ದಾವಣಗೆರೆ: ಕೊರೋನಾ ಲಸಿಕೆ ಕಾರ್ಯಕ್ರಮ ನಿಲ್ಲಿಸಿದ ಪೋಲೀಸರು!
ನಗರದ ಈಶ್ವರಮ್ಮ ಸ್ಕೂಲ್ ಆಫ್ ಪಿಜೆ ಎಕ್ಸ್ಟೆನ್ಷನ್ ನಲ್ಲಿ ಮಾರಕ ಕೊರೋನಾವೈರಸ್ ಗಾಗಿ ಲಸಿಕೆ ಕಾರ್ಯಕ್ರಮದ ಹೆಸರಲ್ಲಿ ಸಾರ್ವಜನಿಕರರಿಗೆ ಲಸಿಕೆ ವಿತರಣೆ ನಡೆಸುವುದನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಪೊಲೀಸರು ತಡೆಹಿಡಿದ್ದಾರೆ.

ದಾವಣಗೆರೆ: ನಗರದ ಈಶ್ವರಮ್ಮ ಸ್ಕೂಲ್ ಆಫ್ ಪಿಜೆ ಎಕ್ಸ್ಟೆನ್ಷನ್ ನಲ್ಲಿ ಮಾರಕ ಕೊರೋನಾವೈರಸ್ ಗಾಗಿ ಲಸಿಕೆ ಕಾರ್ಯಕ್ರಮದ ಹೆಸರಲ್ಲಿ ಸಾರ್ವಜನಿಕರರಿಗೆ ಲಸಿಕೆ ವಿತರಣೆ ನಡೆಸುವುದನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಪೊಲೀಸರು ತಡೆಹಿಡಿದ್ದಾರೆ.
ಶನಿವಾರ ದಾವಣಗೆರೆ ಪಿಜೆ ಎಕ್ಸ್ಟೆನ್ಷನ್ ರಾಘವೇಂದ್ರ ಸ್ವಾಮಿ ಮಠದ ಬಳಿ ಇರುವ ಶಾಲೆಯಲ್ಲಿ ಕೊರೋನಾವೈರಸ್ ತಡೆಗಾಗಿ ಹೋಮಿಯೋಪತಿ ಹನಿಗಳನ್ನು ಸಾರ್ವಜನಿಕರಿಗೆ ಲಸಿಕೆ ರೂಪದಲ್ಲಿ ವಿತರಿಸುವ ಕಾರ್ಯಕ್ರಮವಿತ್ತು. ಈ ಕುರಿತು ಮಾಹಿತಿ ಪಡೆದ ಡಿಎಚ್‌ಒ ಡಾ.ರಾಘವೇಂದ್ರ ಸ್ವಾಮಿ.ತಕ್ಷಣ ಸ್ಥಳಕ್ಕೆ ತೆರಳಿ ಅದನ್ನು ನಿಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಆದರೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸುವ ಹೊತ್ತಿಗಾಗಲೇ ಅನೇಕರು ಈ ಹೋಮಿಯೋಪತಿ ಔಷದಿ ಸೇವನೆ ಮಾಡಿದ್ದರು.
'ಈ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ನಿಲ್ಲಿಸುವಲ್ಲಿ ನಾವು ತೊಂದರೆಗಅನುಭವಿಸಿದ್ದೆವು. ಆದರೆ ಅಂತಿಮವಾಗಿ ವ್ಯಾಕ್ಸಿನೇಷನ್ ಕಾರ್ಯಕ್ರಮ ನಿಲ್ಲಿಸಿದ್ದಾರೆ. ನಾವು ಕಾರ್ಯಕ್ರಮಕ್ಕಾಗಿ ಕೊಠಡಿ ನೀಡಿರುವ ಶಾಲಾ ಮುಖ್ಯೋಪಾದ್ಯಾಯರ ವಿರುದ್ಧ ಕ್ರಮ ಜರುಗಿಸುವುದಾಗಿ ಬೆದರಿಸಿದಾಗ ಅವರು ಸ್ಥಳದಿಂದ ಹೊರನಡೆದರು." ಡಾ.ರಾಘವೇಂದ್ರಸ್ವಾಮಿ ಹೇಳಿದ್ದಾರೆ.
'ಲಸಿಕೆ ಹಾಕಿದ ವ್ಯಕ್ತಿಗಳು ಮತ್ತು ಕಾರ್ಯಕ್ರಮಕ್ಕಾಗಿ ಕಟ್ಟಡವನ್ನು ನೀಡಿದ ದ ಶಾಲಾ ಅಧಿಕಾರಿಗಳ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ, ಜನರು ಕೊರೋನಾ ಲಸಿಕೆ ಬಗೆಗೆ ಸುಳ್ಳು ವದಂತಿಗಳನ್ನು ನಂಬಬಾರದು" ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


