ರಾಜ್ಯ

ಕೊರೋನಾ ಬಗ್ಗೆ ಆರೋಗ್ಯ ಇಲಾಖೆ ಸಹಾಯವಾಣಿಯಲ್ಲೇ ದಿವ್ಯ ನಿರ್ಲಕ್ಷ್ಯ: 104ಕ್ಕೆ ಕರೆ ಮಾಡಿದರೆ ಉತ್ತರವೇ ಇಲ್ಲ!

ಇದು ನೆರೆಮನೆಯ ಒಬ್ಬರಿಗೆ ಕೊರೋನಾ ಶಂಕೆಯಿರಬಹುದು ಎಂದು ರಾಜ್ಯ ಸರ್ಕಾರದ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಿದ ವ್ಯಕ್ತಿಯ ಸ್ವಂತ ಅನುಭವ. ಈ ತುರ್ತು ಸಂದರ್ಭದಲ್ಲಿ ಸರ್ಕಾರದ ಆರೋಗ್ಯ ಇಲಾಖೆ ಹೆಚ್ಚು ಜಾಗ್ರತವಾಗಿರಬೇಕಾದ ಹೊತ್ತಿನಲ್ಲಿ ದಿವ್ಯ ನಿರ್ಲಕ್ಷ್ಯ ಹೊಂದಿದೆ ಎನ್ನಬಹುದು.

ಕೊರೋನಾ ಬಗ್ಗೆ ಆರೋಗ್ಯ ಇಲಾಖೆ ಸಹಾಯವಾಣಿಯಲ್ಲೇ ದಿವ್ಯ ನಿರ್ಲಕ್ಷ್ಯ: 104ಕ್ಕೆ ಕರೆ ಮಾಡಿದರೆ ಉತ್ತರವೇ ಇಲ್ಲ!
Published On :

ಬೆಂಗಳೂರು:ಇದು ನೆರೆಮನೆಯ ಒಬ್ಬರಿಗೆ ಕೊರೋನಾ ಶಂಕೆಯಿರಬಹುದು ಎಂದು ರಾಜ್ಯ ಸರ್ಕಾರದ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಿದ ವ್ಯಕ್ತಿಯ ಸ್ವಂತ ಅನುಭವ. ಈ ತುರ್ತು ಸಂದರ್ಭದಲ್ಲಿ ಸರ್ಕಾರದ ಆರೋಗ್ಯ ಇಲಾಖೆ ಹೆಚ್ಚು ಜಾಗ್ರತವಾಗಿರಬೇಕಾದ ಹೊತ್ತಿನಲ್ಲಿ ದಿವ್ಯ ನಿರ್ಲಕ್ಷ್ಯ ಹೊಂದಿದೆ ಎನ್ನಬಹುದು. 

ಕೊರೋನಾ ವೈರಸ್ ನ ಮುಂದಿನ ಪರಿಸ್ಥಿತಿಗಳನ್ನು ಎದುರಿಸಲು ಬೆಂಗಳೂರು ಹೇಗೆ ಸಜ್ಜಾಗಿದೆ? ಬೆಂಗಳೂರು ನಗರವಾಸಿಗಳು ಹೇಳುವ ಪ್ರಕಾರ ಸಾಂಕ್ರಾಮಿಕವನ್ನು ತಡೆಗಟ್ಟಲು ಏನೇನು ಕ್ರಮ ಕೈಗೊಳ್ಳುತ್ತಿಲ್ಲ ಎನ್ನುತ್ತಾರೆ ನಗರದ ನಿವಾಸಿಯೊಬ್ಬರು. 

ನಗರದ ಬ್ರೂಕ್ ಫೀಲ್ಡ್ ಎಇಸಿಎಸ್ ಲೇ ಔಟ್ ನಿವಾಸಿ ಸಿಜೊ ಸೆಬಾಸ್ಟಿಯನ್,  ದುಬೈಯಿಂದ ಬಂದ ತಮ್ಮ ನೆರೆಮನೆಯ ವ್ಯಕ್ತಿ ಮನೆಯಲ್ಲಿ ಪ್ರತ್ಯೇಕವಾಗಿ ಕೂರುವ ಬದಲು ಮುಕ್ತವಾಗಿ ಹೊರಗೆ ಓಡಾಡುತ್ತಿರುವುದನ್ನು ಕಂಡು ಕಳೆದ ಭಾನುವಾರ 104 ಸಂಖ್ಯೆಗೆ ಕರೆ ಮಾಡಿದರು.

