾರಣವಾಗಿದೆ.
ಈ ನಡುವೆ ವಾಟರ್ ಟ್ಯಾಂಕರ್ ಸರಬರಾಜುದಾರರು ಹೆಚ್ಚಿನ ದರವನ್ನು ವಿಧಿಸುವ ಮೂಲಕ ತಾವು ಲಾಭ ಮಾಡಿಕೊಳ್ಳುತ್ತಿದ್ದಾರೆ.ಕೆಲವು ಸ್ಥಳಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಅವರಿಗೆ ಕಷ್ಟವಾಗುತ್ತಿದೆ. "ಕೆಲವು ಪ್ರದೇಶಗಳಲ್ಲಿ, ನಾವು ಬೇಡಿಕೆಯನ್ನು ಪೂರೈಸಲು ಸಮರ್ಥರಾಗಿದ್ದೇವೆ ಆದರೆ ಇನ್ನೂ ಕೆಲವೆಡೆ ಇದು ಕಠಿಣವಾಗಿದೆ. ಆದ್ದರಿಂದ ನಾವು ದಿನಕ್ಕೆ 2-3 ಟ್ಯಾಂಕರ್ ನೀರಿನಿಂದ ಅಪಾರ್ಟ್ಮೆಂಟ್ ಸಂಕೀರ್ಣಕ್ಕೆ ಸರಬರಾಜನ್ನು ಕಡಿಮೆ ಮಾಡುತ್ತಿದ್ದೇವೆ" ಎಂದು ಜಗದಿಶ್ ವಾಟರ್ ಟ್ಯಾಂಕರ್ ಸರಬರಾಜುದಾರರು ಹೇಳಿದರು.
ಪೂರ್ವ ಬೆಂಗಳೂರು ನ ವಾಟರ್ ಟ್ಯಾಂಕರ್‌ಗಳ ಸಂಘದ ಅಧ್ಯಕ್ಷ ಬಿಎಚ್ ಹರೀಶ್ ಮಾತನಾಡಿ ಪ್ರದೇಶದಲ್ಲಿ ಕಾವೇರಿ ನೀರು ಲಭ್ಯವಿಲ್ಲ, ಆದ್ದರಿಂದ ಜನರು ಬೋರ್‌ವೆಲ್ ನೀರನ್ನೇ ಬಳಸುವುದು ಅನಿವಾರ್ಯವಿದೆ. " ಎಂದರು.
ಜಲಮಂಡಳಿ ಅಧಿಕಾರಿಗಳು ಹೇಳಿದಂತೆ “ಬಳಕೆ ಹೆಚ್ಚಾಗಿದ್ದರೂ, ನಗರಕ್ಕೆ ಕೇವಲ 1,450 ಎಂಎಲ್‌ಡಿ ಮಾತ್ರ ಸರಬರಾಜು ಮಾಡಲಾಗುತ್ತಿದೆ, ಇದರಲ್ಲಿ 50 ಎಂಎಲ್‌ಡಿ ನೀರನ್ನು 110 ಹಳ್ಳಿಗಳಿಗೆ ಸರಬರಾಜು ಮಾಡಲಾಗುತ್ತದೆ. 20-40% ಸೋರಿಕೆ ಸೋರಿಕೆ ಆಗುತ್ತದೆ. ಹಾಗಾಗಿ ನೀರಿನ ಪೂರೈಕೆ ಮತ್ತಷ್ಟು ಕಡಿಮೆಯಾಗುತ್ತದೆ. ನಾವು ಪ್ರತಿದಿನ ನೀರನ್ನು ಪೂರೈಸುವುದಿಲ್ಲ, ಆದ್ದರಿಂದ ಎಷ್ಟು ಬೇಡಿಕೆ ಹೆಚ್ಚಾಗಿದೆ ಎಂದು ತಿಳಿದಿರುವುದಿಲ್ಲ. 2-3 ದಿನಗಳಿಗೊಮ್ಮೆ ನೀರನ್ನು ಸರಬರಾಜು ಮಾಡಲಾಗುತ್ತದೆ ಮತ್ತು ಅದನ್ನು ನೇರವಾಗಿ ಜನರೇ ಸಂಗ್ರಹಿಸುತ್ತಾರೆ.ಹಾಗಾಗಿ ನೀರಿನ ಬೇಡಿಕೆ ಹೆಚ್ಚಳದ ಬಗೆಗೆ ನಮಗೆ ಮಾಹಿತಿ ಸಿಗುತ್ತಿಲ್ಲ"
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


