ಬನ್ನೇರುಘಟ್ಟ: ಅಮ್ಮನಿಂದ ಬೇರ್ಪಟ್ಟಿರುವ ಮರಿಯಾನೆ ತಾಯಿಗಾಗಿ ಹುಡುಕಾಟ
ತಾಯಿಯಿಂದ ಬೇರ್ಪಟ್ಟು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಆರೈಕೆಯಲ್ಲಿರುವ ಮರಿಯಾನೆಯನ್ನು ಮರಳಿ ತಾಯಿ ಜೊತೆಗೂಡಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಮುಖ್ಯ ಅರಣ್ಯ ಸಂರಕ್ಷಕ ಪುಣತಿ ಶ್ರೀಧರ್ ತಿಳಿಸಿದ್ದಾರೆ.

ಬೆಂಗಳೂರು: ತಾಯಿಯಿಂದ ಬೇರ್ಪಟ್ಟು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಆರೈಕೆಯಲ್ಲಿರುವ ಮರಿಯಾನೆಯನ್ನು ಮರಳಿ ತಾಯಿ ಜೊತೆಗೂಡಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಮುಖ್ಯ ಅರಣ್ಯ ಸಂರಕ್ಷಕ ಪುಣತಿ ಶ್ರೀಧರ್ ತಿಳಿಸಿದ್ದಾರೆ.
ತಾಯಿಯಿಂದ ಬೇರೆಯಾಗಿರು ಮರಿಯಾನೆ ಪತ್ತೆಯಾದಾಗಿನಿಂದ ತಾಯಿಯಾನೆಗಾಗಿ ಶೋಧ ನಡೆಯುತ್ತಿದೆ. ಮರಿಯಾನೆ ಕೂಡ ದಣಿದಿದೆ ಎಂದು ಅವರು ಹೇಳಿದ್ದಾರೆ.
‘ಬೇರ್ಪಡೆಯಾಗಿರುವ ತಾಯಿ ಮತ್ತು ಮರಿಯನ್ನು ಸೇರ್ಪಡೆ ಮಾಡುವುದು ಅತ್ಯಂತ ಮುಖ್ಯ. ಇದೊಂದು ಮಾನವೀಯ ಕಾರ್ಯ. ಹಾಗಾಗಿ ಪರಿಸ್ಥಿತಿಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ವೈದ್ಯರು ಮತ್ತು ತಜ್ಞರ ಸಲಹೆಯಂತೆ ಕ್ರಮ ಕೈಗೊಳ್ಳಲಾಗುವುದು. ಬೆಳಗಿನ ಜಾವ 3 ರಿಂದ 4ರ ಸಮಯದಲ್ಲಿ ಆನೆಗಳ ಜಾಡು ಹಿಡಿದು ಮರಿಯನ್ನು ಸೇರ್ಪಡೆ ಮಾಡಲು ಕಾರ್ಯಾಚರಣೆ ಕೈಗೊಳ್ಳುವಂತೆ ತಿಳಿಸಲಾಗಿದೆ’ ಎಂದರು.
‘ಕಾರ್ಯಾಚರಣೆಯಲ್ಲಿ ತಾಯಿ ಮತ್ತು ಮರಿಯು ಜೊತೆಯಾದರೆ ಮರುಜನ್ಮ ಸಿಕ್ಕಿದಂತಾಗುತ್ತದೆ. ಹಾಗಾಗಿ ಆನೆ ಮರಿ ದೊರೆತ ಸ್ಥಳದಲ್ಲಿ ಕಾರ್ಯಾಚರಣೆ ಕೈಗೊಳ್ಳುವಂತೆ ತಿಳಿಸಲಾಗಿದೆ. ತಾಯಿಯಾನೆ ಸತ್ತಿಲ್ಲ, ಬದಲಾಗಿ ಪ್ರಸವದ ದಣಿವರಿಕೆಯಿದಂ ಬೇರೆಲ್ಲೋ ಇರಬಹುದು ಎಂದು ತಿಳಿಸಿದ್ದಾರೆ.
ಇದೇ ವೇಳೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ದಿನೇಶ್ ಸಿಂಗ್ ಮರಿಯಾನೆಯನ್ನು ದತ್ತು ಪಡೆದಿದ್ದು, ಸರಸ್ವತಿ ಎಂದು ನಾಮಕರಣ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


