ಕೊರೋನಾ ಬರಬಾರದು ಅಂದ್ರೆ ಈರುಳ್ಳಿ ತಿನ್ನಿ ಎಂದ ಸಿಎಂ ಇಬ್ರಾಹಿಂ!
ನಿಮಗೆ ಕೊರೋನಾ ಮಾರಕ ರೋಗ ಬರಬಾರದು ಅಂತಿದ್ರೆ ದಿನಕ್ಕೆ ಮೂರು ಹೊತ್ತು ಈರುಳ್ಳಿ ತಿನ್ನಿ! ಹೌದು ಈರುಳ್ಳಿ ತಿನ್ನೋದ್ರಿಂದ ಕೊರೋನಾ ಬರಲ್ಲ ಎಂದು ಹೇಳಿದ್ದು ಮಾಜಿ ಸಚಿವ ಸಿಎಂ ಇಬ್ರಾಹಿಂ!

ಬೆಂಗಳೂರು: ನಿಮಗೆ ಕೊರೋನಾ ಮಾರಕ ರೋಗ ಬರಬಾರದು ಅಂತಿದ್ರೆ ದಿನಕ್ಕೆ ಮೂರು ಹೊತ್ತು ಈರುಳ್ಳಿ ತಿನ್ನಿ! ಹೌದು ಈರುಳ್ಳಿ ತಿನ್ನೋದ್ರಿಂದ ಕೊರೋನಾ ಬರಲ್ಲ ಎಂದು ಹೇಳಿದ್ದು ಮಾಜಿ ಸಚಿವ ಸಿಎಂ ಇಬ್ರಾಹಿಂ!
ಕೊರೋನಾ ವೈರಸ್ ರಾಜ್ಯದಾದ್ಯಂತ ಜನರಲ್ಲಿ ಭೀತಿ ಹುಟ್ಟಿಸಿರುವ ನಡುವೆಯೇ ಮಾಜಿ ಸಚಿವ ಇಬ್ರಾಹಿಂ ರೋಗಕ್ಕೆ ನಾಟಿ ಔಷಧಿಯ ಸಲಹೆ ಕೊಟ್ಟಿದ್ದಾರೆ. ದಿನಕ್ಕೆ ಮೂರು ಬಾರಿ ಈರುಳ್ಳಿಗೆ ಉಪ್ಪು ಸೇರಿಸಿ ತಿಂದರೆ ಕೊರೋನಾ ಬರಲ್ಲ ಎಂದು ಇಬ್ರಾಹಿಂ ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ಕೊರೋನಾ ಹಾವಳಿ ತಡೆಯಲು ಸರ್ಕಾರ ಗಂಭೀರ ಕ್ರಮ ತೆಗೆದುಕೊಳ್ಳಬೇಕು. ನಮ್ಮಲ್ಲಿ ಕೊರೋನಾ ತಪಾಸಣೆ ಕೇಂದ್ರಗಳಿಲ್ಲ. ಚೀನಾ ಸೇರಿ ಅನೇಕ ದೇಶದಲ್ಲಿರುವಂತೆ ತಪಾಸಣಾ ಕೇಂದ್ರ ಸ್ಥಾಪನೆ ಆಗಬೇಕು. ರೋಗಿಯ ರಕ್ತ ಪರೀಕ್ಷೆ ನಡೆಸಿ ಕೊರೋನಾ ಪತ್ತೆಹಚ್ಚುವುದರಲ್ಲಿ ಆತ ಸಾವನ್ನಪ್ಪಿರುತ್ತಾನೆ ಎಂದು ಮಾಜಿ ಸಚಿವರು ಅಭಿಪ್ರಾಯ ಪಟ್ಟರು.
ಇಷ್ಟೇ ಅಲ್ಲದೆ ದೇಶದ ಆರ್ಥಿಕತೆಗೆ ಸಹ ಕೊರೋನಾ ವೈರಸ್ ದಾಳಿ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಕಾಳಜಿವಹಿಸಬೇಕು ಎಂದು ಇಬ್ರಾಹಿಂ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