ಆಗ ಆರೋಗ್ಯ ಸಹಾಯವಾಣಿಯಿಂದ ಸಹಾಯಕ ಸಿಬ್ಬಂದಿ, ನಮ್ಮಲ್ಲಿ ಔಟ್ ಗೋಯಿಂಗ್ ಕಾಲ್ ಸೌಲಭ್ಯವಿಲ್ಲ, ಹೀಗಾಗಿ ದುಬೈಯಿಂದ ಬಂದ ವ್ಯಕ್ತಿಗೆ ಕರೆ ಮಾಡಲು ಸಾಧ್ಯವಿಲ್ಲ ಎಂದರು. 104 ಸಹಾಯವಾಣಿಯ ಸಿಬ್ಬಂದಿಯಂತೆ ನಟಿಸಿ ಮನೆಯಲ್ಲಿಯೇ ಉಳಿದುಕೊಳ್ಳುವಂತೆ ಅವರಿಗೆ ನೀವೇ ಹೇಳಿ ಎಂದು ಸಿಬ್ಬಂದಿ ಸೆಬಾಸ್ಟಿಯನ್ ಗೆ ಸಲಹೆ ನೀಡಿದರಂತೆ.


ಆದರೆ ಸೆಬಾಸ್ಟಿಯನ್ ಅವರು ಒತ್ತಾಯಪಡಿಸಿದಾಗ, ದುಬೈಯಿಂದ ಬಂದ ವ್ಯಕ್ತಿಯ ಸಂಪರ್ಕ ಸಂಖ್ಯೆಯನ್ನು ಪಡೆದುಕೊಂಡು ಕರೆ ಮಾಡುತ್ತೇವೆ ಎಂದು ಆರೋಗ್ಯವಾಣಿ ಸಿಬ್ಬಂದಿ ಹೇಳಿದರಂತೆ. ಆದರೆ ಅವರು ಕರೆ ಮಾಡಿ ಆ ವ್ಯಕ್ತಿಗೆ ಹೇಳುತ್ತಾರೆ ಎಂಬ ನಂಬಿಕೆ, ಗ್ಯಾರಂಟಿ ಸೆಬಾಸ್ಟಿಯನ್ ಗೆ ಒಂಚೂರೂ ಇಲ್ಲ. ಇನ್ನು ಆ ಸಿಬ್ಬಂದಿಯಲ್ಲಿ ಬೇರೆ ಆರೋಗ್ಯಾಧಿಕಾರಿಯ ಸಂಪರ್ಕ ಸಂಖ್ಯೆ ಕೇಳಿದರೆ ಇಲ್ಲ ಎಂಬ ಉತ್ತರ.

ಹೀಗೆ ಕೊರೋನಾ ವೈರಾಣು ಶಂಕಿತರ ಬಗ್ಗೆ ಮಾಹಿತಿ ನೀಡಲು, ಆರೋಗ್ಯ ಇಲಾಖೆಯಿಂದ ಸಂಬಂಧಪಟ್ಟ ಮಾಹಿತಿ ಪಡೆಯಲು ಸೂಕ್ತ ವ್ಯವಸ್ಥೆಯೇ ಇಲ್ಲ ಎಂದು ಸೆಬಾಸ್ಟಿಯನ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದರು. ಇಂತಹ ಅನುಭವ ಹಲವರಿಗೆ ಆಗಿರಬಹುದು. 


ಈ ವಿಷಯವನ್ನು ಪತ್ರಿಕೆ ಪ್ರತಿನಿಧಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಪಂಕಜ್ ಪಾಂಡೆ ಅವರ ಗಮನಕ್ಕೆ ತಂದಾಗ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.